ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮ ಪಂಚಾಯತಿಯ ಮಾಜಿ ಅದ್ಯಕ್ಷರು ಹಿರಗಪ್ಪ ಯಳಮೇಲಿ ರವರು ಕಾರಣಾಂತರಗಳಿಂದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ ಪ್ರಯುಕ್ತ ಅದ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಶ್ರಿಮತಿ ಕೌಸರಬಾನು ರಾಜೆಸಾಬ ನಧಾಫ್ ಹಾಗೂ ಶ್ರಿಮತಿ ಮಾಹಾನಂದ ಕಾಶಿನಾಥ ಅವಜಿಯಿಂದ ಎರಡು ನಾಮಪತ್ರ ಸಲ್ಲಿಕ್ಕೆ ಆಗಿದ್ವು.
ಒಟ್ಟು 15 ಸದಸ್ಯರು ಚುನಾವಣೆ ನಡೆಸಿದ್ದು ಚುನಾವಣೆಯಲ್ಲಿ ಶ್ರಿಮತಿ ಕೌಸರಬಾನು ರಾಜೆಸಾಬ ನಧಾಫ್ ಇವರಿಗೆ 8 ಮತಗಳು ಬಂದಿದ್ದು ಅವರ ಪ್ರತಿಸ್ಪರ್ಧಿ ಶ್ರಿಮತಿ ಮಾಹಾನಂದ ಕಾಶಿನಾಥ ಅವಜಿ ಇವರಿಗೆ 7 ಮತಗಳು ಬಂದಿದ್ದು ಶ್ರಿಮತಿ ಕೌಸರಬಾನು ರಾಜೆಸಾಬ ನಧಾಫ್ ಇವರನ್ನು ಅದ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಎಂದು ಚುನಾಣಾಧಿಕಾರಿ ಇಂಡಿ ತಾಲ್ಲೂಕ ಪಂಚಾಯತ್ ಕಾರ್ಯನಿರ್ವಾಹಕ ಸುನೀಲ್ ಕುಮಾರ ಮದ್ದಿನ ರವರು ಲಚ್ಯಾಣ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಲಚ್ಯಾಣ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಸದಸ್ಯರು, ಪ್ರದಿಪ ಕುಮಾರ ಮಾನೆ, ಜಿ.ಕೆ. ಲಾಳಸೆರಿ ಉಪಸ್ಥಿತರಿದ್ದರು.