ಗಣೇಶ ಹಬ್ಬಕ್ಕೆ ಶತಶತಮಾನಗಳ ಇತಿಹಾಸವಿದೆ ; ಡಿವಾಯ್ ಎಸ್ಪಿ ಜಗದೀಶ್ ಎಸ್ ಎಚ್
ಇಂಡಿ : ಶಾಂತಿ ಮತ್ತು ಸೌರ್ಹಾದತೆಯೊಂದಿಗೆ ಗಣೇಶ ಚತುರ್ಥಿ ಆಚರಿಸುವ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತಹಶಿಲ್ದಾರ ಬಿ.ಎಸ್ ಕಡಕಭಾವಿ ಮಾತಾನಾಡಿದರು.
ಪಟ್ಟಣದ ಪೋಲಿಸ್ ಉಪವಿಭಾಗ ಸಭಾಭವನದಲ್ಲಿ ಜಿಲ್ಲಾ ಪೋಲಿಸ್ ಹಾಗೂ ಶಹರ್ ಪೋಲಿಸ್ ಠಾಣಾ ಆಶ್ರಯದಲ್ಲಿ ಏರ್ಪಡಿಸಿದ್ದ ಗಣೇಶೋತ್ಸವ ಹಾಗೂ ಇದಮಿಲಾದ ಹಬ್ಬದ ಪ್ರಯುಕ್ತ ಮಾತಾನಾಡಿದರು.
ಇನ್ನೂ ಇದೇ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ ಉಪವಿಭಾಗ ಪೋಲಿಸ್ ವರಿಷ್ಠ ಅಧಿಕಾರಿ ಜಗದೀಶ್ ಎಸ್ ಎಚ್ ಮಾತಾನಾಡಿದ ಅವರು,
ಸ್ವಾತಂತ್ರ್ಯ ಸಂಗ್ರಾಮದ ದಿನಗಳಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಎಲ್ಲರೂ ಒಗ್ಗೂಡಬೇಕೆಂಬ ಮಹತ್ತರ ಉದ್ದೇಶದೊಂದಿಗೆ ಸಾರ್ವತ್ರಿಕವಾಗಿ ಗಣೇಶ ಉತ್ಸವ ಆಚರಣೆಗೆ ಬಂದಿದ್ದು, ಅಂತಹ ಮಹತ್ತರ ಉದ್ದೇಶದ ಆರ್ಥಪೂರ್ಣ ಆಚರಣೆಯಾಗಬೇಕು ಎಂದರು.
ಉತ್ಸವ ಆಚರಣೆ ಶ್ರದ್ಧಾ ಭಕ್ತಿಯಿಂದ ಕೂಡಿರಬೇಕೆ ಹೊರತು, ಗುಂಪುಗಾರಿಕೆ, ಮೋಜು ಮಸ್ತಿ ಅಥವಾ ಮತ್ಯಾವುದೊ ದುರುದ್ದೇಶಕ್ಕೆ ಚತುರ್ಥಿ ಆಚರಣೆಯಾಗಬಾರದು ಎಂದ ಅವರು, ಸರ್ವರಿಗೂ ಗೌರಿ, ಗಣೇಶ್ ಹಬ್ಬದ ಶುಭಾಶಯ ಕೋರಿದರು.
ಒಟ್ಟು 60 ರಿಂದ 65 ಸ್ಥಳಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಯುವಕ ಸಂಘದವರು ಚಾಚೂ ತಪ್ಪದೆ ಕಾನೂನು ಪಾಲಿಸಬೇಕು. ಧ್ವನಿ ವರ್ಧಕ ಬಳಕೆ ಉಪಯೋಗಿಸಲು ಹೆಸ್ಕಾಂ ಇಲಾಖೆ, ಪೊಲೀಸ್ ಇಲಾಖೆ, ಪಟ್ಟಣ ಪಂಚಾಯಿತಿ, ನೀರಪೇಕ್ಷಣಾ ಪತ್ರ ಪಡೆಯುವುದು ಕಡ್ಡಯಾವಾಗಿದೆ. ಹಾಗಾಗಿ ಯಾವುದೇ ತೊಂದರೆ – ಯಾಗದಂತೆ ಏಕಗವಾಕ್ಷಿ ಮೂಲಕ ಪರವಾನಗಿ ನೀಡಲಾಗುತ್ತದೆ ಎಂದು ಹೇಳಿದರು. ಅದಲ್ಲದೇ ಗಣೇಶ ಪ್ರತಿಷ್ಠಾನದ ಜಾಗದ ಸುತ್ತ ಮುತ್ತ ಕಾನೂನು ಬಾಹಿರ ಚಟುವಟಿಕೆಗೆ ಆಸ್ಪದ ನೀಡಬಾರದು. ಶಾಂತಿಯುತವಾಗಿ ಹಬ್ಬ ನಡೆಯುವ ಉದ್ದೇಶ ದಿಂದ ಪೋಲಿಸ್ ಇಲಾಖೆ ಬಿಗಿ ಬಂದೋಬಸ್ತ ಕೈಗೊಂಡಿದ್ದು ಅಹಿತಕರ ಘಟನೆಗೆ ಕಾರಣವಾದವರ ಮೇಲೆ ನಿರ್ಧಾಕ್ಷಣೆ ಕ್ರಮ ಕೈಗೊಳ್ಳಲಾಗುವದು. ಪಟಾಕಿ ಸಿಡಿ ಮದ್ದು ಹಚ್ಚುವ ಸಂದರ್ಭದಲ್ಲಿ ಮಕ್ಕಳು ಏಚ್ಚರವಹಿಸುವದು ಅಗತ್ಯವಾಗಿದೆ ಎಂದು ತಿಳಿಸಿದರು.
ಅದಲ್ಲದೇ ಪುರಸಭೆ ಸದಸ್ಯ ಹಾಗೂ ಗಜಾನನ ಮಂಡಳಿ ಮುಖಂಡ ಅನೀಲಗೌಡ ಬಿರಾದಾರ, ಅಯೂಬ್ ನಾಟೀಕಾರ, ರೈಸ್ ಅಷ್ಟೇಕರ, ಪುರಸಭೆ ಅರೋಗ್ಯ ಅಧಿಕಾರಿ ಸೋಮನಾಯಕ ಹಾಗೂ ಅಗ್ನಿಶಾಮಕ ದೇವದಾನಮ್ಮ ಪಿ ಎಚ್ ಮಾತಾನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಸತ್ತಾರ ಬಾಗವಾನ, ಜಬ್ಬಾರ ಅರಬ್, ಹಣಮಂತ ಕೊಡತೆ, ಶಾಂತು ಕಂಬಾರ, ಶ್ರೀಧರ ಕ್ಷೇತ್ರಿ, ಸಂಜು ದಶವಂತ, ಚಂದ್ರಶೇಖರ ಹೊಸಮನಿ, ಪ್ರಕಾಶ ಬಿರಾದಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಹರ್ ಠಾಣಾ ಸಿಪಿಐ ರತನ್ ಜಿರಗ್ಯಾಳ ನಿರೂಪಣೆ ಮಾಡಿದರು.