ನಾಮನಿರ್ದೇಶನ ಸದಸ್ಯ ಅಬ್ದುಲ್ ರಶೀದ ಅರಬಗೆ ಸನ್ಮಾನ
ಇಂಡಿ : ಇತ್ತಿಚೆಗೆ ನೂತನವಾಗಿ ಇಂಡಿ ಪುರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಅಬ್ದುಲ್ ರಶೀದ ಅರಬ ಇವರಿಗೆ ಪಟ್ಟಣದ ಪ್ಯಾರಾಡೈಸ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ಯಾರಾಡೈಸ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷ ಅಕಿಲ್ ಹವಾಲ್ದಾರ ಮಾತನಾಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ನಮ್ಮ ಸಮುದಾಯದ ಹೀರಿಯರಾದ ರಶೀದ ಚಾಚಾ ಅರಬ ಇವರನ್ನು ಪುರಸಭೆಗೆ ನಾಮ ನಿರ್ದೆಶನ ಮಾಡಿದ್ದು ಸ್ವಾಗತಾರ್ಹವಾಗಿದೆ. ಆದರಿಂದ ನಮ್ಮ ಸಮುದಾಯದ ಪರವಾಗಿ ಹಾಗೂ ಸಂಸ್ಥೆಯ ಪರವಾಗಿ ಶಾಸಕರಿಗೆ ಅಭಿನಂದಿಸುವುದಾಗಿ ಹೇಳಿದರು.
ಉಪಾಧ್ಯಕ್ಷರು ಸಾದಿಕ್ ಬೋರಾಮಣ , ಕಾರ್ಯದರ್ಶಿ ಜೈನುದ್ದಿನ ತಮಟಗಾರ, ಮುನ್ನಾ ಸೌದಾಗರ, ಮುನ್ನಾ ದೇಸಾಯಿ, ಪಾರೂಕ್ ರೆವೊರ್ಕರ್, ಇಸ್ಮಾಯಿಲ್, ಅನ್ವರ್ ನದಾಫ, ಮೈನುದ್ದಿನ ಶೇಖ್, ಸಂತೋಷ ಸಿಂಧೆ ಉಪಸ್ಥಿತರದ್ದರು.
ಇಂಡಿ ಪುರಸಭೆಗೆ ನಾಮನಿರ್ದೇಶನ ಸದಸ್ಯರಾಗಿ ಆಯ್ಕೆಯಾದ ಅಬ್ದುಲ್ ರಶೀದ ಅರಬ ಇವರಿಗೆ ಪಟ್ಟಣದ ಪ್ಯಾರಾಡೈಸ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.