ಮಲೆ ಮಹದೇಶ್ವರ ಬೆಟ್ಟದ ಶಾಲಾ ವಿದ್ಯಾರ್ಥಿಯ ಮೇಲೆ ಹಂದಿ ದಾಳಿ..!
ಹನೂರು: ತಾಲೂಕಿನ ಮಲೆಯ ಮಹದೇಶ್ವರ ಬೆಟ್ಟ ಕೀರ್ಮಳ ಗ್ರಾಮದ ನಾಗತಂಬಡಿ ಮಹಾದೇವಮ್ಮ ಎಂಬವರ ಪುತ್ರ, ನವೀನ ಮೇಲೆ ಹಂದಿ ದಾಳಿ ಮಾಡಿದೆ. ಆ ವಿದ್ಯಾರ್ಥಿಯನ್ನು ಮಲೆ ಮಹದೇಶ್ವರ ಬೆಟ್ಟದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಘಟನೆಯ ವಿವರ: ಮಲೆ ಮಹದೇಶ್ವರ ಬೆಟ್ಟ ಸಾಲೂರು ಮಠದ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ನವೀನ, ಸಾಯಂಕಾಲ ಆಟೋ ಪಾಠ ಕ್ರೀಡಾಕೂಟದಲ್ಲಿ ಭಾಗವಹಿಸಲು ಅಭ್ಯಾಸ ನಡೆಸಿ, ಇನ್ನೂ ಕಿರು ಹೋಲ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯ ಸಿಗುವ ಹಳ್ಳದ ಬಳಿ ವಿದ್ಯಾರ್ಥಿ ನವೀನನ ಮೇಲೆ ದಾಳಿ ನಡೆಸಿದ ಹಂದಿ ಎಡಗಾಲಿನ ತೊಡೆ ಭಾಗದಲ್ಲಿ ಕಚ್ಚಿ ಗಾಯಗೊಳಿಸಿದೆ. ಆಸಮಯದಲ್ಲಿ ವಿದ್ಯಾರ್ಥಿ ಗಾಯಗೊಂಡು ಚಿರಾಡುತ್ತಿದ್ದಾಗ ಅಕ್ಕ ಪಕ್ಕದ ನಿವಾಸಿಗಳು ಆಗಮಿಸಿ ಮಲೆ ಮಹದೇಶ್ವರ ಬೆಟ್ಟದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದಾರೆ.