ಹೆಚ್ಚಿನ ಸಂಖ್ಯೆಯಲ್ಲಿ ಹೋಸಪೇಟ ಸಮಾವೇಶದಲ್ಲಿ ಪಾಲ್ಗೊಳ್ಳಿ – ಸಚಿವ ತಿಮ್ಮಾಪುರ
ಇಂಡಿ : ಬರುವ ೨೦ ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ರಾಜ್ಯ ಸರಕಾರದ ಎರಡು ವರ್ಷದ ಸಾಧನಾ ಸಮಾವೇಶ ನಡೆಯಲಿದ್ದು ಇಂಡಿ ಮತಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬರಬೇಕೆಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ರಾಜ್ಯ ಸರಕಾರದ ಎರಡು ವರ್ಷದ ಸಾಧನೆ ಮತ್ತು ಹಕ್ಕು ಪತ್ರ ವಿತರಣೆ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ ಸ್ವಾತಂತ್ರö್ಯಕ್ಕಾಗಿ, ದೇಶದ ರಕ್ಷಣೆಗೆ ಮತ್ತು ಅಭಿವೃದ್ದಿಗೆ ಸಾಕಷ್ಟು ಕೆಲಸ ಮಾಡಿದೆ. ಸರಕಾರದ ಗ್ಯಾರಂಟಿ ಯೋಜನೆ ಸಾಕಷ್ಟು ಕುಟುಂಬಗಳಿಗೆ ನೆರವಾಗಿದೆ. ಗ್ರಾಮಗಳಲ್ಲಿ ದೇವರ ಜಾತ್ರೆ ನಡೆಯುವಂತೆ ಇದು ಕಾಂಗ್ರೆಸ್ ಜಾತ್ರೆ ಸಮಾವೇಶ ನಡೆಯಲ್ಲಿದ್ದು ಆಗಮಿಸಲು ಕೇಳಿಕೊಂಡರು.
ಇಂಡಿ ಮತಕ್ಷೇತ್ರಕ್ಕೆ ಸಿದ್ದರಾಮಯ್ಯ ಅತಿ ಹೆಚ್ಚಿನ ಅನುದಾನ ನೀಡಿದ್ದಾರೆ. ಮತ್ತು ೨೦೧೩ ರಿಂದ ೨೦೧೮ ಮತ್ತು ೨೦೨೩ ರಿಂದ ಅತಿ ಹೆಚ್ಚು ಅನುದಾನ ಪಡೆದ ಅಭಿವೃದ್ದಿ ಹೊಂದಿದ ಕ್ಷೇತ್ರ ಇಂಡಿ ಮತಕ್ಷೇತ್ರ. ಹೀಗಾಗಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೇಳಿಕೊಂಡರು.
ಸಿದ್ದರಾಮಯ್ಯನವರ ಸರಕಾರ ಜನರಿಗೆ ನೀಡಿದ ಗ್ಯಾರಂಟಿ ಯೋಜನೆಯಿಂದ ಜನರಿಗೆ ಹೆಚ್ಚಿನ ಅನುಕೂಲವಾಗಿದ್ದು ಅದನ್ನು ಹೆಚ್ಚಿನ ರೀತಿಯಲ್ಲಿ ಪ್ರಚಾರ ಗೊಳಿಸಲು ಕಾರ್ಯಕರ್ತರು ಹೆಚ್ಚಿಗೆ ಪಾಲ್ಗೊಳ್ಳಲು ಕೇಳಿಕೊಂಡರು.
ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ ಈ ಭಾಗದ ಅಭಿವೃದ್ದಿಗೋಸ್ಕರ ಸಿದ್ದರಾಮಯ್ಯ ನೀರಾವರಿಗಾಗಿ ಹೆಚ್ಚಿನ ಹಣ ನೀಡಿದ್ದಾರೆ. ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿಗೆ ೩೦೦೦ ಕೋಟಿ ಹಣ ನೀಡಿದ್ದು ಸೇರಿದಂತೆ ಕೆರೆ ತುಂಬುವ ಯೋಜನೆ, ಇಂಡಿ ಏತ ನೀರಾವರಿಗೆ ಹೆಚ್ಚಿನ ಹಣ ನೀಡಿದ್ದು ಈ ವರೆಗೂ ಮೇ ತಿಂಗಳಲ್ಲಿ ಕುಡಿಯುವ ನೀರಿಗಾಗಿ ತೊಂದರೆ ಆಗದಿರುವದು ಕಾಂಗ್ರೆಸ್ ಸರಕಾರದಲ್ಲಿ ಮಾತ್ರ ಎಂದರು.
