• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ದಾರವಾಡ ಮಹಾನಗರ ಪಾಲಿಕೆ ಚುನಾವಣೆ ಪಿಕ್ಸ್..

    ದಾರವಾಡ ಮಹಾನಗರ ಪಾಲಿಕೆ ಚುನಾವಣೆ ಪಿಕ್ಸ್..

    ಸುವರ್ಣ ಅವಕಾಶ ; ಇಂದೇ ಪ್ರವೇಶ ಪಡೆಯಿರಿ..!

    ಸುವರ್ಣ ಅವಕಾಶ ; ಇಂದೇ ಪ್ರವೇಶ ಪಡೆಯಿರಿ..!

    ಹಣಬಲ ನನ್ನನ್ನು ಸೋಲಿಸಿತು..! ಬಿ.ಡಿ. ಪಾಟೀಲ..

    ಹಣಬಲ ನನ್ನನ್ನು ಸೋಲಿಸಿತು..! ಬಿ.ಡಿ. ಪಾಟೀಲ..

    ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ..!

    ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ..!

    ಯಶವಂತರಾಯಗೌಡ ಪಾಟೀಲರಿಗೆ  ಸಚಿವ ಸ್ಥಾನ ನೀಡಲು ಆಗ್ರಹ..

    ಯಶವಂತರಾಯಗೌಡ ಪಾಟೀಲರಿಗೆ  ಸಚಿವ ಸ್ಥಾನ ನೀಡಲು ಆಗ್ರಹ..

    ಹಳ್ಳಿ ಹುಡಗನ ಸಾಧನೆ..ಮಸಳಿ ಗ್ರಾಮದಲ್ಲಿ ಪಟಾಕಿ ಹಬ್ಬ..!

    ಹಳ್ಳಿ ಹುಡಗನ ಸಾಧನೆ..ಮಸಳಿ ಗ್ರಾಮದಲ್ಲಿ ಪಟಾಕಿ ಹಬ್ಬ..!

    ಇಂಡಿ ಮತಕ್ಷೇತ್ರದ ಭಿವೃದ್ಧಿಗಾಗಿ ಸಚಿವ ಸ್ಥಾನ ಕೋಡಿ: ಪುರಸಭೆ ಸದಸ್ಯ ಇಂಡಿಕರ

    ಇಂಡಿ ಮತಕ್ಷೇತ್ರದ ಭಿವೃದ್ಧಿಗಾಗಿ ಸಚಿವ ಸ್ಥಾನ ಕೋಡಿ: ಪುರಸಭೆ ಸದಸ್ಯ ಇಂಡಿಕರ

    ಕಿರಿಯ/ಹಿರಿಯ ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ..

    ಕಿರಿಯ/ಹಿರಿಯ ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲೆಗೆ ಶಿಕ್ಷಕರು ಬೇಕಾಗಿದ್ದಾರೆ..

    ಅಗರಖೇಡ ಗ್ರಾಮದಲ್ಲಿ ಕಾಸುಗೌಡ ಪಾಟೀಲರ ಪ್ರಚಾರ..

    ಅಗರಖೇಡ ಗ್ರಾಮದಲ್ಲಿ ಕಾಸುಗೌಡ ಪಾಟೀಲರ ಪ್ರಚಾರ..

    ಬರದನಾಡಿನ ಸೇವಕನಾಗಿ ಶ್ರಮಿಸುವೆ : ಬಿ.ಡಿ. ಪಾಟೀಲ

    ಬರದನಾಡಿನ ಸೇವಕನಾಗಿ ಶ್ರಮಿಸುವೆ : ಬಿ.ಡಿ. ಪಾಟೀಲ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      5 ವರ್ಷಗಳಲ್ಲಿ ಜಿಲ್ಲೆಗೊಂದು ಅತ್ಯುತ್ಕೃಷ್ಟ ಎಂಜಿನಿಯರಿಂಗ್ ಕಾಲೇಜು- ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್:

