ಹೃದಯ ಬಾವುದಿಂದ ಎತ್ತು ಸಾವು. ಸೂಕ್ತ ಪರಿಹಾರಕ್ಕೆ ಆಗ್ರಹ..!
ಇಂಡಿ : ಹೃದಯ ಬಾವುದಿಂದ ₹1.5 ಲಕ್ಷದ ಮೌಲ್ಯದ ರೈತನ ಮಿತ್ರ ಎತ್ತು ಸಾವಿಗೀಡಾದ ಘಟನೆ ತಾಲೂಕಿನ ಹೊರ್ತಿ ಗ್ರಾಮದಲ್ಲಿ ನಡೆದಿದೆ.
ಹೌದು ತಾಲೂಕಿನ ಹೊರ್ತಿ ಗ್ರಾಮದ ಅಪ್ಪರಾಯಗೌಡ ಪಾಟೀಲ ಎಂಬುವರು ಎತ್ತು, ಇಂದು ಹೃದಯ ಬಾವುದಿಂದ ಸಾವಿಗೀಡಾಗಿದೆ. ಇನ್ನೂ ಸ್ಥಳಕ್ಕೆ ಪಶುವೈದ್ಯರು ಬೇಟಿ ನೀಡಿ ಪರಿಶೀಲನೆ ಮಾಡಿದರು. ತದನಂತರ ಪಂಚನಾಮೆ ಮಾಡಿ ಸಕಾರಾತ್ಮಕ ಸ್ಪಂದಿಸುವ ಬಗ್ಗೆ ಹೇಳಿದರು. ಅದಲ್ಲದೇ ಸ್ಥಳಕ್ಕೆ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಬೇಟಿ ನೀಡಿ ಸ್ವಾಂತನ ಹೇಳಿ ಮಾತಾನಾಡಿದರು. ಬರಗಾಲ ಸಮಯದಲ್ಲಿ ರೈತನ ಮಿತ್ರ ಎತ್ತು ಮರಣ ಹೊಂದಿದ್ದು, ರೈತನ ಬಾಳಿಗೆ ಗಾಯದ ಮೇಲೆ ಬರೆ ಎಳೆದಂತೆಯಾಗಿದೆ. ಕೂಡಲೇ ಸಂಬಂದಿಸಿದ ಇಲಾಖೆ ಅವರು ಸೂಕ್ತ ಪರಿಹಾರ ನೀಡಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.