ಅಫಜಲಪುರ: ರೈತರು ತಮ್ಮ ಆರ್ಥಿಕ ಮಟ್ಟ ವೃದ್ಧಿಗೆ ಕೃಷಿ ಜೊತೆಗೆ ಇತರೆ ಉಪ ಕಸಬುಗಳಲ್ಲಿ ತೊಡಗಬೇಕು ಅದಕ್ಕೆ ಪ್ರತಿಯೊಬ್ಬ ರೈತರು ಕಿಸಾನ್ ಕಾರ್ಡ್ ಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್. ಗಡಗಿಮನಿ ಹೇಳಿದರು.
ತಾಲೂಕಿನ ಆನೂರ ಗ್ರಾಮದ ಚಂದ್ರಗಿರಿ ದೇವಾಸ್ಥಾನದಲ್ಲಿ ಪಂಚಾಯತ ರಾಜ್ ದಿವಸ್ ಅಂಗವಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ ಫಲಾನುಭವಿಗಳ ಕಿಸಾನ್ ಕ್ರೇಡಿಟ್ ಕಾರ್ಡ್ ಪಡೆಯುವ ಮಾಹಿತಿ ಕುರಿತಾಗಿರುವ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು ರೈತರಿಗೆ ಆರ್ಥಿಕ ಹೊರೆಯಾಗಬಾರದೆಂದು ಸರಕಾರ ಅನೇಕ ಸೌಲಭ್ಯಗಳು ನೀಡುತ್ತಿದೆ. ಆ ಎಲ್ಲ ಯೋಜನೆಗಳ ಲಾಭ ಪಡೆಯಲು ಕಿಸಾನ್ ಕಾರ್ಡ್ ಪಡೆದಿರಬೇಕು ಎಂದ ಅವರು ಗ್ರಾಮೀಣ ಭಾಗದ ರೈತರು ತಮ್ಮ ಬ್ಯಾಂಕ್ ಖಾತೆ ಇರುವ ಬ್ಯಾಂಕಗಳಲ್ಲಿ ಕಿಸಾನ್ ಕಾರ್ಡ್ ಮಾಡಿಕೊಳ್ಳಬೇಕು ಎಂದರು.
ಕೃಷಿ ಅಧಿಕಾರಿ ಅರವಿಂದ ಕುಮಾರ ರಾಠೋಡ್ ಮಾತನಾಡಿ ರೈತರು ತಮ್ಮ ಬ್ಯಾಂಕ್‌ಗಳಲ್ಲಿ ಕಿಸಾನ್ ಕಾರ್ಡ್ ಅರ್ಜಿ ಪಡೆದು ಭರ್ತಿ ಮಾಡಿ ಪಹಣಿ, ಆಧಾರ್ ಕಾರ್ಡ್, ಭಾವಚಿತ್ರ, ಬ್ಯಾಂಕ್ ಖಾತೆಯ ನಕಲು ಪ್ರತಿ ಲಗತ್ತಿಸಿ ಕೊಡಬೇಕು ಒಂದು ಸಲ ಕಿಸಾನ್ ಕಾರ್ಡ್ ಹೊಂದಿದ್ದರೆ ಅದಕ್ಕೆ ಮೂರು ವರ್ಷದ ಬಳಿಕ ಹೊಸ ಕಿಸಾನ್ ಕಾರ್ಡ್ ಮಾಡಿಕ್ಕೊಳ್ಳಬೇಕು ಎಂದರು.
ಗ್ರಾಮದ ಮುಖಂಡರಾದ ಡಾ.ಸಂಗಣ್ಣ ಸಿಂಗೆ ಮಾತನಾಡಿ ರೈತರ ಸ್ವಾವಲಂಬಿ ಜೀವನ ರೂಪಿಸಲು ಸರಕಾರಗಳು ವಿವಿಧ ಇಲಾಖೆಗಳ ಮೂಲಕ ಸಾಕಷ್ಟು ಯೋಜನೆಗಳನ್ನಹ ನೀಡುತ್ತಿದೆ. ರೈತರು ಆಯಾ ಇಲಾಖೆಗಳಿಂದ ಮಾಹಿತಿ ಪಡೆದು ಸೌಲಭ್ಯಗಳು ಪಡೆಯಬೇಕು ಎಂದರು.
ಈ ಸಂಧರ್ಭದಲ್ಲಿ ರೈತ ಮುಖಂಡರಾದ ಶಿವಕುಮಾರ ಬಳೂಂಡಗಿ, ಸಿದ್ದು ಕೆರಮಗಿ, ಮಾನಪ್ಪ ಗೌಂಡಿ, ಶ್ರೀಮಂತ ಜಿರೋಳಿ, ಬಸವರಾಜ ಸೀತನೂರ, ಗುರುದೇವ ಬಳೂಂಡಗಿ, ಗುರುಪಾದಯ್ಯ ಮಲಘಾಣ ನಾಗಣ್ಣ ಕಕ್ಕಳಮೇಲಿ, ಶ್ರೀಶೈಲ್ ಸ್ಥಾವರಮಠ, ಮಹೇಶ ಸಿತನೂರ, ಕಲ್ಯಾಣಿ ಉಮ್ಮನಗೋಳ, ನಿಂಗಣ್ಣ ದೇವರಮನಿ, ವೀರಭದ್ರಯ್ಯ ಮಠಪತಿ, ಅಮೃತ ಜಿರೋಳಿ, ಭೀಮರಾಯ ಜಿರೋಳಿ, ರೇವಣಸಿದ್ದ ಬಳೂಂಡಗಿ, ಸುಭಾಸ ಸಿತನೂರ ಬಿಲ್ವಾಡ ಗ್ರಾಮದ ಹಿರಗಪ್ಪ ಕಟ್ಟಮನಿ, ಸಿದ್ದಪ್ಪ ಪ್ರಭುಗೋಳ, ಕಾರ್ಯದರ್ಶಿ ಸೋಮನಿಂಗಪ್ಪ ಸೋಲಾಪುರ ಸೇರಿ ಗ್ರಾಮಸ್ಥರು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ: