ವಿಶ್ವಕಪ್ ಪಂದ್ಯದಲ್ಲಿ ಶುಭಾರಂಭ ಮಾಡಿದ ಪಾಕ್..!
ವೈಸ್ ಆಪ್ ಜನತಾ ಡೆಸ್ಕ್ ನ್ಯೂಸ್ : 81 ರನ್ ಗಳ ಅಂತರದಿಂದ ಪಾಕಿಸ್ತಾನ ತಂಡ ನೆದರ್ಲೆಂಡ್ಸ್ ವಿರುದ್ಧ ಬಾರಿ ಜಯಭೇರಿ ಗಳಿಸಿ ವಿಶ್ವಕಪ್ ಆಡಿದ ಮೊದಲ ಪಂದ್ಯದಲ್ಲಿ ಶುಭಾರಂಭ ಮಾಡಿದೆ.
ಶುಕ್ರವಾರ ಬಾಸ್ ಡೀ ಲೀಡೆ ನಡೆದ ವಿಶ್ವಕಪ್ ಪಂದ್ಯದಲ್ಲಿ (67 ರನ್ ಹಾಗೂ 4 ವಿಕೆಟ್‌ಗಳು) ಅವರ ಆಲ್‌ರೌಂಡ್ ಪ್ರದರ್ಶನದ ಹೊರತಾಗಿಯೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅಧಿಕಾರಯುತ ಪ್ರದರ್ಶನ ತೋರಿದ ಪಾಕಿಸ್ತಾನ ತಂಡ, ನೆದರ್ಲೆಂಡ್ಸ್ ವಿರುದ್ದ 81 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಪ್ರಸ್ತುತ ನಡೆಯುತ್ತಿರುವ 2023ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ನೀಡಿದ್ದ 287 ರನ್ ಗುರಿ ಹಿಂಬಾಲಿಸಿದ ನೆದರ್ಲೆಂಡ್ಸ್ ತಂಡದ ಪರ ವಿಕ್ರಮ್‌ಜೀತ್ ಸಿಂಗ್ (52) ಹಾಗೂ ಬಾಸ್ ಡೀ ಲೀಡೆ (67) ಅವರ ಅರ್ಧಶತಕಗಳ ಹೊರತಾಗಿಯೂ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಅಂತಿಮವಾಗಿ ನೆದರ್ಲೆಂಡ್ಸ್ ತಂಡ 41 ಓವರ್‌ಗಳಿಗೆ 205 ರನ್‌ಗಳಿಗೆ ಆಲ್‌ಔಟ್ ಆಯಿತು.
ಭಾರತೀಯ ಮೂಲದ ವಿಕ್ರಮ್‌ಜೀತ್ ಸಿಂಗ್ 67 ಎಸೆತಗಳಲ್ಲಿ 52 ರನ್ ಗಳಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಬಾಸ್ ಡೀ ಲೀಡೆ ಅವರು 68 ಎಸೆತಗಳಲ್ಲಿ 676 ರನ್‌ಗಳನ್ನು ಗಳಿಸಿದ್ದರು. ಆದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಸಮಯ ಕಳೆಯಲು ಪಾಕ್ ಬೌಲರ್‌ಗಳು ಅವಕಾಶ ನೀಡಲಿಲ್ಲ. ಇದರಿಂದಾಗಿ ನೆದರ್ಲೆಂಡ್ಸ್ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಸೋಲಬೇಕಾಯಿತು.
ಪಾಕಿಸ್ತಾನ Vs ನೆದರ್ಲ್ಯಾಂಡ್ಸ್ ಪಂದ್ಯದ ಸ್ಕೋರ್‌ಕಾರ್ಡ್
ಪಾಕಿಸ್ತಾನ ಪರ ಹ್ಯಾರಿಸ್ ರೌಫ್ 3 ವಿಕೆಟ್ ಪಡೆದರೆ, ಹಸನ್ ಅಲಿ ಎರಡು ವಿಕೆಟ್ ಪಡೆದರು. ಬೌಲರ್ ಮಾಡಿದ ಇನ್ನುಳಿದ ಎಲ್ಲಾ ಬೌಲರ್‌ಗಳು ಕೂಡ ತಲಾ ಒಂದೊಂದು ವಿಕೆಟ್ ಅನ್ನು ತಮ್ಮ ಖಾತೆಗೆ ಹಾಕಿಕೊಂಡರು.
ಸ್ಕೋರ್ ವಿವರ
ಪಾಕಿಸ್ತಾನ: 49 ಓವರ್‌ಗಳಿಗೆ 286-10 (ಮೊಹಮ್ಮದ್ ರಿಝ್ವಾನ್ 68, ಸೌದ್ ಶಕೀಲ್ 68; ಮೊಹಮ್ಮದ್ ನವಾಜ್ 39, ಶದಾಬ್ ಖಾನ್ 32; ಬಾಸ್ ಡೀ ಲೀಡೆ 62ಕ್ಕೆ 4)
ನೆದರ್ಲೆಂಡ್ಸ್: 41 ಓವರ್‌ಗಳಿಗೆ 205-10 (ಬಾಸ್ ಡೀ ಲೀಡೆ 67, ವಿಕ್ರಮ್‌ಜೀತ್ ಸಿಂಗ್ 52; ಹ್ಯಾರಿಸ್ ರೌಫ್ 43ಕ್ಕೆ 2, ಹಸನ್ ಅಲಿ 33ಕ್ಕೆ 2)