      August 7, 2022
      0
      5 ವರ್ಷಗಳಲ್ಲಿ ಜಿಲ್ಲೆಗೊಂದು ಅತ್ಯುತ್ಕೃಷ್ಟ ಎಂಜಿನಿಯರಿಂಗ್ ಕಾಲೇಜು- ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್:
      0
      SHARES
      129
      VIEWS
      Share on FacebookShare on TwitterShare on whatsappShare on telegramShare on Mail

      ರಾಜ್ಯದಲ್ಲಿರುವ 14 ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳೂ ಸೇರಿದಂತೆ ಒಟ್ಟು 30 ಎಂಜಿನಿಯರಿಂಗ್ ಕಾಲೇಜುಗಳನ್ನು ಇನ್ನು 5 ವರ್ಷಗಳಲ್ಲಿ ಅತ್ಯುತ್ಕೃಷ್ಟವಾಗಿ ಬೆಳೆಸುವ ರೀತಿ (RETE- ರೀಜನಲ್ ಎಕೋಸಿಸ್ಟಂ ಫಾರ್ ಟೆಕ್ನಿಕಲ್ ಎಕ್ಸಲೆನ್ಸ್) ಯೋಜನೆಗೆ ಸಂಬಂಧಿಸಿದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕರಿಸಿದ್ದಪ್ಪ ನೇತೃತ್ವದ ಉನ್ನತ ಸಮಿತಿಯು ಸರಕಾರಕ್ಕೆ ತನ್ನ ವರದಿ ಸಲ್ಲಿಸಿದೆ.

      ಜಿಲ್ಲೆಗೆ ತಲಾ ಒಂದರಂತೆ ಒಟ್ಟು 30 ಕಾಲೇಜುಗಳನ್ನು ಪ್ರಾದೇಶಿಕ ಉತ್ಕೃಷ್ಟ ತಾಂತ್ರಿಕ ಶಿಕ್ಷಣ ವ್ಯವಸ್ಥೆ (ರೀತಿ) ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇವುಗಳನ್ನು ಪರಿಪೋಷಣೆ ಇನ್ಕ್ಯುಬೇಷನ್), ಆ್ಯಕ್ಸಲೇಟರ್ ಮತ್ತು ಸೂಪರ್-30 ಎನ್ನುವ ಮೂರು ವಿಭಾಗಗಳಡಿ ಪರಿಗಣಿಸಲಾಗಿದ್ದು ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಮಾತ್ರ ಖಾಸಗಿ ಸಂಸ್ಥೆಗಳನ್ನು ಆರಿಸಿಕೊಳ್ಳಲಾಗುತ್ತದೆ.

      ಸರ್ಕಾರ ಉದ್ಯಮ ರಂಗ ಮತ್ತು ವಿಟಿಯು ಮೂರೂ ಸೇರಿಕೊಂಡು “ರೀತಿ” ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲಿದ್ದು, ತಲಾ ಶೇ.33 ರಷ್ಟು ವೆಚ್ಚ ಭರಿಸಲಿವೆ. ಇದು ಐತಿಹಾಸಿಕ ಕ್ರಮವಾಗಿದ್ದು, ಇದಕ್ಕೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಸೂಕ್ತ ಅವಕಾಶ ಒದಗಿಸಿದೆ. 2 ಮತ್ತು 3ನೇ ಸ್ತರದಲ್ಲಿರುವ ಎಂಜಿನಿಯರಿಂಗ್ ಕಾಲೇಜುಗಳನ್ನು ಉನ್ನತೀಕರಿಸುವ ಮೂಲಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಔದ್ಯಮಿಕ ಅರಿವು ಮತ್ತು ಸಂಶೋಧನೆ ಆಧರಿತ ತಾಂತ್ರಿಕ ಶಿಕ್ಷಣ ನೀಡುವುದು ಇದರ ಹೆಗ್ಗುರಿಯಾಗಿದೆ. ಈ ಮೂಲಕ ರಾಜ್ಯದ ಉದ್ದಗಲಕ್ಕೂ ಉತ್ಕೃಷ್ಣ ಗುಣಮಟ್ಟದ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಿರಬೇಕೆಂಬ ಕನಸನ್ನು ನನಸು ಮಾಡಲಾಗುತ್ತಿದೆ

