ಎರಡು ವರ್ಷದಿಂದ ಸಂಬಳ ನೀಡಿಲ್ಲವೆಂದು ವಾಟರ್ ಮ್ಯಾನ್ ಗಳ ಆರೋಪ : ಭ್ರಷ್ಟಾಚಾರದಲ್ಲಿ ಮುಳುಗಿರುವ ಮಾರ್ಟಳ್ಳಿ ಪಂಚಾಯತಿ.
ಹನೂರು :ತಾಲೂಕಿನ ಮಾರ್ಟಳ್ಳಿ ಪಂಚಾಯಿತಿ ಒಂದಲ್ಲ ಒಂದು ಆರೋಪಗಳು ಕೇಳಿ ಬರುತ್ತಿವೆ. ಮಾರ್ಟಳ್ಳಿ ಪಂಚಾಯತ್ ಸಂಬಂಧ ಪಟ್ಟ ವಿಚಾರವಾಗಿ ಕೆಲವು ದಿನಗಳಿಂದ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ನಿರಂತರ ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಿರುವ ಬೆನ್ನಲ್ಲೇ ವಾಟರ್ ಮ್ಯಾನ್ ಗಳಿಗೆ ಕಳೆದ ಎರಡು ವರ್ಷಗಳಿಂದ ಯಾವುದೇ ವೇತನ ನೀಡುತ್ತಿಲ್ಲ ಕಾಯಂ ವಾಟರ್ ಮ್ಯಾನ್ ನೌಕರರಾಗಿ ಪರಿಗಣಿಸಲು ಹಣ ವಸೂಲಿಗಾರ (ಬಿಲ್ ಕಲೆಕ್ಟರ್) ಅರ್ಮುಗಂ ಎಂಬ ವ್ಯಕ್ತಿಯು 20000 ಸಾವಿರ ಲಂಚ ತೆಗೆದುಕೊಂಡು ನಮ್ಮನ್ನು ಕಾಯಂ ನೌಕರರಾಗಿ ಮಾಡಿಲ್ಲ. ತುಂಬಾ ಕಷ್ಟದಲ್ಲಿ ಜೀವನ ನಡೆಸುತ್ತಿದ್ದೇವೆ ಎಂದು ಮಹಿಳೆಯರು ಸೇರಿದಂತೆ ಸುಮಾರು 10 ಕ್ಕೂ ಹೆಚ್ಚು ಮಂದಿ ಆರೋಪ ಮಾಡುತ್ತಿದ್ದಾರೆ. ಹೌದು ಹಲವು ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿರುವ ಮಾರ್ಟಳ್ಳಿ ಪಂಚಾಯತ್ ನಲ್ಲಿ ಇದೀಗ ಮತ್ತೊಮ್ಮೆ ವಾಟರ್ ಮ್ಯಾನ್ ಗಳು ತಮಗೆ ಆಗುತ್ತಿರುವ ಮೋಸದ ನೋವನ್ನು ಹಂಚಿಕೊಂಡಿದ್ದಾರೆ. ಇನ್ನು ಈ ವಿಚಾರವಾಗಿ ಕರ್ನಾಟಕ ರಾಜ್ಯ ಗ್ರಾಮೀಣಾಭಿರುದ್ಧಿ ಪಂಚಾಯತ್ ಇಲಾಖೆ ನೇರವಾಗಿ ಇಂತಹ ಘಟನೆಗಳನ್ನು ಪರಿಶೀಲಿಸಿ ತಪ್ಪಿತಸ್ತರ ವಿರುದ್ಧ ಕಾನೂನು ಅಡಿಯಲ್ಲಿ ಸೂಕ್ತ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡುತ್ತಾರ ಎಂದು ಕಾದು ನೋಡಬೇಕಾಗಿದೆ.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ..