ಗಣಿತ ಪರೀಕ್ಷೆಯಲ್ಲಿ ಕೆಜಿಎಸ್ ಶಾಲಾ ಮಕ್ಕಳ ಸಾಧನೆ
ಇಂಡಿ: ತಾಲ್ಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್ ಶಾಲೆಯಲ್ಲಿ ಮಂಗಳವಾರದಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಅಕ್ಷರ ಫೌಂಡೇಶನ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಣಿತ ಕಲಿಕಾ ಆಂದೋಲನದ ಸ್ಪರ್ಧೆಯಲ್ಲಿ ಕೆಜಿಎಸ್ ಶಾಲೆಯ 4ನೇ ವರ್ಗದ ರಂಜಿತಾ ವಾಘಮೋಡೆ-ಪ್ರಥಮ ಮತ್ತು 5ನೇ ವರ್ಗದ ವಿದ್ಯಾಶ್ರೀ ಜೊತಗೊಂಡ- ಪ್ರಥಮ ಸ್ಥಾನ ಪಡೆದು, ಶಾಲೆಗೆ ಕೀರ್ತಿ ತಂದಿದ್ದಾರೆ. ವಿಜೇತರಿಗೆ ಪ್ರಶಸ್ತಿ ಪತ್ರ, ನಗದು ಬಹುಮಾನ ವಿತರಿಸಲಾಯಿತು.
ಮುಖ್ಯ ಶಿಕ್ಷಕಿ ವ್ಹಿ ವೈ ಪತ್ತಾರ, ಶಿಕ್ಷಕರಾದ ಎಸ್ ಎಂ ಪಂಚಮುಖಿ, ಸಂತೋಷ ಬಂಡೆ, ಎಸ್ ಆರ್ ಚಾಳೇಕರ, ಎಸ್ ಬಿ ಕುಲಕರ್ಣಿ, ಶ್ರದ್ಧಾ ಬಂಕಲಗಾ, ಎಸ್ ಡಿ ಬಿರಾದಾರ, ಜೆ ಸಿ ಗುಣಕಿ, ಎಸ್ ಎನ್ ಡಂಗಿ, ಅತಿಥಿ ಶಿಕ್ಷಕ ಪ್ರಜ್ವಲ ಕುಲಕರ್ಣಿ ಸೇರಿದಂತೆ ಅನೇಕರು ಮಕ್ಕಳ ಸಾಧನೆಗೆ ಅಭಿನಂದಿಸಿದ್ದಾರೆ.