ಇಂಡಿ : ಬೈಕ್ ಹಾಗೂ ವಾಹನಗಳ ಮೇಲೆ ಪ್ರೆಸ್ ಪದ ಬಳಕೆ ಮಾಡದಂತೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರು ಡಿವೈಎಸ್ಪಿಗೆ ಮನವಿ ಸಲ್ಲಿಸಿದರು. ಇಂಡಿ ಪಟ್ಟಣದಲ್ಲಿರುವ ಡಿವೈಎಸ್ಪಿ ಶ್ರೀಧರ ದೊಡ್ಡಿ ಯವರಿಗೆ ಪತ್ರಕರ್ತರು ಮನವಿ ಮಾಡಿದ್ದು, ಇನ್ನು ಅನಧಿಕೃತವಾಗಿ ಕೆಲವರು ಪ್ರೆಸ್ ಪದವನ್ನು ಬಳಕೆ ಮಾಡಿಕೊಳ್ಳುತ್ತಿದ್ದು ಖಂಡನೀಯ ಆಗಿದೆ. ಪತ್ರಕರ್ತರ ಹೆಸರಲ್ಲಿ ಬೇರೆ ಬೇರೆ ಚಟುವಟಿಕೆ ಮಾಡುತ್ತಿದ್ದು ಜೊತೆಗೆ ಅಧಿಕಾರಿಗಳಿಗೆ ವಿನಃ ಕಾರಣ ಕಿರುಕುಳ ಕೊಡುತ್ತಿದ್ದು ಮತ್ತು ಹಣ ಬೇಡಿಕೆ ಇಡುತ್ತಿದ್ದಾರೆ. ಅದಕ್ಕಾಗಿ ಅಂತಹವರ ವಿರುದ್ಧ ಪೊಲೀಸ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕ.ನಿ.ಪ ಸಂಘದ ತಾಲೂಕು ಅಧ್ಯಕ್ಷ ಲಾಲಸಿಂಗ್ ರಾಠೋಡ, ಕಾರ್ಯದರ್ಶಿ ಅಬುಶಾಮ ಹವಾಲ್ದಾರ್, ಯಲಗೊಂಡ ಬೇವನೂರ, ರಾಜಕುಮಾರ ಚಾಬುಕಸವಾರ, ಸದ್ದಾಂ ಜಮಾದಾರ, ವಾಯ್ ಎಸ್ ಗುಣಕಿ, ಮೋಬಿನ್ ನದಾಪ್ , ಪಾರುಕ್ ಬೋರಾಮಣಿ, ಅಲ್ಲಾಭಕ್ಷ ಗೋರೆ, ವಿನೋದ ಸಿಂಗೆ, ಜೈಭೀಮ ಸಿಂಗೆ ಉಪಸ್ಥಿತರು.