ಪುರಸಭೆ ಸದಸ್ಯರ ಅವಧಿ ವಿಸ್ತರಣೆಗೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ..
ಇಂಡಿ : ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ನಿಗದಿ ಪಡಿಸದ ಹಿನ್ನೆಲೆಯಲ್ಲಿ ಕಳೆದ 14 ತಿಂಗಳಿನಿಂದ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ಹಾಗಾಗಿ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ನಿಗದಿ ಪಡಿಸಿ ಪುರಸಭೆ ಸದಸ್ಯ ಅವಧಿ ವಿಸ್ತರಿಸಬೇಕು ಎಂದು ಪುರಸಭೆ ಸದಸ್ಯರು ತಹಶಿಲ್ದಾರ ಮಂಜುಳಾ ನಾಯಿಕ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಗುರುವಾರ ಪಟ್ಟಣದ ಆಡಳಿತ ಸೌಧಕ್ಕೆ ತೆರಳಿದ ಪುರಸಭೆಯ ಸದಸ್ಯರು, ಪ್ರತಿ ವಾರ್ಡಗಳಲ್ಲಿ ಮೂಲಭೂತ ಸೌಲಭ್ಯ, ಸೌಕರ್ಯ ಹಾಗೂ ಅಭಿವೃದ್ಧಿ ಪಡಿಸಲಿಕೆ ತೊಂದರೆಯಾಗುತ್ತಿದೆ, ವಾರ್ಡಗಳಲ್ಲಿ ಕಾಮಗಾರಿ ಕುಂಠಿತಗೊಂಡಿವೆ. ಎರಡನೆ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ನಿಗದಿ ಪಡಿಸಿ ಸದಸ್ಯರ ಅವಧಿ ವಿಸ್ತರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಭೀಮನಗೌಡ ಪಾಟೀಲ ಮಾತನಾಡಿದ ಅವರು, 2019ನೇ ಸಾಲಿನಲ್ಲಿ ಚುನಾವಣೆ ಮುಕ್ತಾಯವಾಗಿ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದೆವೆ. ನಂತರ ಅಧ್ಯಕ್ಷ – ಉಪಾಧ್ಯಕ್ಷರ ಮೀಸಲಾತಿಯನ್ನು 1 ವರ್ಷ 06 ತಿಂಗಳ ನಂತರ ನಿಗದಿಪಡಿಸಿದ್ದರ ಪ್ರಕಾರ ಮೊದಲನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯಾಗಿದ್ದು, ವಾರ್ಡಗಳಲ್ಲಿ ಕಾಮಗಾರಿಗಳು ಮಾಡಲು ಅವಕಾಶ ಸಿಕ್ಕಿದೆ. ಆದರೆ ಮೊದಲನೇ ಅವಧಿ ಎಪ್ರೀಲ್ 28, 2023 ನಿಗದಿಪಡಿಸಿದರ ಅವಧಿ ಮುಕ್ತಾಯವಾಗಿರುತ್ತದೆ. ಅಲ್ಲಿಂದ ಇಲ್ಲಿಯವರೆಗೂ ಎರಡನೇ ಅವಧಿಗೆ ಮೀಸಲಾತಿಯನ್ನು ಇಲ್ಲಿಯವರೆಗೆ ನಿಗಧಿಪಡಿಸರಿವುದಿಲ್ಲ. ಆದ ಕಾರಣ ಎರಡನೇ ಅವಧಿಯಲ್ಲಿ ಮಿಸಲಾತಿ ನೀಡದೆ ಸುಮಾರು 14 ತಿಂಗಳ ಗತಿಸಿದರೂ ಕೂಡ ಇನ್ನು ಮೀಸಲಾತಿ ಹೊರಡಿಸದೆ ಪುರಸಭೆ ಸದಸ್ಯರ ಅವಧಿ ಮುಕ್ತಾವಾಗುತ್ತಿದೆ. ಅನೇಕ ನೀರಿಕ್ಷೆಗಳಿಟ್ಟು ಜನ ಸೇವೆ ಮಾಡಲು ಬಂದ ನಮಗೆ, ವಾರ್ಡಗಳಲ್ಲಿ ಅಭಿವೃದ್ಧಿ ಬದಲಾವಣೆ ಮಾಡದೆ, ಜನ ಸೇವೆ ಮಾಡದೆ, ಅಧಿಕಾರಿಗಳ ಜೊತೆ ಮಾತಾಡಿ ಅವಧಿ ಮುಗಿಸದಂತಾಗಿದೆ. ಕೂಡಲೇ ಸರಕಾರ ಈ ಬಗ್ಗೆ ಗಮನ ಹರಿಸಿ ಎರಡನೇ ಅವಧಿಗೆ ಮೀಸಲಾತಿ ನಿಗಧಿಪಡಿಸಬೇಕು ಹಾಗೂ ಮೀಸಲಾತಿ ನಿಗಧಿಪಡಿಸಿದ ದಿನಾಂಕದಿಂದ 30 ತಿಂಗಳವರೆಗಿನ ಅವಧಿ ವಿಸ್ತರಿಸಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರೇಖಾ ಭೀಮಾಶಂಕರ ಮೂರಮನ, ರೇಣುಕಾ ತಿಪ್ಪಣ್ಣ ಉಟಗಿ, ಶೈಲಜಾ ಶ್ರೀಶೈಲ ಪೂಜಾರಿ, ಸೈಪನ ಲಕ್ಷ್ಮಣ ಪವಾರ, ಸುಜಾತ ಬುದ್ದುಗೌಡ ಪಾಟೀಲ, ಜಹಾಂಗೀರ್ ಮಹಿಬೂಬಸಾಬ್ ಸೌದಾಗರ, ಭಾಗೀರಥಿ ನಾಗಪ್ಪ ಕುಂಬಾರ, ಸಂಗೀತಾ ಸುದೀರ ಕರಕಟ್ಟಿ, ಅನೀಲಗೌಡ ಚಂದ್ರಶೇಖರ ಬಿರಾದಾರ, ಮುಸ್ತಾಕ ಅಹ್ಮದ್ ಅಲ್ಲಾಭಕ್ಷ ಇಂಡಿಕರ, ಶಬ್ಬೀರ್ ಖಾಜಿ, ಅಸ್ಲಂ ಕಡಣಿ, ಅಯ್ಯುಬ್ ರಾಜೇಸಾಬ ಬಾಗವಾನ, ಸಾಯಬಣ್ಣ ವಾಸುದೇವ ಮೂರಮನ, ಉಮೇಶ್ ಬಾವಾಸಾಬ ದೇಗಿನಾಳ, ಲಿಂಬಾಜಿ ತುಕಾರಾಮ ರಾಠೋಡ, ಜ್ಯೋತಿ ಪ್ರಕಾಶ ರಾಠೋಡ, ಕವಿತಾ ಜಯಚಂದ್ರ ರಾಠೋಡ, ದೇವೇಂದ್ರ ಬೆಳ್ಳಪ್ಪ ಕುಂಬಾರ ಉಪಸ್ಥಿತರಿದ್ದರು.