E-PAPER
26 Nov 2026, 12:55:44 PM|
Gold₹12128/gGold24K ₹12,128/g - 22K ₹11,107/gTap for full detailsWEATHER29°AQI 53WeatherBelagavi · 29° · Clear skyTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Bijapur

ಶಾಸಕ ನಾಡಗೌಡರ ಛಲಕ್ಕೆ ಸಿಕ್ಕ ಜಯ: ನಾಗರಬೆಟ್ಟ ಏತನೀರಾವರಿ ಯೋಜನೆಯ ಟ್ರಯಲ್ ರನ್ ಯಶಸ್ವಿ.

By Voice Of JANATA

ಶಾಸಕ ನಾಡಗೌಡರ ಛಲಕ್ಕೆ ಸಿಕ್ಕ ಜಯ: ನಾಗರಬೆಟ್ಟ ಏತನೀರಾವರಿ ಯೋಜನೆಯ ಟ್ರಯಲ್ ರನ್ ಯಶಸ್ವಿ.
---------
ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಯಶಸ್ವಿ ಟ್ರಯಲ್ ರನ್: 
ಲೋಕಾರ್ಪಣೆಗೆ ಕ್ಷಣಗಣನೆ.
------------
ಶಾಸಕ ನಾಡಗೌಡರ ಸತತ ಪ್ರಯತ್ನಕ್ಕೆ ಫಲ; ಸಾವಿರಾರು ರೈತರ ಜಮೀನುಗಳಿಗೆ ನೀರುಣಿಸುವ ಮಹತ್ವದ ಹೆಜ್ಜೆ.
ಮುದ್ದೇಬಿಹಾಳ: ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಬಹುಭಾಗದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಬಹು ನಿರೀಕ್ಷಿತ ನಾಗರಬೆಟ್ಟ ಏತ ನೀರಾವರಿ ಯೋಜನೆಯ ಟ್ರಯಲ್ ರನ್ ಬುಧವಾರ ಯಶಸ್ವಿಯಾಗಿ ನಡೆಯಿತು. ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಹಾಗೂ ತಂತ್ರಜ್ಞರ ತಂಡ ನಿನ್ನೆಯಿಂದ ಹಗಲು-ರಾತ್ರಿ ನಿರಂತರವಾಗಿ ಕಾರ್ಯನಿರ್ವಹಿಸಿ ಯೋಜನೆಯ ಪ್ರಾಯೋಗಿಕ ನೀರು ಹರಿಸುವ ಕಾರ್ಯವನ್ನು ಯಶಸ್ವಿಗೊಳಿಸಿದೆ.
ಮಂಗಳವಾರ ಸಂಜೆ ಶಾಸಕ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಅಧಿಕಾರಿಗಳು ಹಾಗೂ ರೈತರ ಸಭೆ ನಡೆಸಿ ನಾಗರಬೆಟ್ಟ ಏತ ನೀರಾವರಿ ಯೋಜನೆಯ ಪ್ರಗತಿ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡಿದ್ದರು. ಯೋಜನೆಯ ಪ್ರಗತಿ ವರದಿಯನ್ನು ಪರಿಶೀಲಿಸಿ, ಒಂದೆರಡು ದಿನಗಳೊಳಗೆ ಟ್ರಯಲ್ ರನ್ ನಡೆಸಿ ಯೋಜನೆಯನ್ನು ಲೋಕಾರ್ಪಣೆಗೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು.
ಶಾಸಕರ ಸೂಚನೆಯ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮತ್ತು ತಂತ್ರಜ್ಞರ ತಂಡ ನಿರಂತರ ಶ್ರಮವಹಿಸಿ ಬುಧವಾರ ಟ್ರಯಲ್ ರನ್ ಯಶಸ್ವಿಗೊಳಿಸುವ ಮೂಲಕ ಯೋಜನೆಯ ಮಹತ್ವದ ಹಂತವನ್ನು ಪೂರ್ಣಗೊಳಿಸಿದೆ.
