ಮುಂಬೈ: ಈ ಸಲ ಕಪ್ ನಮ್ದೆ ಅಂತಾ ಅದೆಷ್ಟೋ ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಬಗ್ಗೆ ಅಭಿಮಾನವನ್ನು ಹೊಂದಿರುತ್ತಾರೆ. ಆದರೆ ಯುವತಿ ಒಬ್ರು ಐಪಿಎಲ್ ಪಂದ್ಯದ ವೇಳೆ ಹಿಡಿದಿದ್ದ ಪ್ಲೆಕಾರ್ಡ್ ಎಲ್ಲರ ಗಮನ ಸೆಳೆದಿದೆ.‘Not getting married till RCB wins IPL trophy’ RCB ಐಪಿಎಲ್ ಟ್ರೋಫಿ ಗೆಲ್ಲುವವರೆಗೆ ಮದುವೆಯಾಗುವುದಿಲ್ಲ ಎಂಬ ಪೋಸ್ಟರ್ ಎಲ್ಲಡೆ ವೈರಲ್ ಆಗಿದೆ. ಮಂಗಳವಾರ ನಡೆದ RCB ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯಾಟದಲ್ಲಿ ಈ ಪೋಸ್ಟರ್ ಜತೆಗೆ ಯುವತಿ ಕಾಣಿಸಿಕೊಂಡಿದ್ದಾಳೆ. ಈ ಬಾರಿಯಾದರೂ ಆರ್‌ಸಿಬಿ ಕಪ್ ಗೆಲ್ಲಲಿ ಎಂದು ಹಾರೈಸುತ್ತೇವೆ ಎಂದು ಆರ್‌ಸಿಬಿ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್ ವೈರಲ್ ಆಗಿದೆ.