ವಿಜಯಪುರ : ವಕೀಲ ಎಸ್ ಎಸ್ ಖಾದ್ರಿಯನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ನಗರದ ಡಿಸಿ ಕಚೇರಿಯ ಎದುರು ಡಿಎಸ್ಎಸ್ ಅಂಬೇಡ್ಕರವಾದ ಸಂಘಟನೆಯವರು ಪ್ರತಿಭಟನೆ ನಡೆಸಿದರು. ಖಾದ್ರಿ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ದಲಿತ ಮಹಿಳೆ ಮೇಲೆ ಹಲ್ಲೆಗೈದು ದೌರ್ಜನ್ಯ ಮಾಡಿದ್ದಾನೆ. ಇನ್ನು ದಲಿತ ಮತ್ತು ಅಲ್ಫಸಂಖ್ಯಾತ ಸಾಮಾಜಿಕ ಹೋರಟಗಾರರಿಗೆ ಹಣ ಕೊಟ್ಟು ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದರು. ಅದಕ್ಕಾಗಿ ತಕ್ಷಣವೇ ಜಿಲ್ಲಾಡಳಿತ ಗಡಿಪಾರು ಮಾಡಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಹರಿಜನ, ಸುಖದೇವ ಮೇಲಿನಕೇರಿ, ಚಂದ್ರಶೇಖರ ಮೇಲಿನಮನಿ, ಪರಶುರಾಮ ಭಾವಿಕಟ್ಟಿ, ಪರಶುರಾಮ ಡೊಂಬಳ, ಬಸವರಾಜ ಮಾಶ್ಯಾಳಕರ, ಅಂಬರೀಶ್ ಹೊಸಮನಿ, ಯಲ್ಲಪ್ಪ ಕಾಂಬಳೆ ಇನ್ನೂ ಅನೇಕರು ಉಪಸ್ಥಿತರು.