ಹಣಕ್ಕಾಗಿ ಶಿಕ್ಷಣ ನೀಡುತ್ತಿಲ್ಲ..! ಮಕ್ಕಳ ಹಾಗೂ ದೇಶದ ಉತ್ತಮ ಭವಿಷ್ಯಕ್ಕಾಗಿ
ಇಂಡಿ: ನಮ್ಮ ಸಂಸ್ಥೆಯಲ್ಲಿ ಹಣಕ್ಕಾಗಿ ಶಿಕ್ಷಣ ನೀಡುತ್ತಿಲ್ಲ.
ಬದಲಾಗಿ ಮಕ್ಕಳು ಸಂಸ್ಕಾರವಂತವಾಗಿ ದೇಶದ
ಹೆಮ್ಮೆಯ ಪ್ರಜೆಗಳಾಗಲಿ ಎಂಬ ಸದುದ್ದೇಶದಿಂದ ಶಿಕ್ಷಣ
ನೀಡಲಾಗುತ್ತಿದೆ ಎಂದು ನೂರಂದೇಶ್ವರ ಶಿಕ್ಷಣ
ಸಂಸ್ಥೆಯ ಅಧ್ಯಕ್ಷರಾದ ಮೋರಟಗಿ ವಿರಕ್ತ ಮಠದ
ಗುರುಲಿಂಗ ಮಹಾಸ್ವಾಮೀಜಿ ತಿಳಿಸಿದರು.
ಅವರು ಇತ್ತೀಚೆಗೆ ಪಟ್ಟಣದ ನೂರಂದೇಶ್ವರ ಕನ್ನಡ
ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಪ್ರೌಢಶಾಲೆಯ 19 ನೇ ವಾರ್ಷಿಕ ಸ್ನೇಹ ಸಮ್ಮೇಳನದ ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ನಾವು ಮಠಾಧೀಶರು ನಮಗೆ ಮಕ್ಕಳಿಲ್ಲ. ಹೀಗಾಗಿ
ನಿಮ್ಮೆಲ್ಲರ ಮಕ್ಕಳು ನಮ್ಮ ಮಕ್ಕಳಂತೆ ತಿಳಿದು ಶಿಕ್ಷಣ
ನೀಡುತ್ತಿದ್ದೇವೆ. ಈ ಶಿಕ್ಷಣ ಸಂಸ್ಥೆಯ ಏಳ್ಗೆ ನಿಮ್ಮ
ಕೈಯಲ್ಲಿದ್ದು ಪಾಲಕರು ಸಂಸ್ಥೆಯ ಬಗ್ಗೆ ಕಾಳಜಿ ವಹಿಸಬೇಕೆಂದರು. ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯೆ ಶೈಲಜಾ ಬಿರಾದಾರ ಉದ್ಘಾಟಿಸಿದರು.
ಸಾನಿಧ್ಯವನ್ನು ಹಿರೇಬೇವನೂರದ ದಯಾನಂದ
ಹಿರೇಮಠ, ಅಧ್ಯಕ್ಷತೆಯನ್ನು ಎಂ.ಎಸ್, ಹಿರೇಮಠ
ವಹಿಸಿದ್ದರು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳ ನೃತ್ಯ, ಭಾಷಣ ನೋಡುಗರ ಕಣ್ಮನ ಸೆಳೆಯಿತು.
ವೇದಿಕೆಯಲ್ಲಿ ಪತ್ರಕರ್ತ ಉಮೇಶ ಬಳಬಟ್ಟಿ, ಬಸಯ್ಯ
ಮಠ, ಎಸ್.ಕೆ. ಬಡಿಗೇರ, ಎಸ್.ಎ. ಇನಾಮದಾರ, ಟಿ.ಹೆಚ್. ಮೋಮಿನ್, ಆನಂದ ಹಿರೇಮಠ ಸೇರಿದಂತೆ ಇನ್ನಿತರರು ಇದ್ದರು.
ಇಂಡಿ: ಪಟ್ಟಣದ ನೂರಂದೇಶ್ವರ ಕನ್ನಡ ಹಿರಿಯ
ಪ್ರಾಥಮಿಕ ಶಾಲೆ ಹಾಗೂ ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಪ್ರೌಢಶಾಲೆಯ 19 ನೇ ವಾರ್ಷಿಕ ಸ್ನೇಹ
ಸಮ್ಮೇಳನವನ್ನು ಗಣ್ಯರು ಉದ್ಘಾಟಿಸಿದರು.