      ಜಾಗತಿಕ ಅಗತ್ಯಗಳಿಗೆ ತಕ್ಕಂತೆ ಈ ಕಾಲೇಜುಗಳಲ್ಲಿ ವಿದ್ಯಾರ್ಥಿ ಕೇಂದ್ರಿತ ಕೌಶಲ್ಯ ಮತ್ತು ಸಂಶೋಧನಾ ಬಹುಶಿಸ್ತೀಯ ಶಿಕ್ಷಣ ಒದಗಿಸಲು ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಈ ಮೂಲಕ ವಿದ್ಯಾರ್ಥಿಗಳನ್ನು ಉದ್ಯೋಗಗಳಿಗೆ ಅರ್ಹರನ್ನಾಗಿ ಮಾಡಿ, ಅವರಲ್ಲಿ ಉದ್ಯಮಶೀಲತೆಯನ್ನೂ ಬೆಳೆಸಲು ಸಹಾಯವಾಗುತ್ತದೆ.

      ಅಲ್ಲದೆ ಕಳೆದ 03 ವರ್ಷಗಳಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ಉನ್ನತ ಶಿಕ್ಷಣ ಸಚಿವಾಲಯ ಹಾಗೂ ಕೌಶಲ್ಯಅಭಿವೃದ್ಧಿ ಇಲಾಖೆ ಹಲವಾರು ಮಹತ್ತರ ಬದಲಾವಣೆಯನ್ನು ತಂದಿದೆ. ಜತೆಗೆ, ಈ 30 ಕಾಲೇಜುಗಳಲ್ಲಿ ಸ್ವಯಂ ಮೌಲ್ಯಮಾಪನ ಮತ್ತು `ಮೆಂಟರ್-ಆಡಿಟ್ ಮಾದರಿ’ ಮೂಲಕ ಉತ್ತರದಾಯಿತ್ವವನ್ನು ತರಲಾಗುತ್ತಿದೆ.

      ಸೂಪರ್-30 ಷರತ್ತುಗಳು
      ಈ ಕಾಲೇಜುಗಳು ಅತ್ಯುತ್ಕೃಷ್ಟ ಮಟ್ಟವನ್ನು ಸಾಧಿಸಲು ಹಲವು ನಿಯಮಗಳನ್ನು ಪಾಲಿಸಲಾಗುವುದು. ಆ

