ಇಂಡಿ : ಸಿಡಿಲು ಬಡಿದ ಪರಿಣಾಮ ಎತ್ತು ಅಸುನೀಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚೋರಗಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಸಿದ್ದಣ್ಣ ಭೀಮರಾಯ್ ಬಿರಾದಾರ ಎಂಬುವರ ಎತ್ತು ಸಾವನ್ನಪ್ಪಿದೆ. ಮನೆಯ ಎದುರು ನಿಂತಾಗ ಸಿಡಿಲು ಬಡಿದಿದೆ. ಸುಮಾರು ಒಂದು ಲಕ್ಷ ಮೌಲ್ಯದ ಎತ್ತು ಮೃತಪಟ್ಟಿದೆ. ಝಳಕಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.