ಹೊಸಪೇಟೆಯಲ್ಲಿ ನಾಲ್ಕು ಲಕ್ಷ ಕಾರ್ಯಕರ್ತರು ರಾಜ್ಯದ ಮೂಲೆ ಮೂಲೆಗಳಿಂದಲೂ ಬರುವ ನೀರಿಕ್ಷೆಯಿದ್ದು ರಾಜ್ಯ ಸರಕಾರದ ಸಲಹೆ ಮೇರೆಗೆ ಸಚಿವರು ತಮ್ಮನ್ನು ಅಹ್ವಾನಿಸಲು ಬಂದಿದ್ದು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೇಳಿಕೊಂಡರು. ಅದಲ್ಲದೆ ಇದೇ ವೇಳೆ ತಾಂಡಾ ಜನರಿಗೆ ಇಂಡಿಯ ಸುಮಾರು ೧೪೦೦ ಜನರಿಗೆ ಹಕ್ಕು ಪತ್ರ ವಿತರಣೆ ಕಾರ್ಯ ನಡೆಯಲಿದೆ ಎಂದರು.
ಗ್ಯಾರಂಟಿ ಯೋಜನೆ ಜಿಲ್ಲಾ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣ ,ಶ್ರೀಕಾಂತ ಕುಡಿಗನೂರಮ ಜಾವೇದ ಮೋಮಿನ, ಯಮನಾಜಿ ಸಾಳುಂಕೆ,ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ,ಅಣ್ಣಾರಾಯ ಬಬಲಾದ,ಸತೀಶ ಕುಂಬಾರ,ಹುಚ್ಚಪ್ಪ ತಳವಾರ,ಸಂಜೀವ ಚವ್ಹಾಣ, ಅಬ್ದುಲ ಬಾಗವಾನ,ರೈಸ ಅಷ್ಟೆಕರ,ಸದಾಶಿವ ಹಿರೇಮಠ,ನಿರ್ಮಲಾ ತಳಕೇರಿ ಮಾತನಾಡಿದರು.
ವೇದಿಕೆಯ ಮೇಲೆ ರಶೀದ ಅರಬ, ಭೀಮಣ್ಣ ಕವಲಗಿ, ಜಹಾಂಗೀರ ಸೌದಾಗರ,ಸತ್ತಾರ ಬಾಗವಾನ, ಎ.ಆರ್. ಬಾಗವಾನ, ರಾಜು ಕುಲಕಣ ð,ಕಲ್ಲನಗೌಡ ಪಾಟೀಲ,ಪ್ರಶಾಂತ ಕಾಳೆ, ಮಹೇಶ ಹೊನಬಿಂದಗಿ, ಶೇಖರ ಶಿವಶರಣ,ಸಣ್ಣಪ್ಪ ತಳವಾರ,ಉಮೇಶ ದೇಗಿನಾಳ, ಜಟ್ಟೆಪ್ಪ ರವಳಿ,ಭೀಮಾಶಂಕರ ಮೂರಮನ,ರಾಜು ಪತಂಗೆ, ಹಲೀನಾ ಮಾಶ್ಯಾಳಕರ, ಅನುಸೂಯಾ ಜಾಧವ, ಮಲ್ಲು ಮಡ್ಡಮನಿ,ಬಿ.ಸಿ.ಸಾವಕಾರ ಮತ್ತಿತರಿದ್ದರು.
ಇಂಡಿ ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ನಡೆದ ರಾಜ್ಯ ಸರಕಾರದ ಎರಡು ವರ್ಷದ ಸಾಧನೆ ಮತ್ತು ಹಕ್ಕು ಪತ್ರ ವಿತರಣೆ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಸಚಿವ ತಿಮ್ಮಾಪುರ ಮಾತನಾಡಿದರು.