Sept-23_ಕ್ಕೆ ಅಗರಖೇಡ ಗ್ರಾಮದಲ್ಲಿ ಪ್ರಾ.ಕೃ.ಸ.ಸಂಘದ ವಾರ್ಷಿಕ ಸರ್ವಸಾಧಾರಣ ಮಹಾಸಭೆ..
ಇಂಡಿ: ತಾಲೂಕಿನ ಅಗರಖೇಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ., ಅಗರಖೇಡ ೪೭ನೇ ವಾರ್ಷಿಕ ಸರ್ವಸಾಧಾರಣ ಮಹಾಸಭೆಯನ್ನು ಸಪ್ಟೆಂಬರ್ ೨೩ರ ಶನಿವಾರರಂದು ಸಾಯಂಕಾಲ ೩:೦೦ ಘಂಟೆಗೆ ಸಂಘದ ಕಾರ್ಯಾಲಯ ಆವರಣದಲ್ಲಿ ಸಂಘದ ಅಧ್ಯಕ್ಷರಾದ ವಿಠ್ಠಲಗೌಡ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಘದ ಸರ್ವ ಸದಸ್ಯರು ಹಾಜರಾಗಿ, ಸಂಘದ ಏಳ್ಗೆಯ ಕುರಿತು ಸಲಹೆ-ಸೂಚನೆ ನೀಡಲು ಸಂಘದ ಕಾರ್ಯದರ್ಶಿ ಎಸ್.ಎನ್. ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.