ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯವಾಗಿದೆ : ಈರಣ್ಣ ಡಂಗಿ..
ಇಂಡಿ : ಪಂಚಮಸಾಲಿ ಸಮುದಾಯ ಭೂಮಿ ನಂಬಿಕೊಂಡು ಬದುಕು ಕಟ್ಟಿಕೊಂಡವರು. ಇಂದು ಆರ್ಥಿಕ ಶೈಕ್ಷಣಿಕವಾಗಿ ಹಿಂದುಳಿದಿದೆ. ಹಾಗಾಗಿ ೨ ಎ ಮೀಸಲಾತಿಗಾಗಿ ಸುಮಾರು ದಿನಗಳಂದ ವಿವಿಧ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೆವೆ. ಆದರೆ ಸರಕಾರ ಭರವಸೆಕೊಟ್ಟು ಈಗ ಮೊಸ ಮಾಡಿದೆ ಎಂದು ಈರಣ್ಣ ಡಂಗಿ ಹೇಳಿದರು.
ಬೆಂಗಳೂರಿನಲ್ಲಿ ಲಿಂಗಾಯತ ಪಂಚಮಸಾಲಿ ಬಸವಜಯಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಲಿಂಗಾಯತ ಪಂಚಮಸಾಲಿ 2 ಎ ಮೀಸಲಾತಿ ಹೋರಾಟದಲ್ಲಿ ಭಾಗ ವಹಿಸಿ ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದರು. ಕೊಟ್ಟ ಮಾತಿನಂತೆ ನಡೆಯುವ ಜವಾಬ್ದಾರಿ ಹೊಂದಿರುವ ಸರಕಾರ ನಮ್ಮ ಬೇಡಿಕೆ ಪೂರೈಕೆಸಬೇಕು. ಇಲ್ಲದಿದ್ದರೆ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ ಎಂದು ಹೇಳಿದರು.