ಹಿಂಗಣಿ ಗ್ರಾಮದಲ್ಲಿ ಬಿಜೆಪಿ ಪ್ರಚಾರ..!
ಇಂಡಿ : ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕಾಸುಗೌಡ ಬಿರಾದರ್ ಗ್ರಾಮದಲ್ಲಿ ಹಿಂಗಣಿ ಗ್ರಾಮದಲ್ಲಿ ಪ್ರಚಾರ ಮಾಡಿ ಮತಯಾಚನೆ ಮಾಡಿದರು.
ಪ್ರಚಾರಾರ್ಥವಾಗಿ ಗ್ರಾಮದಲ್ಲಿ ಸಾರ್ವಜನಿಕವಾಗಿ ಉದ್ದೇಶಿಸಿ ಮಾತಾನಾಡಿದವರು, ಎಸಿ ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಒದಗಿಸುವ ಜೊತೆಗೆ ವಿವಿಧ ಸಮುದಾಯಗಳಿಗೆ ಮೀಸಲಾತಿ ಒದಗಿಸುವ ಹಾಗೂ ಸುಮಾರು ೪ ದಶಕದವರೆಗೆ ಹೋರಾಟ ಮಾಡುತ್ತಿರುವ ತಳವಾರ ಮತ್ತು ಪರಿವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲಾಗಿದೆ. ಅದಕ್ಕೆ ಶೋಷಿತರ ಬಡವರ ನೊಂದವರ ಕಲ್ಯಾಣಕ್ಕಾಗಿ ಬಿಜೆಪಿ ಪಕ್ಷವಿದೆ. ನಿಮ್ಮ ಮತ ದೇಶದ ಹಿತಕ್ಕಾಗಿ ಬಿಜೆಪಿ ಪಕ್ಷ ನೀಡಿ ನನ್ನನ್ನು ಪ್ರಚಂಡ ಬಹುಮತ ದಿಂದ ಆಯ್ಕೆ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹನುಮಂತರಾಯಗೌಡ ಪಾಟೀಲ್, ಶಿಲವಂತ ಉಮರಾಣಿ, ರಾಘವೇಂದ್ರ ಕಾಪ್ಸ, ಚೆನ್ನು ಗೌಡ ಪಾಟೀಲ್, ಅಪ್ಪು ಗೌಡ ಪಾಟೀಲ, ಶ್ರೀಮಂತ ಮೊಗಲಾಯಿ, ಬತ್ತು ಸಾವುಕಾರ,ಗೀರಮಲ್ಲ ಬಿರಾದಾರ, ರೇವಣಸಿದ್ಧ ಮೇಲಿನ್ಮನಿ, ಅನಿಲಗೌಡ ಪಾಟೀಲ್, ಸೋಮು ದೇವರ, ವಿಠ್ಠಲ್ ಕಾಗರ, ಸುನಿಲಗೌಡ ಬಿರಾದಾರ, ದಸರಥ ಕೋಟಿ, ವೆಂಕಟೇಶ್ ಕುಲಕರ್ಣಿ, ಅಜಯ್ ಕುಮಾರ್ ಪಟ್ಟಣಶೆಟ್ಟಿ, ಮಲ್ಲು ವಾಲಿಕಾರ, ರಾಜಶೇಖರ್ ಯರಗಲ್ ಕಾರ್ಯಕರ್ತರು ಮುಖಂಡರು ಪ್ರಮುಖರು ಉಪಸತಿದ್ದರು.