ಮಸ್ಕಿ: ತೋಟದ ಮನೆಯೊಂದರಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 20 ಜನರ ತಂಡದ ಮೇಲೆ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ 2 ಲಕ್ಷ ರೂ.ಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಹಸಮಕಲ್ ಗ್ರಾಮದ ಬಸಯ್ಯ ಸ್ವಾಮಿ ಎನ್ನುವವರ ತೋಟದ ಹತ್ತಿರ 20 ಜನರ ತಂಡ ಇಸ್ಪೀಟ್ ಜೂಜಾಟದಲ್ಲಿ ನಿರತರಾಗಿದ್ದರು.
ವಿಷಯ ತಿಳಿದ ಬಳಗಾನೂರು ಪಿಎಸ್ಐ ಪ್ರಕಾಶ್ ರೆಡ್ಡಿ ಡಂಬಳ್ ಹಾಗೂ ಸಿಬ್ಬಂದಿಗಳು ಇಸ್ಪೀಟ್ ಅಡ್ಡೆ ಮೆಳೆ ದಾಳಿ ನಡೆಸಿ ಎರಡು ಲಕ್ಷದ ನಾಲ್ಕು ಸಾವಿರ ರೂ.ಗಳನ್ನು ವಶಕ್ಕೆ ಪಡೆದು 20 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವರದಿ: ವೀರೇಶ್ ಅರಮನಿ ವಾಯ್ಸ್ ಆಫ್ ಜನತಾ: