ಯಾದಗಿರಿ: ರಾಜ್ಯದ 31 ಜಿಲ್ಲೆಗಳು, 225 ತಾಲ್ಲೂಕು 6215 ಪಂಚಾಯಿತಿಗಳ ಪೈಕಿ ಯಾದಗಿರಿ ಜಿಲ್ಲೆಯ ವಡಗೇರಿ ತಾಲ್ಲೂಕಿನ ಉಳ್ಳೆಸುಗೂರು ಗ್ರಾಮ ಪಂಚಾಯಿತಿ ಯವುದೇ ಮೂಲ ಸೌಕರ್ಯ ಇಲ್ಲದೇ ನರಳುತ್ತಿದೆ ಎಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಆರೋಪಿಸಿದರು. ಗ್ರಾಮಸ್ಥರು ಖಾಲಿ ಕೊಡ ಪೊರಕೆ ಹಿಡಿದು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಗ್ರಾ. ಪಂ ಕೇಂದ್ರ ಸ್ಥಾನವಾದ ಉಳ್ಳೆಸುಗೂರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ವಾರ್ಡ ನಂ, 2 ಮತ್ತು 3 ರಲ್ಲಿ ಸಂಚರಿಸಿ ಸಮಸ್ಯೆಯನ್ನು ಕಣ್ಣಾರೆ ಕಂಡು ಗ್ರಾಮಕ್ಕೆ ಗ್ರಾಮವೇ ಗಬ್ಬೆದ್ದು ನಾರುತ್ತಿತ್ತು ಎಂದು ದೂರಿದರು.
ಇಲ್ಲಿನ ಪರಿಸ್ಥಿತಿಯ ಬಗ್ಗೆ ಮುದ್ನಾಳ ಅವರು ಜಿಪಂ ಸಿಇಓ ಅವರ ಗಮನಕ್ಕೆ ತಂದಿದ್ದರು. ಸಿಇಒ ಅವರು ಪಿಡಿಓ ಅವರನ್ನು ಅಮಾನತುಗೊಳಿಸಿ ಆದೇಶ ನೀಡಿದ್ದರು. ಗ್ರಾಮಕ್ಕೆ ತಾತ್ಕಾಲಿಕವಾಗಿ ಟ್ಯಾಂಕರ್ ನೀರು ಪೂರೈಕೆಗೆ ವ್ಯವಸ್ಥೆ ಮಾಡಿದರು.
ಈದೀಗ ಅಧಿಕಾರಿಗಳು ಅಭಿವೃದ್ಧಿಗೆ ಮುಂದಾಗಿದ್ದು, ಈ ಹಿಂದೆ ಎರಡು ಕೊಳವೆ ಬಾವಿ ಕೊರೆದಿದ್ದರು. ಒಂದರಲ್ಲಿ ನೀರು ಬಂದರೆ ಇನ್ನೊಂದು ಕೊಳವೆ ಬಾವಿ ವಿಫಲವಾಗಿದೆ. ಮತ್ತೊಂದು ಕೊಳವೆ ಬಾವಿ ಕೊರೆಸಿದ್ದು, ಗ್ರಾಮಸ್ಥರು ಹರ್ಷಗೊಂಡಿದ್ದಾರೆ ಎಂದು ತಿಳಿಸಿದರು.