ಇಂಡಿ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿಪಿಐ ಭೀಮನಗೌಡ ಬಿರಾದರ್ ನೇತೃತ್ವದಲ್ಲಿ ರಂಜಾನ್ ಹಬ್ಬದ ಶಾಂತಿ ಸಭೆಯನ್ನು ಕರೆಯಲಾಗಿತ್ತು. ಹಸಿವು ಅಂದರೇನು ? ಹಸಿವಿನ ಮಹತ್ವದ ಬಗ್ಗೆ ಅರ್ಥವಾಗುವ ಹಬ್ಬವೇ ರಂಜಾನ್ ಹಬ್ಬ ಎಂದು ಸಮುದಾಯದ ಮುಖಂಡ ಅಯೂಬ್ ನಾಟೀಕಾರ ಹೇಳಿದರು. ಸಮುದಾಯಲ್ಲಿ ಒಬ್ಬ ವ್ಯಕ್ತಿ ತನ್ನ ಗಳಿಕೆಯಲ್ಲಿ ನೂರು ಪ್ರತಿಶತದಲ್ಲಿ ೨ ವರೆದಷ್ಟು ಮೀಸಲಾತಿ ಇಟ್ಟು ಬಡವರಿಗೆ ಹಂಚಕಿ ಮಾಡೊದೆ ಹಬ್ಬದ ವಿಶೇಷ ಗುಣಧರ್ಮ ಎಂದರು.
ಇದೇ ಸಂದರ್ಭದಲ್ಲಿ ಕಾಸುಗೌಡ ಬಿರಾದಾರ, ಜಾವೀದ ಮೋಮಿನ್, ಮಹಿಬೂಬ ಬೇವನೂರ, ಜಟ್ಟಪ್ಪ ರವಳಿ ಪ್ರಶಾಂತ ಕಾಳೆ ಮಾತಾನಾಡಿದ ಇವರು, ರಾಜ್ಯದಲ್ಲಿ ಈಗಾಗಲೇ ಅಸಮಾಧಾನ, ವಿಷಮ ವಾತಾವರಣ ನಿರ್ಮಾಣವಾಗಿದೆ. ಕಳ್ಳತನ ಮಾಡಿದ ಮನೆ ಉಳಿಯುತ್ತೆದೆ. ಆದರೆ ಕೊಳ್ಳಿ (ಬೆಂಕಿ ಕಿಡಿ) ಇಟ್ಟ ಮನೆ ಉಳಿಯುವುದಿಲ್ಲ ಎಂದು ಹೇಳಿದರು. ಚಿಕ್ಕ ಪುಟ್ಟ ಸಮಸ್ಯೆ ಗಳಿಗೆ ಮನಕೊಡದೆ ಸೌಹಾರ್ದತೆಗೆ ಮನ ಕೊಡೊಣ ಎಂದು ಹೇಳಿದರು. ಹಾಗೆಯೇ ಎಲ್ಲರೂ ಸೇರಿ ಸಂತೋಷ ಸಡಗರದಿಂದ ಆಚರಣೆ ಮಾಡುವ ಹಬ್ಬ. ಕಳೆದರೆಡು ವರ್ಷ ಕರೋನಾ ಎಂಬ ಮಹಾಮಾರಿ ಎಲ್ಲರ ಬದುಕಿನಲ್ಲಿ ಆಟವಾಡಿದೆ.
ಈ ಸಂದರ್ಭದಲ್ಲಿ ಜಗದೀಶ್ ಕ್ಷೇತ್ರಿ, ಅಬ್ಜಲ್ ಹವಲ್ದಾರ, ರೈಸ್ ಅಷ್ಟೆಕರ,ಜಬ್ಬರ ಅರಬ, ಮೈಹಿಬೂಬ್ ಅರಬ ಇನ್ನೂ ಅನೇಕರು ಮುಖಂಡರು ಉಪಸ್ಥಿತರಿದ್ದರು.