ಇಂಡಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ..
ಇಂಡಿ : ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷಿಯಾದ ