VOJ ನ್ಯೂಸ್ ಡೆಸ್ಕ್: ಉದ್ಯಮಿಯಾಗಿದ್ದ ಸೋನಿಯಾ ಗಾಂಧಿ ಅವರ ಅಳಿಯ ರಾಜಕಾರಣದತ್ತ ದಾಪುಗಾಲು ಇಡಲು ಮುಂದಾಗಿದ್ದಾರೆ. ದೇಶದ ಜನರು ಒಲವು ತೋರಿದರೆ ರಾಜಕೀಯ ಪ್ರವೇಶ ಮಾಡುವೆ ಎಂದು ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಹೇಳಿದ್ದಾರೆ.
ಉದ್ಯಮಿಯಾಗಿ ಗುರುತಿಸಿಕೊಂಡ ವಾದ್ರಾ ಅವರು ಇದೀಗ ರಾಜಕೀಯದಲ್ಲಿ ಸಕ್ರೀಯರಾಗುವ ಬಯಕೆಯನ್ನು ಹೊಂದಿದ್ದಾರೆ. ಜನರು ಬದಲಾವಣೆಗಾಗಿ ನನ್ನ ರಾಜಕೀಯ ಪ್ರವೇಶ ಸ್ವಾಗತಿಸಿದರೆ ಅದಕ್ಕೆ ಸಿದ್ದ ಎಂದು ರಾಬರ್ಟ್ ವಾದ್ರಾ ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣ ಪ್ರವೇಶ ಮಾಡಿದ ಬಳಿಕ ರಾಬರ್ಟ್ ವಾದ್ರಾ ಹೇಳಿಕೆ ನೀಡಿದ್ದಾರೆ. ಮುಂದಿನ ದಿನಮಾನಗಳಲ್ಲಿ ವಾದ್ರಾರವರು ರಾಜಕೀಯ ರಂಗ ಪ್ರವೇಶ ಮಾಡುವ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ.