ಲಿಂಗಸಗೂರ: ತಾಲೂಕಿನ ಮುದಗಲ್ ಪಟ್ಟಣ ಪುರಸಭೆಯ ವಾಣಿಜ್ಯ ಮಳಿಗೆ ಬಾಡಿಗೆ ನೀಡಿ ಇಲ್ಲವೇ ಮಳಿಗೆ ಖಾಲಿ ಮಾಡಿ ಎಂದು ಪುರಸಭೆ ಮುಖ್ಯಾಧಿಕಾರಿ ನಬಿ ಕಂದಗಲ್ ಬಾಡಿಗೆದಾರರಿಗೆ ಎಚ್ಚರಿಕೆ ನೀಡಿದರು.
ಪಟ್ಟಣದ ಬಸ್ ನಿಲ್ದಾಣದ ಪಕ್ಕದ ಮಳಿಗೆ ಹಾಗೂ ಪುರಸಭೆ ಹಿಂಭಾಗದ ಮಳಿಗೆಗಳಲ್ಲಿ ಬಾಡಿಗೆ ಇರುವ ಅಂಗಡಿಗಳಿಗೆ ಮುಖ್ಯಾಧಿಕಾರಿ ನೇತೃತ್ವದಲ್ಲಿ ಭೇಟಿ ನೀಡಿ ಬಾಡಿಗೆ ವಸೂಲಿ ಮಾಡಿ, ಬಾಡಿಗೆ ಬಾಕಿ ಉಳಿಸಿದವರಿಗೆ ಸೂಚನೆ ನೀಡಿದರು.
ಒಂದು, ಎರಡು ವರ್ಷ ಬಾಡಿಗೆ ಪಾವತಿ ಮಾಡದಂತಹ ಮಾಲೀಕರಿಗೆ ಕಡಕ್ ಸೂಚನೆ ನೀಡಿದರು.
ಬಾಡಿಗೆ ಬಾಕಿ ಉಳಿಸಿದರೆ ಪುರಸಭೆಯ ಅಭಿವೃದ್ಧಿ ಕಾರ್ಯ, ಸಿಬ್ಬಂದಿಗಳಿಗೆ ವೇತನ ನೀಡಲು ಕಷ್ಟ ವಾಗುತ್ತದೆ. ಲಕ್ಷಾಂತರ ಬಾಡಿಗೆ ಬಾಕಿ ಉಳಿಸಿಕೊಂಡರೆ ಹೇಗೆ ಅಭಿವೃದ್ಧಿ ಮಾಡಬೇಕು ಕೆಲ ಅಂಗಡಿಗಳಿಗೆ ಬೀಗಹಾಕಿ ಬಾಡಿಗೆ ಪಾವತಿ ಮಾಡುವಂತೆ ಸೂಚನೆ ನೀಡಿದರು.