ಪಂಚಮಸಾಲಿ ಆಕ್ರೋಶ : ಸರ್ಕಾರಕ್ಕೆ ಎಚ್ಚರಿಕೆ..!
ಇಂಡಿ : ರಾಜ್ಯದ ಪಂಚಮಸಾಲಿ ಸಮುದಾಯದಿಂದ 2ಎ ಮೀಸಲಾತಿಗಾಗಿ ಬೆಳಗಾವಿ ಸುವರ್ಣ ಸೌಧದ ಹೋರಭಾಗದಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನಾ ಸಂದರ್ಭದಲ್ಲಿ ಪೋಲೀಸರಿಂದ ಲಾಠಿಚಾರ್ಜ್ ಮಾಡಿದ ಹಿನ್ನಲೆಯಲ್ಲಿ ಸಮುದಾಯಕ್ಕೆ ಭಾರಿ ಅಪಮಾನ ಹಕ್ಕು ಚ್ಯುತಿಯಾಗಿದೆ ಎಂದು ತಾ.ಪಂ ಮಾಜಿ ಸದಸ್ಯೆ ಅಣ್ಣಪ್ಪ ಬಿದರಕೋಟಿ, ಗ್ರಾ.ಪಂ ಉಪಾಧ್ಯಕ್ಷ ಭೀಮಾಶಂಕರ ಆಳೂರ ಲಿಂಗಾಯತ ಪಂಚಮಸಾಲಿ ಸಮಾಜವತಿಯಿಂದ ಖಂಡಿಸಿ ಪ್ರತಿಭಟಣೆ ನಡೆಲಾಯಿತು.
ಪ್ರತಿಭಟನೆಕಾರರು ತಾಲೂಕಿನ ಅಗರಖೇಡ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವೃತದಿಂದ ಪ್ರತಿಭಟನೆ ಪ್ರಾರಂಭಿಸಿ ಚಿಕ್ಕ ಮಣ್ಣೂರ ಕ್ರಾಸ್ ಹತ್ತೀರ ವಿರುವ ವಾಲ್ಮೀಕಿ ವೃತದಲ್ಲಿ ರಸ್ತೆ ತಡೆದು ಹಾಗೂ ಟಾಯರ್ ಬೆಂಕಿ ಹಚ್ಚಿ ಸರಕಾರದ ವಿರುದ್ಧ ದಿಕ್ಕಾರ ಕೂಗಿ ಕಿಡಿಕಾರಿದರು. ಲಿಂಗಾಯತ ಸಮುದಾಯ ಶಾಂತಿ ಪ್ರೀಯರು, ಸೌಜನ್ಯವಂತರು, ಇಂತಹ ಸಮುದಾಯದ ಮೇಲೆ ಪೋಲೀಸರು ಲಾಠಿ ಪ್ರಹಾರಮಾಡಿ ದೌರ್ಜನ್ಯವೆಸಗಿದ್ದು ತುಂಬಾ ಅನ್ಯಾಯವಾಗಿದೆ ಇದಕ್ಕೆ ಈಗಿರುವ ಸರ್ಕಾರವೆ ಹೊಣೆ ಎಂದು ಪಂಚಮಸಾಲಿ ಸಮುದಾಯ ಮುಖಂಡರು ಆರೋಪಿಸಿ ಖಂಡಿಸಿದರು.
ಇನ್ನೂ ತಳವಾರ, ಮರಾಠ, ಹಾಲುಮತ, ಗಾಣಿಗ ಹಾಗೂ ಕುಡ ಒಕ್ಕಲಿಗ ಸಮುದಾಯದವರು ಹೋರಾಟಕ್ಕೆ ಬೆಂಬಲಿಸಿದರು.
ಈ ಸಂದರ್ಭದಲ್ಲಿ ಅಣ್ಣಾರಾಯ ಪಾಟೀಲ್, ಮಲ್ಲಣ್ಣ ತೋಳನೂರ್, ವಿಲಾಸ್ ಅಂದೆವಾಡಿ, ದರೆಪ್ಪ ಸಾವಳಗಿ, ಶಿವು ಸಾವಳೇ, ಸಿದರಾಯ ತೇಲಿ, ಅಂಬಣ್ಣ ಸಾವಳೆ, ಪ್ರಭುಲಿಂಗ ಬಿದರಕೋಟಿ, ಬಸವರಾಜ್ ಬಿಲ್ಲಾಡಿ, ಶಂಕರ ಕರಕಿ, ಸಿದ್ದಾರೂಢ ಪಾಟೀಲ್, ರಾಜಕುಮಾರ್ ಬೆಣಕನ್ನಲ್ಲಿ, ರುಚಿತ್ ಪಾಟೀಲ್,ಧನು ಪಾಟೀಲ್, ದರೇಪ್ಪ ಅಹಿರಸಂಗ್, ಅಶೋಕ್ ಪಾಟೀಲ್, ಸಾಗರ್ ಡಂಗಿ, ರಂಗನಾಥ್ ಬೋಸಲೇ, ಗಡ್ಡಪ್ಪ ವಾಗ್ದುರ್ಗಿ, ಭೀಮಶಂಕರ್ ವಾಗ್ದುರ್ಗಿ ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.