E-PAPER
26 Nov 2026, 12:55:44 PM|
Gold₹12128/gGold24K ₹12,128/g - 22K ₹11,107/gTap for full detailsWEATHER29°AQI 53WeatherBelagavi · 29° · Clear skyTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Bijapur

ಕಸ-ಕಂಟಿಗಳಿಂದ ತುಂಬಿದ ಕೆರೆಗೆ ಮುಖ್ಯಾಧಿಕಾರಿ ಭೇಟಿ: ಸ್ವಚ್ಛತೆಗೆ ಭರವಸೆ

By Voice Of JANATA

ಇಂದಿರಾ ಸರ್ಕಲ್ ಕೆರೆಗೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಭೇಟಿ: ಸ್ವಚ್ಛತೆ, ಅಭಿವೃದ್ಧಿಗೆ ತಕ್ಷಣ ಕ್ರಮ
-----------
ಇಂದಿರಾ ಸರ್ಕಲ್ ಬರುವ ಕೆರೆ ಅಭಿವೃದ್ಧಿಗೆ ಪುರಸಭೆ ಕ್ರಮ: ಮುಖ್ಯಾಧಿಕಾರಿ ಈರಣ್ಣ ದಡ್ಡಿ ಭೇಟಿ, ಪರಿಶೀಲನೆ.
---------
ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಪುರಸಭೆ: ಕೆರೆ ಅಭಿವೃದ್ಧಿಗೆ ಮುಂದಾದ ಅಧಿಕಾರಿಗಳು
--------
ಕಸ-ಕಂಟಿಗಳಿಂದ ತುಂಬಿದ ಕೆರೆಗೆ ಮುಖ್ಯಾಧಿಕಾರಿ ಭೇಟಿ: ಸ್ವಚ್ಛತೆಗೆ ಭರವಸೆ
ಮುದ್ದೇಬಿಹಾಳ: ಪಟ್ಟಣದ ಇಂದಿರಾ ಸರ್ಕಲ್ ಸಮೀಪದಲ್ಲಿರುವ ಕೆರೆಯ ಸುತ್ತಮುತ್ತ ಜಿನಿಕಂಟಿ ಹಾಗೂ ಕಂಟಿ ಗಿಡಗಳು ಬೆಳೆದು ನಿಂತಿದ್ದು, ಕೆರೆಯಲ್ಲಿ ಕಸ, ಕಡ್ಡಿ ಸೇರಿದಂತೆ ತ್ಯಾಜ್ಯ ವಸ್ತುಗಳು ಸಂಗ್ರಹಗೊಂಡು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಅವರು ಬುಧವಾರ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕೆರೆಯ ಸುತ್ತಮುತ್ತ ಬೆಳೆದಿರುವ ಜಿನಿಕಂಟಿ ಹಾಗೂ ಕಂಟಿ ಗಿಡಗಳನ್ನು ತೆರವುಗೊಳಿಸುವುದರ ಜೊತೆಗೆ ಕೆರೆಯಲ್ಲಿ ಸಂಗ್ರಹವಾಗಿರುವ ಕಸ, ಕಡ್ಡಿ ಹಾಗೂ ತ್ಯಾಜ್ಯ ವಸ್ತುಗಳನ್ನು ಕೂಡಲೇ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸ್ಥಳೀಯ ಶಾಸಕ ಸಿ.ಎಸ್. ನಾಡಗೌಡ ಅವರ ಗಮನಕ್ಕೂ ಕೆರೆ ಅಭಿವೃದ್ಧಿ ವಿಷಯವನ್ನು ತರಲಾಗುವುದು ಶಾಸಕರ ಸಲಹೆ ಹಾಗೂ ಅಭಿಪ್ರಾಯದಂತೆ ಕೆರೆ ಪ್ರದೇಶದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸುವುದು, ಸಾರ್ವಜನಿಕರ ಅನುಕೂಲಕ್ಕಾಗಿ ವಾಕಿಂಗ್ ಟ್ರ್ಯಾಕ್ ನಿರ್ಮಿಸುವುದು ಹಾಗೂ ಕೆರೆಯಲ್ಲಿ ತುಂಬಿರುವ ತ್ಯಾಜ್ಯವನ್ನು ಸಂಪೂರ್ಣವಾಗಿ ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಪುರಸಭೆಯ ಅನುದಾನದಲ್ಲಿ ಕೆರೆ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಎಂಜಿನಿಯರ್ ಭೀಮನಗೌಡ ಬಗಲಿ, ಆರೋಗ್ಯ ನಿರೀಕ್ಷಕ ಜಾವಿದ್ ನಾಯ್ಕೋಡಿ, ಮಹಾಂತೇಶ ಕಟ್ಟಿಮನಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
KhushiHostWatch on YouTube →
जाहिराती, बॅकअप, सुरक्षा आणि साधने | Marathi Tutorial — KhushiHost News
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂಡಿಯಲ್ಲಿ ಕಿತ್ತೂರು ಚೆನ್ನಮ್ಮ ವೃತ್ತ ನಿರ್ಮಾಣಕ್ಕೆ ಭೂಮಿಪೂಜೆ..! ಜನವರಿ ಅಥವಾ ಫೆಬ್ರವರಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ – ಶಾಸಕ ಯಶವಂತರಾಯಗೌಡ ಪಾಟೀಲಶಾಸಕ ನಾಡಗೌಡರ ಛಲಕ್ಕೆ ಸಿಕ್ಕ ಜಯ: ನಾಗರಬೆಟ್ಟ ಏತನೀರಾವರಿ ಯೋಜನೆಯ ಟ್ರಯಲ್ ರನ್ ಯಶಸ್ವಿ.ಹಿರೇಮುರಾಳ ಶಾಲೆಗೆ ಇಒ ದಿಢೀರ್ ಭೇಟಿ: ಮಕ್ಕಳೊಂದಿಗೆ ಬಿಸಿಯೂಟ ಸವಿದು ಗುಣಮಟ್ಟ ಪರಿಶೀಲನೆ.ರಕ್ತದಾನ ಶ್ರೇಷ್ಠ ದಾನ, ಜೀವ ಉಳಿಸುವ ಪುಣ್ಯದ ಕೆಲಸ: ಡಾ. ಸತೀಶ್ ತಿವಾರಿಕಸ-ಕಂಟಿಗಳಿಂದ ತುಂಬಿದ ಕೆರೆಗೆ ಮುಖ್ಯಾಧಿಕಾರಿ ಭೇಟಿ: ಸ್ವಚ್ಛತೆಗೆ ಭರವಸೆನಾಗರಬೆಟ್ಟ ಏತ ನೀರಾವರಿ ಕಾಮಗಾರಿ ವಿಳಂಬಕ್ಕೆ ಶಾಸಕ ನಾಡಗೌಡ ಗರಂ; ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ.ಜನರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಸಂಘಗಳ ಪಾತ್ರ ಮಹತ್ವದ್ದು: ಸಿಪಿಐ ಸುನಿಲ್ ಪಾಟೀಲಅನುಮಾನಾಸ್ಪದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆIAS ಅಧಿಕಾರಿಗಳ ವರ್ಗಾವಣೆ ಅಸ್ತ್ರ ಪ್ರಯೋಗಿಸಿದ ಸರ್ಕಾರ..!ಇಂಡಿ ತಾಲೂಕಿನಲ್ಲಿ ಒನಕೆ ಓಬವ್ವ ಹಾಗೂ ಕನಕ ಜಯಂತಿ ಆಚರಣೆಗೆ ಸಿದ್ಧತೆ