      ನಿಯಮಗಳು ಹೀಗಿವೆ:
      • 3 ತಿಂಗಳಿಗೊಮ್ಮೆ ನೋಡಲ್ ಅಧಿಕಾರಿ ಮೂಲಕ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಲಾಗುವುದು.
      • ಕಾಲೇಜುಗಳು ಅಪೇಕ್ಷಿತ ಮಟ್ಟವನ್ನು ಮುಟ್ಟಲು ವಿಫಲವಾದಲ್ಲಿ ಮಧ್ಯದಲ್ಲೇ `ಸೂಪರ್-30’ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲಾಗುವುದು.
      • ಯೋಜನೆಯ ಅವಧಿಯಾದ 5 ವರ್ಷಗಳ ಕೊನೆಯ ವೇಳೆಗೆ ಈ ಕಾಲೇಜುಗಳು ತಮ್ಮ ಶೈಕ್ಷಣಿಕ ಕಾರ್ಯಕ್ರಮಗಳ ಪೈಕಿ ಶೇ.80ರಷ್ಟಕ್ಕಾದರೂ ಎನ್.ಬಿ.ಎ ಮಾನ್ಯತೆ ಹೊಂದಿರಬೇಕು.
      • ಐ.ಟಿ. ಉದ್ದಿಮೆ ಮತ್ತು ಪ್ರಮಖ ಎಂಜಿನಿಯರಿಂಗ್ ಶಾಖೆಗೆ ಸೇರಿದ ತಲಾ 1 ಉದ್ದಿಮೆ ಸೇರಿ ಒಟ್ಟು 3 ಉದ್ದಿಮೆಗಳೊಂದಿಗೆ ಯಶಸ್ವಿ ಸಹಭಾಗಿತ್ವವನ್ನು ಹೊಂದಿರಬೇಕು.
      • ಅಂತಿಮ ವರ್ಷದ ಬಿ.ಇ.ಯಲ್ಲಿರುವ ವಿದ್ಯಾರ್ಥಿಗಳು ತಮ್ಮ ಪದವಿ ಪಡೆಯುವ ಹೊತ್ತಿಗೆ ಶೇ.50ರಷ್ಟು ವಿದ್ಯಾರ್ಥಿಗಳಾದರೂ ಉದ್ಯೋಗಾವಕಾಶ ಗಿಟ್ಟಿಸಿಕೊಂಡಿರಬೇಕು.
      • ಆಯಾ ಕಾಲೇಜುಗಳಲ್ಲಿ ಶೇ.75ರಷ್ಟು ವಿದ್ಯಾರ್ಥಿಗಳು ಪ್ರತೀವರ್ಷವೂ ಗುಣಮಟ್ಟದ ಇಂಟರ್ನ್-ಶಿಪ್ ಅನ್ನು ಕಡ್ಡಾಯವಾಗಿ ಮಾಡಬೇಕು.
      • ಅಗತ್ಯವೆನಿಸಿದರೆ ವಿಟಿಯು ಕಡೆಯಿಂದ ಶಾಶ್ವತ ಮಾನ್ಯತೆ ಪಡೆದುಕೊಳ್ಳಬೇಕು.

      ಕರ್ನಾಟಕದಲ್ಲಿ ಆಯ್ಕೆಯಾಗಿರುವ ಖಾಸಗಿ ಕಾಲೇಜುಗಳು
      (1) ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್, ಬೆಳಗಾವಿ
      (2) ಚನ್ನಬಸವೇಶ್ವರ ಎಂಜಿನಿಯರಿಂಗ್ ಕಾಲೇಜು, ಗುಬ್ಬಿ (ತುಮಕೂರು ಜಿಲ್ಲೆ)
      (3) ಶ್ರೀಮಧ್ವ ವಾದಿರಾಜ ಎಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ಕಾಲೇಜು, ಉಡುಪಿ
      (4) ಜಿಎಸ್ಎಸ್ಎಸ್ ಮಹಿಳಾ ಎಂಜಿನಿಯರಿಂಗ್ & ಟೆಕ್ನಾಲಜಿ ಸಂಸ್ಥೆ, ಮೈಸೂರು.
      (5) ಡಾ.ಟಿ ತಿಮ್ಮಯ್ಯ ತಾಂತ್ರಿಕ ಶಿಕ್ಷಣ ಕಾಲೇಜು, ಕೆಜಿಎಫ್ (ಕೋಲಾರ ಜಿಲ್ಲೆ)
      (6) ಬಿಳುಗೂರು ಗುರುಬಸವ ಮಹಾಸ್ವಾಮೀಜಿ ಇನ್ಸ್ಟಿಟ್ಯೂಟ್, ಮುಧೋಳ (ಬಾಗಲಕೋಟೆ ಜಿಲ್ಲೆ)
      (7) ಪಿ.ಜಿ.ಹಳಕಟ್ಟಿ ಕಾಲೇಜ್ ಆಫ್ ಎಂಜಿನಿಯರಿಂಗ್ & ಟೆಕ್ನಾಲಜಿ, ವಿಜಯಪುರ
      (8) ಆದಿಚುಂಚನಗಿರಿ ತಾಂತ್ರಿಕ ಕಾಲೇಜು, ಚಿಕ್ಕಮಗಳೂರು
      (9) ಎಸ್.ಜೆ.ಸಿ. ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ, ಚಿಕ್ಕಬಳ್ಳಾಪುರ
      (10) ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು, ಬಳ್ಳಾರಿ
      (11) ಪಿಇಎಸ್ ತಾಂತ್ರಿಕ & ಮ್ಯಾನೇಜ್ಮೆಂಟ್ ಸಂಸ್ಥೆ, ಶಿವಮೊಗ್ಗ
      (12) ಭೀಮಣ್ಣ ಖಂಡ್ರೆ ತಾಂತ್ರಿಕ ಕಾಲೇಜು, ಭಾಲ್ಕಿ (ಬೀದರ್ ಜಿಲ್ಲೆ)
      (13) ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜು, ಗದಗ
      (14) ವಿವೇಕಾನಂದ ಎಂಜಿನಿಯರಿಂಗ್ & ತಾಂತ್ರಿಕ ಕಾಲೇಜು, ಪುತ್ತೂರು (ದಕ್ಷಿಣ ಕನ್ನಡ ಜಿಲ್ಲೆ)
      (15) ಜೈನ್ ಎಂಜಿನಿಯರಿಂಗ್ ಕಾಲೇಜು, ಹುಬ್ಬಳ್ಳಿ
      (16) ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜು, ಸುರಪುರ (ಯಾದಗಿರಿ ಜಿಲ್ಲೆ)

