ವಿಜಯಪುರ : ಪಿಕ್ ಅಪ್ ಬುಲೆರೋ ವಾಹನದ ಬ್ರೆಕ್ ಫೇಲ್‌ಯಾಗಿ ಸರಣಿ ಅಪಘಾತವಾಗಿರುವ ಘಟನೆ ವಿಜಯಪುರದ ನೆಹರು ನಗರದಲ್ಲಿ ನಡೆದಿದೆ. ಇನ್ನೂ ಅಪಘಾತದಲ್ಲಿ 8 ಬೈಕ್, ಎರಡು ಸೈಕಲ್ ಹಾಗೂ ಒಂದು ಕಾರು ಜಖಂಗೊಂಡಿವೆ. ನೆಹರು ನಗರದಲ್ಲಿ ಅಕ್ಕಿ ಇಳಿಸಲು ಬಂದಿದ್ದ ಪಿಕ್ ಅಪ್ ಬುಲೆರೋ ಎತ್ತರದ ಪ್ರದೇಶದಲ್ಲಿ ನಿಂತಾಗ ಬ್ರೆಕ್ ಫೇಲ್ ಆಗಿ ಹಿಂದಕ್ಕೆ ಚಲಾವಣೆಗೊಂಡು ಹಿಂಬದಿ ನಿಂತಿದ್ದ ಬೈಕ್ ಮತ್ತು ಕಾರಿಗೆ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೆ ಗಾಯಗಳಾಗಿಲ್ಲ. ಸಂಚಾರಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.