ಮುದ್ದೇಬಿಹಾಳ ಕ್ಷೇತ್ರದ ಬಹುತೇಕ ಪ್ರದೇಶವನ್ನು ಒಳಗೊಳ್ಳುವ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ಸಾವಿರಾರು ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ಸಿಗಲಿದೆ. ಈ ಭಾಗದ ರೈತರ ಬಹುದಿನಗಳ ನೀರಿನ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಾಗರಬೆಟ್ಟ ಏತನೀರಾವರಿ ಯೋಜನೆ ಮಹತ್ವದ ಪಾತ್ರ ವಹಿಸಲಿದೆ.
ಯೋಜನೆಯ ಸಾಕಾರಕ್ಕಾಗಿ ಆರಂಭದಿಂದಲೂ ಹಲವು ಸವಾಲು ಹಾಗೂ ಅಡೆತಡೆಗಳನ್ನು ಎದುರಿಸಿದ ಶಾಸಕ ಸಿ.ಎಸ್.ನಾಡಗೌಡ ಅವರು ಛಲ ಬಿಡದೆ ನಿರಂತರ ಪ್ರಯತ್ನ ನಡೆಸಿ ಯೋಜನೆಯನ್ನು ಇದೀಗ ಲೋಕಾರ್ಪಣೆಯ ಹಂತಕ್ಕೆ ತಲುಪಿಸಿರುವುದು ಗಮನಾರ್ಹವಾಗಿದೆ.
ಯೋಜನೆಯ ಟ್ರಯಲ್ ರನ್ ಯಶಸ್ವಿಯಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಶಾಸಕ ಅಪ್ಪಾಜಿ ನಾಡಗೌಡ ಅವರು, ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರನ್ನು ಆಹ್ವಾನಿಸಿ ಅವರಿಂದಲೇ ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಬಿಜೆಎನ್‌ಎಲ್  ಡಬ್ಲ್ಯೂಇ ಅಮರೇಗೌಡ ಪಾಟೀಲ, ಎಇಇ ಶಿವಾಜಿ ಬಿರಾದಾರ, ಎಸ್‌ಎಲ್‌ಓ ಅಧಿಕಾರಿ ಎಸ್.ಪಿ.ನಾಗಠಾಣ, ಎಂಜಿನಿಯರ್‌ಗಳಾದ ಬಿ.ಎಂ.ಸಾತಿಹಾಳ, ಎಸ್.ಕೆ.ದೊಡ್ಡಮನಿ, ಜಾನು ನಾಯಕ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಡಿಯಲ್ಲಿ ಕಿತ್ತೂರು ಚೆನ್ನಮ್ಮ ವೃತ್ತ ನಿರ್ಮಾಣಕ್ಕೆ ಭೂಮಿಪೂಜೆ..! ಜನವರಿ ಅಥವಾ ಫೆಬ್ರವರಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ – ಶಾಸಕ ಯಶವಂತರಾಯಗೌಡ ಪಾಟೀಲಶಾಸಕ ನಾಡಗೌಡರ ಛಲಕ್ಕೆ ಸಿಕ್ಕ ಜಯ: ನಾಗರಬೆಟ್ಟ ಏತನೀರಾವರಿ ಯೋಜನೆಯ ಟ್ರಯಲ್ ರನ್ ಯಶಸ್ವಿ.ಹಿರೇಮುರಾಳ ಶಾಲೆಗೆ ಇಒ ದಿಢೀರ್ ಭೇಟಿ: ಮಕ್ಕಳೊಂದಿಗೆ ಬಿಸಿಯೂಟ ಸವಿದು ಗುಣಮಟ್ಟ ಪರಿಶೀಲನೆ.ರಕ್ತದಾನ ಶ್ರೇಷ್ಠ ದಾನ, ಜೀವ ಉಳಿಸುವ ಪುಣ್ಯದ ಕೆಲಸ: ಡಾ. ಸತೀಶ್ ತಿವಾರಿಕಸ-ಕಂಟಿಗಳಿಂದ ತುಂಬಿದ ಕೆರೆಗೆ ಮುಖ್ಯಾಧಿಕಾರಿ ಭೇಟಿ: ಸ್ವಚ್ಛತೆಗೆ ಭರವಸೆನಾಗರಬೆಟ್ಟ ಏತ ನೀರಾವರಿ ಕಾಮಗಾರಿ ವಿಳಂಬಕ್ಕೆ ಶಾಸಕ ನಾಡಗೌಡ ಗರಂ; ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ.ಜನರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಸಂಘಗಳ ಪಾತ್ರ ಮಹತ್ವದ್ದು: ಸಿಪಿಐ ಸುನಿಲ್ ಪಾಟೀಲಅನುಮಾನಾಸ್ಪದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆIAS ಅಧಿಕಾರಿಗಳ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ ಸರ್ಕಾರ..!ಇಂಡಿ ತಾಲೂಕಿನಲ್ಲಿ ಒನಕೆ ಓಬವ್ವ ಹಾಗೂ ಕನಕ ಜಯಂತಿ ಆಚರಣೆಗೆ ಸಿದ್ಧತೆ