ವಿಜಯಪುರ: ಕಾಂಗ್ರೆಸ್, ಬಿಜೆಪಿ ಪಕ್ಷದ ದುರಾಡಳಿತದಿಂದ ಜನತೆ ಬೇಸತ್ತು ಹೋಗಿದ್ದಾರೆ ಎಂದು ಎಎಪಿ ಮುಖಂಡ ಭಾಸ್ಕರ್ ರಾವ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಸರ್ಕಾರಗಳು 7.5 ಲಕ್ಷ ಕೋಟಿ ಸಾಲ್ ಮಾಡಿವೆ. ಇದರಿಂದ ಜನತೆಯ ಮೇಲೆ ಆರ್ಥಿಕ ಹೊರ ಹಾಕುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಇನ್ನು ಎಎಪಿ ಸರ್ಕಾರ ದೆಹಲಿಯಲ್ಲಿ ಒಳ್ಳೆಯ ಆಡಳಿತ ನೀಡುತ್ತಿದೆ. ಅದಕ್ಕಾಗಿ ಮುಂದಿನ ಬಾರಿ ರಾಜ್ಯದಲ್ಲಿ ಎಎಪಿ ಆಡಳಿತಕ್ಕೆ ಬರುವುದಕ್ಕೆ ಪಕ್ಷ ಕಟ್ಟಲಾಗುತ್ತದೆ ಎಂದರು.