ಇಂಡಿ : ಹುತಾತ್ಮ ದಿನಾಚರಣೆ ಅಂಗವಾಗಿ ತಾಲ್ಲೂಕಿನ ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಸ ಗುಡಿಸುವ ಮೂಲಕ ಕಾರ್ಯಕ್ರಮಕ್ಕೆ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಚ್ ಬುದಾರಪುರ ಚಾಲನೆ ನೀಡಿದ್ರು. ಮಹಾತ್ಮ ಗಾಂಧಿಜೀ 70 ನೇ ಪುಣ್ಯತಿಥಿ ಅಂಗವಾಗಿ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ ಹುತಾತ್ಮರ ದಿನಾಚರಣೆ ಅಧ್ಯಕ್ಷತೆ ವಹಿಸಿಕೊಂಡು ಮಾತಾನಾಡಿದರು.
ಜನವರಿ 30 ಅಹಿಂಸೆ ಮತ್ತು ಶಾಂತಿ ಎಂಬ ಅಸ್ತ್ರದಿಂದಲೇ ಭಾರತಕ್ಕೆ ಸ್ವಾತಂತ್ರ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ, ಅದರಂತೆ ಇಂದು ನಾವು ಸ್ಮರಿಸಿಕೊಳ್ಳೊದು ಮತ್ತು ಸಾಮಾಜಿಕವಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಅತೀ ಅವಶ್ಯಕ ಎಂದರು.
ಇದೇ ಸಂದರ್ಭದಲ್ಲಿ ಎ.ಎಚ್. ಖನಗಾವಿ ದಿವಾಣಿ ನ್ಯಾಯಧೀಶರು, ಶ್ರೀ ಹುಲಗಪ್ಪ ಡಿ ಹೆಚ್ಚುವರಿ ದಿವಾನಿ ನ್ಯಾಯಧೀಶರು ಕೂಡಾ ಮಾತಾನಾಡಿದರು.
ವಕೀಲರ ಸಂಘದ ಅಧ್ಯಕ್ಷ ಪುಟ್ಟಣ್ಣಗೌಡ ಪಾಟೀಲ, ಕಾರ್ಯದರ್ಶಿ ಎಸ್.ಆರ್.ಬಿರಾದಾರ ಸದಸ್ಯ, ಬಿ.ಬಿ. ಬಿರಾದಾರ, ಸೋಮು ನಿಂಬರಗಿಮಠ, ಎಸ್ ಪಿ ಪಾಟೀಲ, ಪ್ರದೀಪ ಮುರಮನ, ವೈ ಎಸ್ ಪೂಜಾರಿ, ಎಸ್ ಬಿ ಕೆಂಬೋಗಿ, ನಾಡಪುರೋಹಿತ, ವ್ಹಿ ಎಸ್ ಚಲವಾದಿ, ಮಾಂತೇಶ ಪಾಟೀಲ, ರಮೇಶ ಕೋಳಿ, ಜೆ ಜೆ ಜೇವೂರ ಪುರಸಭೆಯ ಆರೋಗ್ಯ ಅಧಿಕಾರಿ ಸೊಮನಾಯ್ಕ ಹಾಗೂ ಸಿಬ್ಬಂಧಿ ಉಪಸ್ಥಿತರು ಇದ್ದರು..