ತಂಗಡಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 77ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ.
ತಂಗಡಗಿ ಪಿಕೆಪಿಎಸ್ : 5.93 ಕೋಟಿ ರೂ. ಸಾಲ ರೈತರಿಗೆ ವಿತರಣೆ.
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಸಹಕಾರಿ ಬ್ಯಾಂಕ್ಅವೃದ್ಧಿಯಾಗಬೇಕಾದರೆ ಬ್ಯಾಂಕ್ ಷೇರುದಾರರು ಸಾಲ ತೆಗೆದುಕೊಂಡು ಆ ಸಾಲವನ್ನು ಸರಿಯಾದ ಸಮಯಕ್ಕೆ ತುಂಬಿದರೆ ಸಹಕಾರಿ ಬ್ಯಾಂಕ್ ಬೆಳವಣಿಗೆ ಯಾಗುತ್ತದೆ.ಅದೇ ರೀತಿಯ ರೈತರಿಗೆ ಸಾಲವನ್ನು ನೀಡಲು ಅನುಕೂಲವಾಗುತ್ತದೆ.
ಈ ವಾರ್ಷಿಕ ವರ್ಷದಲ್ಲಿ ಸುಮಾರು 593.98 ಲಕ್ಷ ಹಣವನ್ನು ಅಲ್ಪಾವಧಿ, ಕೃಷಿ ಮಧ್ಯಮಾವಧಿ ಹಾಗೂ ಟ್ರಾಕ್ಟರ್ ಖರೀದಿಗಾಗಿ ಸಾಲವನ್ನು ಕೊಡಲಾಗಿದೆ ಎಂದು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಶ್ರೀಶೈಲ ಮರೋಳ ಹೇಳಿದರು.
ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಬುಧವಾರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 77ನೇ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರೇ ಸಂಘದ ಬೆನ್ನುಲುಬಾಗಿದ್ದು ಈ ವರ್ಷದಲ್ಲಿ 10.17 ಲಕ್ಷ ಲಾಭ ಗಳಿಕೆಯಾಗಿದ್ದು 121.75 ಲಕ್ಷ ಷೇರು ಬಂಡವಾಳವನ್ನು ಹೊಂದಿ ಸಾಲ ವಸೂಲಾತಿ ನೂರಕ್ಕೆ ನೂರರಷ್ಟು ಗುರಿ ಸಾಧಿಸಿದೆ ಎಂದು ಸಭೆಯಲ್ಲಿ ಹೇಳಿದರು.
ಸಂಘದ ಹಿರಿಯ ಸದಸ್ಯ ಸಹಕಾರಿ ಧುರೀಣ ಬಸವರಾಜ ಇಸ್ಲಾಂಪುರ ಮಾತನಾಡಿ, ರೈತರು ಸಹಕಾರಿ ಸಂಘದಲ್ಲಿ ವಿಶ್ವಾಸವಿರಿಸಿ ಸಹಕರಿಸಿದ್ದು ರೈತರು ಹೆಚ್ಚು ಹಣವನ್ನು ಸಂಘದಲ್ಲಿ ಠೇವಣಿ ಇಡುವಂತೆ ರೈತರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿ. ಎಸ್. ಬಡದಾನಿ, ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಉಪಾಧ್ಯಕ್ಷ ಮಲೀಕಸಾಬ ನದಾಫ್, ಸದಸ್ಯರಾದ ಮಾಂತೇಶ ಹೊಳಿ, ಸಂಗಯ್ಯ ಸಾರಂಗಮಠ, ಗುರನಗೌಡ ಕರಿಬಂಟನಾಳ, ಹೊಳಿ, ನಿಜಗುಣಪ್ಪ ವಾಲಿಕಾರ, ಜಯಶ್ರೀ ಮೇಟಿ, ಸುನಂದಾ ನಿಡಗುಂದಿ, ಮಾಂತೇಶ ಛಲವಾದಿ, ವೃತ್ತಿಪರ ನಿರ್ದೇಶಕರಾದ ದರಿಯಪ್ಪ ದೇಸಣಗಿ,ಸಂಘದ ಮುಖ್ಯ ಸಂಗಣ್ಣ ನಿಡಗುಂದಿ,ಕ್ಲರ್ಕ್ ಬಸವರಾಜ ಲಿಂಗದಳ್ಳಿ, ಮುಖಂಡರಾದ ರಾಜೂಗೌಡ ಕೊಂಗಿ,ಜಿ. ಜಿ. ಮೋಟಗಿ, ಬಸವರಾಜ್ ತಾಳಿಕೋಟಿ, ರಾಜುಧಣಿ ದೇಶಮುಖ, ಶಂಕ್ರಪ್ಪ ಹೊಳಿ,ಸಂಗಣ್ಣ ದೇವರಮನಿ, ಶಿವಾನಂದ್ ಮಂಕಣಿ,ಸಂಗಣ್ಣ ಕವಡಿಮಟ್ಟಿ,ರಾಮಣ್ಣ ಕುಂಟೋಜಿ, ಕೆಂಚಪ್ಪ ಲಕ್ಕಣ್ಣವರು ,ಪರಪ್ಪ ಹೊಳಿ, ಗಂಗೂರ, ಕುಂಚಗನೂರ, ಕಮಲದಿನ್ನಿ, “ಅಮರಗೋಳ ಹಾಗೂ ತಂಗಡಗಿ ಗ್ರಾಮದ ಬ್ಯಾಂಕ್ ನ ಶೇರುದಾರರು, ರಮೇಶ್ ಲಿಂಗದಳ್ಳಿ ನಿರೂಪಿಸಿ ವಂದಿಸಿದರು. ಸೇರಿದಂತೆ ಉಪಸ್ಥಿತರಿದ್ದರು.