ಪಡನೂರಿನ ಪ್ರತಿಭೆಗೆ ಅಮೇರಿಕ ಅಧ್ಯಕ್ಷರಿಂದ ಪ್ರಶಂಸೆಯಾಗಿತ್ತು!
ದಶರಥ ಕೋರಿ ಶಿಕ್ಷಕ, ಸಾಹಿತ್ಯ.
ಇಂಡಿ : ನಾಲ್ಕು ದಶಕದ ಹಿಂದೆ ಪಡನೂರಿನ ಪ್ರತಿಭೆಗೆ ಅಮೇರಿಕ ಅಧ್ಯಕ್ಷರಿಂದ ಪ್ರಶಂಸೆಯಾಗಿತ್ತು. ಗ್ರಾಮದ ಖಗೋಳ ವಿಜ್ಞಾನಿ ಸುಮಾರು ೧೬ ಖಗೋಳ ಸಿದ್ಧಾಂತಗಳ ಸ್ವತಃ ಸಂಶೋಧನೆ ಮಾಡಿ, ಅವುಗಳಲ್ಲಿ ಪ್ರಖರವಾದ ಕೆಲವು ಸಿದ್ಧಾಂತಗಳನ್ನು ಸುಮಾರು ೩೬ ರಾಷ್ಟ್ಟಗಳಿಗೆ ಸಲ್ಲಿಸಿದ ಕೀರ್ತಿ ವಿಜ್ಞಾನಿ ಡಾ || ಆರ್ ಸಿ ಹಿರೇಮಠ ಅವರಿಗೆ ಸಲ್ಲುತ್ತದೆ ಎಂದು ಶಿಕ್ಷಕ, ಸಾಹಿತಿ ದಶರಥ ಕೋರಿ ಹೇಳಿದರು.
ತಾಲ್ಲೂಕಿನ ಹೊಸ ಪಡನೂರ ಗ್ರಾಮದ ಸರಕಾರ ಪ್ರಾಥಮಿಕ ಶಾಲೆಯ 7 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಅಮೇರಿಕಾ ದೇಶವು ಅಪೋಲೋ ನೌಕೆ ಚಂದ್ರನಲ್ಲಿಗೆ ಕಳುಹಿಸಿ, ಅಲ್ಲಿಂದ ಕಲ್ಲು-ಮಣ್ಣು ಪರೀಕ್ಷೆ ಕೊಡುವ ಮುನ್ನವೇ, ಖಗೋಳ ವಿಜ್ಞಾನಿ ಡಾ|| ಆರ್ ಸಿ ಹಿರೇಮಠ ಅವರು, ಚಂದ್ರನ ನಿಕ್ಷೇಪಗಳಾದ ಕಲ್ಲು-ಮಣ್ಣಿನ್ನು ನಿಖರ ಮಾಹಿತಿಯನ್ನು ಅಮೇರಿಕ ಅಧ್ಯಕ್ಷರಿಗೆ ಕಳುಹಿಸಿಕೊಟ್ಟಿದ್ದರು. ಈ ಮಹತ್ವದ ಸಂಶೋಧನಾ ವರದಿಗೆ ಅಮೇರಿಕ ಅಧ್ಯಕ್ಷ ಅಭಿನಂದನೆ ಸಲ್ಲಿಸಿದರು. ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಂದ ದೆಹಲಿಯಲ್ಲಿ ಡಾII ಆರ್ ಸಿ ಹಿರೇಮಠರವರಿಗೆ ಸನ್ಮಾನವಾಗಿತ್ತು. ಇಂತಹ ಪವಿತ್ರ ಮಣ್ಣಿನಲ್ಲಿ ಜನಿಸಿದ ವಿದ್ಯಾರ್ಥಿಗಳು ಖಗೋಳ ವಿಜ್ಞಾನಿ ಡಾ ಆರ್ ಸಿ ಹಿರೇಮಠರವರ ಅಧ್ಯಯನವನ್ನು ವಿಧ್ಯಾರ್ಥಿಗಳು ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ಭೀಮಾಶಂಕರ ಬೈರಜಿ ಮಾತನಾಡುತ್ತ ಶಾಲಾ ಮಕ್ಕಳು ಸಮಯ ಪ್ರಜ್ಞೆ ಕರ್ತನ್ಯ ಪ್ರಜ್ಞೆ ರಾಷ್ಟೀಯ ಪ್ರಜ್ಞೆಯನ್ನು ಮೈಮನಗಳಲ್ಲಿ ಅಳವಡಿಸಿಕೊಳ್ಳಬೇಕೆಂದು ಮಕ್ಕಳಿಗೆ ಕರೆನೀಡಿದರು.
ಗ್ರಾ.ಪಂ.ಅಧ್ಯಕ್ಷ ಅಧ್ಯಕ್ಷ ಷಡಕ್ಷರಿ ಮೇತ್ರಿ, ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಮಾಂತೇಶ ಅವರಾದಿ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಪಂಚಪ್ಪ ಅವರವತ್ತು, ಮುಖ್ಯೋಪಾಧ್ಯಾಯ ಕೆ ಆರ್ ಉಮರಾಣಿ, ಎನ್ ಕೆ ಸಕ್ಕರಶೆಟ್ಟಿ, ಶಿಕ್ಷಕ ಎಸ್ ಬಿ ಪಾಟೀಲ, ಸಿ. ಎಸ್ ಮೋಟಗಿ ಸಿ. ಡಿ. ಮಠಪತಿ, ದೇವಕಿ ಎಸ್ ಗಾಯಕವಾಡ ಉಪಸ್ಥಿತರಿದ್ದರು. ಇನ್ನೂ ಆದರ್ಶ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಷಹಾಜಿ ಪಾಟೀಲ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.