ನಮ್ಮದು ಆಲಿಸುವ ಸರಕಾರ –
ಯಶವಂತರಾಯಗೌಡ
ಇಂಡಿ : ಪ್ರತಿ ದಿನವು ಜನರು,ಜನಪ್ರತಿನಿಧಿಗಳು, ಅಧಿಕಾರಿಗಳು, ಸರಕಾರೇತರ, ಸಂಸ್ಥೆಗಳಿಂದ ಸಲಹೆ ಸೂಚನೆಗಳನ್ನು ಕೇಳುತ್ತಿದ್ದು ನಮ್ಮದು ಆಳುವದಲ್ಲ ಆಲಿಸುವ ಸಿದ್ದರಾಮಯ್ಯನವರ ಸರಕಾರ ಕಾಂಗ್ರೆಸ್
ಸರಕಾರ ಎಂದು ಶಾಸಕ ಯಶವಂತರಾಯಗೌಡ
ಪಾಟೀಲರು ಹೇಳಿದರು.
ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಶ್ರೀ ಶಿವಯೋಗೀಶ್ವರ ದೇವರ ನೂತನ ಕಟ್ಟಡ
ಶಿಲನ್ಯಾಸ ಹಾಗೂ ದೇವರ ಉತ್ಸವ ಸಹಸ್ರ
ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಸಾಲೋಟಗಿಯ ಶಿವಯೋಗೀಶ್ವರರು ಧರ್ಮ,ಸಂಸ್ಕøತಿಯ ಪ್ರತಿಪಾದಕರು. ಈ ಭಾಗದಲ್ಲಿ ಆರಾಧ್ಯ ದೈವರಾಗಿ ಅನೇಕ ಜನರ ಕಲ್ಯಾಣ ಮಾಡಿದವರು. ಅವರ ನೂತನ
ದೇವಸ್ಥಾನದ ಕಟ್ಟಡಕ್ಕೆ ಒಂದು ಕೋಟಿ ರೂ ಹಣ
ನೀಡುವದಾಗಿ ತಿಳಿಸಿದರು. ನೋಣವಿಕೆರೆಯ ಡಾ.
ಕರಿವೃಷಭ ದೇಶಿಕೇಂದ್ರ ಶಿವಯೋಗಿಗಳು ಮಾತನಾಡಿ ದೇವಸ್ಥಾನಗಳು ಮನುಷ್ಯನ ಶ್ರದ್ಧಾ ಹಾಗೂ ನೆಮ್ಮದಿಯ ಕೇಂದ್ರಗಳು. ಈ ಭಾಗವನ್ನು ಪಾವನಗೊಳಿಸಿದ ಶ್ರೀ
ಶಿವಯೋಗಿಶ್ವರರ ನೂತನ ದೇವಸ್ಥಾನ
ನಿರ್ಮಿಸುತ್ತಿರುವದು ಈ ಜನರ ಸುದೈವ ಎಂದರು.
ಅಕ್ಕಲಕೋಟದ ಶಿವಾನಂದ ಮಹಾಸ್ವಾಮಿಗಳು
ಮಾತನಾಡಿ ಮನುಷ್ಯನಿಗೆ ಹಣ ಐಶ್ವರ್ಯ ನೀಡದಿರುವ
ಮನಶಾಂತಿಯನ್ನು ದೇವಾಲಯಗಳು ನೀಡುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ದೇವಾಲಯಗಳಲ್ಲಿ ಅರ್ಧ ತಾಸು ಕುಳಿತು ಶ್ರೀ ಶಿವಯೋಗೀಶ್ವರರನ್ನು ಧ್ಯಾನ ಮಾಡಿದರೆ ಮನಸ್ಸಿಗೆ ಸಮಾಧಾನ ಸಿಗುತ್ತದೆ ಎಂದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು ಮಾತನಾಡಿ ಸಾಲೋಟಗಿ ಗ್ರಾಮದವರು ಸೇರಿ ಐದು ಕೋಟಿ ರೂ ವೆಚ್ಚದಲ್ಲಿ ನೂತನ ಶಿವಯೋಗೀಶ್ವರ ದೇವಾಲಯ ಕಟ್ಟುತ್ತಿರುವದು ಹೆಮ್ಮೆಯ ವಿಷಯ. ದೇವಾಲಯವನ್ನು ನಿರ್ಮಿಸುತ್ತಿರುವದು ಸೇವಾ ಕಾರ್ಯ ಎಷ್ಟು ಶ್ಲಾಘನೆ ಮಾಡಿದರೂ ಸಾಲದು ಎಂದರು.
ನಾವದಗಿಯ ಶಿವಯೋಗಿ ಶಿವಾಚಾರ್ಯರರು, ಕೊಟ್ಟುರದ ಸಿದ್ದಲಿಂಗ ಶಿವಾಚಾರ್ಯರರು, ಸಾಲೋಟಗಿಯ ಸೋಮಯ್ಯ ಹಿರೇಪಟ್ಟ,
ಶಿವಪ್ರಸಾದ ಚಿಕ್ಕಪಟ, ಸನ್ನತಿಯ ಸೋಮಯ್ಯ ಗುಡಿ,ಚಿಕ್ಕ ಮಣೂರದ ಶ್ರೀಶೈಲಯ್ಯ ಹಿರೇಪಟ್ಟ, ಬಿಜೆಪಿ ಇಂಡಿ ತಾಲೂಕಾ ಮಂಡಲ ಪ್ರಧಾನ ಮಲ್ಲಿಕಾರ್ಜುನ ಕಿವಡೆ ಮಾತನಾಡಿದರು.
ಮಾಜಿ ಜಿ.ಪಂ ಅಧ್ಯಕ್ಷ ಶಿವಯೋಗಿ ನೇದಲಗಿ,ರಾಜ್ಯ ಕೆಪಿಸಿಸಿ ಸದಸ್ಯ ಮಲ್ಲನಗೌಡ ಪಾಟೀಲ,ಬಸವರಾಜ ಕಣ್ಣಿ
ಗುರುಗಳು,ಭೀಮರಾಯಗೌಡ ಪಾಟೀಲ, ಗಡ್ಡೆಪ್ಪ ಜೊತಗೊಂಡ, ಜೀತಪ್ಪ ಕಲ್ಯಾಣಿ, ಅಪ್ಪಾಸಾಹೇಬ ಕೊರಳ್ಳಿ,ಕಳಸಗೊಂಡ ಬಗಲಿ, ಚನ್ನಕೇಶವ ಕುಲಕರ್ಣಿ, ಧರ್ಮರಾಯ ಈರಕಾರ ಮತ್ತಿತರಿದ್ದರು.