ಇಂಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಸಿಎಮ್ ಸಿದ್ದರಾಮಯ್ಯ ಅವರಿಗೆ ಮನವಿ
ಇಂಡಿ : ಮಹಾರಾಷ್ಟ್ರದ ಗಡಿಭಾಗದ ಗ್ರಾಮಗಳು ಸ್ವತಂತ್ರ ದೊರೆತು 75 ವರ್ಷಗಳು ಕಳದರೂ ಅಭಿವೃದ್ಧಿ, ಪ್ರಗತಿ ಕಂಡಿಲ್ಲಾ. ಅಭಿವೃದ್ಧಿಗಾಗಿ ಮತ್ತು ಪ್ರಗತಿಗಾಗಿ ಇಂಡಿ ಜಿಲ್ಲಾ ಕೇಂದ್ರವಾಗಬೇಕು .ಶೈಕ್ಷಣಿಕ ಸಾಕ್ಷರತೆಗಾಗಿ 371 ಜೆ ಅಡಿಯಲ್ಲಿ ಇಂಡಿ ಉಪವಿಭಾಗ ಸೇರ್ಪಡೆಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ ಸಿಐಟಿಯು ಸಂಯೋಜಿತ ತಾಲೂಕು ಸಮಿತಿ ಇಂಡಿ ವತಿಯಿಂದ ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಗುರುವಾರ ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ಮನವಿ ಸಲ್ಲಿಸಿ ಮಾತಾನಾಡಿದ ಅಧ್ಯಕ್ಷ ತುಕರಾಮ ಮಾರನೂರ ಅವರು, ಭಿಮಾ ನದಿ ತೀರದ ಜನರು ಸದಾ ಮಹಾಪುರದ ಸಂಕಷ್ಟ ಮತ್ತು ಹಾನಿ ಅನುಭವಿಸುತ್ತಿದ್ದಾರೆ. ಆದರೆ ಅದಕ್ಕೆ ಪರಿಯಾಯ ಮಾರ್ಗಗಳು ಕಂಡುಕೊಂಡಿದ್ದು ಅತೀ ಕಡಿಮೆ, ಅದಲ್ಲದೇ ಶಾಶ್ವತ ಪರಿಹಾರ ಕಾರ್ಯಗಳ ಬಗ್ಗೆ ಸರಕಾರ ಜಾಗೃತಿ ವಹಿಸಿದೆ ಇರುವುದು ಬೇಜಾರದ ಸಂಗತಿ.
ಇನ್ನೂ ಇಂಡಿ ತಾಲ್ಲೂಕಿನ ಹಾಗೂ ಉಪವಿಭಾಗ ವ್ಯಾಪ್ತಿಯ ಕಟ್ಟ ಕಡೆಯ ಗ್ರಾಮಗಳು ವಿಜಯಪೂರ ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿ.ಮೀ ಕ್ಕೂ ಹೆಚ್ಚಿನ ಅಂತರದಲ್ಲಿದೆ. ಆದ್ದರಿಂದ ಸಾರ್ವಜನಿಕರಿಗೆ, ರೈತರಿಗೆ ಸರಕಾರಿ ಕೆಲಸ ಕಾರ್ಯಗಳು ಮಾಡಿಕೊಳ್ಳಲು ತುಂಬಾ ಕಷ್ಟಕರವಾಗಿದೆ. ಇದನ್ನು ಸರಕಾರ ಗಂಭಿರವಾಗಿ ಪರಿಗಣಿಸಿ ಗಡಿ ಭಾಗದ ಅಭಿವೃದ್ಧಿಗೊಸ್ಕರ ಈಗಾಗಲೇ ಇರುವ ಇಂಡಿ ಉಪ ವಿಭಾಗವನ್ನು ಆಡಳಿತ ಹಿತ ದೃಷ್ಟಿಯಿಂದ ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಲಾಲಾಹ್ಮದ ಶೇಖ, ಖಜಾಂತಿ ಲಕ್ಷ್ಮಣ ಪಾಟೀಲ್, ಸಿದ್ದರಾಮ ಕೋಳಿ, ಅಶೋಕ ಶಿರಗೂರ, ಬಸವರಾಜ ಉಪಾಸೆ, ಕೃಷ್ಣ ಚವ್ಹಾಣ ಉಪಸ್ಥಿತರಿದ್ದರು.