      Tags: #30 engineering college#5 years#best colleges#district#dr: c.n.ashwat narayan
      voice of janata

      voice of janata

      • Trending
      • Comments
      • Latest
      ಕೊಟ್ಟ ಮಾತಿಗೆ ತಪ್ಪಿಲ್ಲ..!

      ಕೊಟ್ಟ ಮಾತಿಗೆ ತಪ್ಪಿಲ್ಲ..!

      March 25, 2023
      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      ಇಂಡಿ ಪಟ್ಟಣದಲ್ಲಿ ಬೇಕರಿ ಮಾಲಿಕ ಕಿಡ್ನಾಪ್ !..

      February 22, 2022
      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      ಪಿಯು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಅಬ್ಸರ್ವರ್ ಯಡವಟ್ಟು..

      March 13, 2023
      ದಾರವಾಡ ಮಹಾನಗರ ಪಾಲಿಕೆ ಚುನಾವಣೆ ಪಿಕ್ಸ್..

      ದಾರವಾಡ ಮಹಾನಗರ ಪಾಲಿಕೆ ಚುನಾವಣೆ ಪಿಕ್ಸ್..

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ದಾರವಾಡ ಮಹಾನಗರ ಪಾಲಿಕೆ ಚುನಾವಣೆ ಪಿಕ್ಸ್..

      ದಾರವಾಡ ಮಹಾನಗರ ಪಾಲಿಕೆ ಚುನಾವಣೆ ಪಿಕ್ಸ್..

      June 8, 2023
      ABVP ವಿಧ್ಯಾರ್ಥಿಗಳಿಂದ ಸಸಿ ವಿತರಣೆ..

      ABVP ವಿಧ್ಯಾರ್ಥಿಗಳಿಂದ ಸಸಿ ವಿತರಣೆ..

      June 5, 2023
      ಪಟ್ಟಭದ್ರ ಹಿತಾಸಕ್ತಿಗಳು ತೇಜೋವಧೆ ಮಾಡುವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವೆ..! ಬಿ.ಡಿ. ಪಾಟೀಲ..

      ಪಟ್ಟಭದ್ರ ಹಿತಾಸಕ್ತಿಗಳು ತೇಜೋವಧೆ ಮಾಡುವರ ವಿರುದ್ಧ ಮಾನ ಹಾನಿ ಪ್ರಕರಣ ದಾಖಲಿಸುವೆ..! ಬಿ.ಡಿ. ಪಾಟೀಲ..

      May 27, 2023
      • About Us
      • Contact Us
      • Privacy Policy

      © 2022 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2022 VOJNews - Powered By Kalahamsa Infotech Private Limited.