ಇಂಡಿಯಲ್ಲಿ ಬಿಜೆಪಿ ವಿಜಯೋತ್ಸವ
ಇಂಡಿ : ಪಂಚ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ
ಮೂರು ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವು
ಸಾಧಿಸಿದ ಹಿನ್ನೆಲೆಯಲ್ಲಿ ಇಂಡಿ ಮಂಡಲ ಬಿಜೆಪಿ
ಕಾರ್ಯಕರ್ತರು ಭಾನುವಾರ ರಂದು ಬಸವೇಶ್ವರ
ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ
ಮಲ್ಲಿಕಾರ್ಜುನ ಕಿವುಡೆ ಬಿಜೆಪಿ ರೈತ ಮೋರ್ಚಾ
ಜಿಲ್ಲಾಧ್ಯಕ್ಷ ಕಾಸು ಗೌಡ ಬಿರಾದಾರ ಬಿಜೆಪಿ
ಮುಖಂಡ ಅನಿಲ ಜಮಾದಾರ ಮಾತನಾಡಿ ಈ
ಪಂಚರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಪಕ್ಷ
ಮೂರು ರಾಜ್ಯಗಳಲ್ಲಿ ಜಯ ಸಾಧಿಸಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ಸಹ ದೇಶದಲ್ಲಿ ಮತ್ತೆ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ. ಈ ಚುನಾವಣೆಯ ಫಲಿತಾಂಶ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಿದೆ. ಫಲಿತಾಂಶದಿಂದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದೆ ಈ ಬಾರಿ ರಾಜ್ಯದ ಲೋಕಸಭೆ ಚುನಾವಣೆಯಲ್ಲಿಯೂ ಸಹ ಭಾರಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಪಕ್ಷ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು ವಿಶ್ವದಲ್ಲಿಯೇ
ಭಾರತ ದೇಶಕ್ಕೆ ಅತ್ಯುತ್ತಮ ಮನ್ನಣೆ ಸಿಕ್ಕಿದೆ
ಇಂತಹ ನಾಯಕನನ್ನು ಪಡೆದ ಭಾರತೀಯರೇ
ಅದೃಷ್ಟವಂತರು ಎಂದು ವಿದೇಶಗಳ ಜನ
ಮಾತನಾಡುತ್ತಿದ್ದಾರೆ. ಇಂತಹ ನಾಯಕನನ್ನು
ಉಳಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯರ
ಕರ್ತವ್ಯವಾಗಿದೆ ಹೀಗಾಗಿ ಎಲ್ಲರೂ ಮುಂಬರುವ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡುವ ಪಣತೊಡೋಣ ಎಂದರು.
ಈ ಸಂದರ್ಭದಲ್ಲಿ ಮುಖಂಡ ಶೀಲವಂತ ಉಮರಾಣಿ, ಶಾಂತು ಕಂಬಾರ, ಭೀಮಾಶಂಕರ ಆಳೂರ, ಮಹಾದೇವ
ಗುಡ್ಡೆವಾಡಿ, ಶಾಂತು ಕಂಬಾರ, ಅನುಸೂಯಾ ಮದರಿ, ಅಶೋಕ ಗೌಡ ಬಿರಾದಾರ, ಅಶೋಕ ಅಕಲಾದಿ, ಸಂಜೀವ ದಶವಂತ ನೇತಾಜಿ ಪವಾರ ದತ್ತ ಬಂಡೇನವರ, ಅಕ್ಷಯ್ ಸಿಂಧೆ ರಾಮಸಿಂಗ ಕನ್ನೊಳ್ಳಿ, ಅನಿಲ ಗೌಡ ಬಿರಾದಾರ ಪ್ರವೀಣ ಮಠ, ರಾಜು ಪಡಿಗೇರ, ಮತ್ತಿತರಿದ್ದರು.
ಇಂಡಿ ಪಟ್ಟಣದ ಬಸವೇಶ್ವರ ವೃತ್ತ್ದಲ್ಲಿ ಬಿಜೆಪಿ
ಕಾರ್ಯಕರ್ತರಿಂದ ವಿಜಯೋತ್ಸವ