ಕಾರ್ಖಾನೆಯಲ್ಲಿ ವಿರೋಧಪಕ್ಷ ಇದ್ದಾಗ ಮಾತ್ರ ಅವ್ಯವಹಾರ, ಭ್ರಷ್ಟಾಚಾರ ತಡೆಯಲು ಸಾಧ್ಯ..! ಬಿಜೆಪಿ & ಜೆಡಿಎಸ್ ಜಂಟಿ ಸುದ್ದಿಗೊಷ್ಠಿ
ಇಂಡಿ: ಮರಗೂರದ ಭೀಮಾಶಂಕರ ಸಹಕಾರಿ ಸಕ್ಕರೆ
ಕಾರ್ಖಾನೆಗೆ ಫೆಬ್ರವರಿ 11 ರಂದು ನಡೆಯಲಿರುವ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಿದ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ, ನಾಗನಾಥ ಬಿರಾದಾರ ಹಾಗೂ ಮುತ್ತಪ್ಪ ಪೋತೆ ಅವರಿಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಆಶೀರ್ವದಿಸಬೇಕು ಎಂದು ಬಿಜೆಪಿ ರೈತ ಮೋರ್ಚ ಜಿಲ್ಲಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಜೆಡಿಎಸ್ ತಾಲೂಕಾಧ್ಯಕ್ಷ ಬಿ.ಡಿ. ಪಾಟೀಲ ಜಂಟಿಯಾಗಿ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಅಖಂಡ ಇಂಡಿ ಹಾಗೂ ಸಿಂದಗಿ ತಾಲೂಕಿನ ಹಳ್ಳಿಗಳಿಗೆ ಭೇಟಿ ನೀಡಿದ್ದು, ಅಲ್ಲಿನ ಮತದಾರರು ಬಗಲಿ ಸಾಹೇಬರ ಬಗ್ಗೆ ಅತಿ ಕಾಳಜಿ ತೋರಿದ್ದು, ಕಾರ್ಖಾನೆಯಲ್ಲಿ ವಿರೋಧಪಕ್ಷ ಇದ್ದಾಗ ಮಾತ್ರ ಅವ್ಯವಹಾರ ಭ್ರಷ್ಟಾಚಾರ
ತಡೆಯಬಹುದಾಗಿದೆ. ಹೀಗಾಗಿ ಡಾ. ಬಗಲಿ ಅವರನ್ನು ಮತ್ತು ಅವರ ಪೆನಲ್ ಸದಸ್ಯರಿಗೆ ಮತದಾನ ಮಾಡುತ್ತೇವೆ ಎಂದು ಭರವಸೆ ನೀಡಿದ್ದು, ಅಖಂಡ ಇಂಡಿ ಹಾಗೂ ಸಿಂದಗಿ ತಾಲೂಕಿನ ಶೇರುದಾರರು ಬಗಲಿ ಅವರ ಪೆನಾಲಿಗೆ ಮತದಾನ ಮಾಡಬೇಕು ಎಂದು ವಿನಂತಿಸಿದರು. ಡಾ. ಸಾರ್ವಭೌಮ ಬಗಲಿ ಅವರು ಕಾರ್ಖಾನೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದರೆ ಅಲ್ಲಿ ಯಾವುದೇ ಭ್ರಷ್ಟಾಚಾರವಾಗದಂತೆ ತಡೆಯುವ ಶಕ್ತಿ
ಹೊಂದಿದ್ದಾರೆ. ರೈತರಿಗೆ ಅನ್ಯಾಯವಾಗುವ ಸಂದರ್ಭ
ಬಂದರೆ ಅವರು ಧ್ವನಿ ಎತ್ತುತ್ತಾರೆ. ಬಗಲಿ ಸಾಹೇಬರು
ಯಾವಾಗಲೂ ರೈತ ಪರವಾಗಿದ್ದು, ಶೇರುದಾರರು ಬಗಲಿ
ಸಾಹೇಬರ ಪೆನಾಲಿಗೆ ಹೆಚ್ಚಿನ ಮತದಾನ ಮಾಡಿ
ಆಶೀರ್ವದಿಸಬೇಕೆಂದು ವಿನಂತಿಸಿದರು.
ಪತ್ರಿಕಾಗೋಷ್ಠೀಯಲ್ಲಿ ಶ್ರೀಶೈಲಗೌಡ ಪಾಟೀಲ, ಮಲ್ಲು
ಹಾವಿನಾಳಮಠ, ಸಿದ್ದರಾಮ ಹಂಜಗಿ, ಯಶವಂತ ಕಾಡೆ,
ಅಶೋಕ ಭೂತಾಳಿ, ಶರಣು ಡಂಗಿ, ರವಿಗೌಡ ಪಾಟೀಲ,
ಶಿವುಬಾಳ ಬಾರಿಕಾಯಿ, ಮಹಾದೇವ ಆಳೂರ, ಚಂದ್ರಶೇಖರ ಬಿರಾದಾರ ಸೇರಿದಂತೆ ಅನೇಕರು ಇದ್ದರು.
ಇಂಡಿ: ಕಾಸುಗೌಡ ಬಿರಾದಾರ ಹಾಗೂ ಬಿ.ಡಿ. ಪಾಟೀಲ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದರು.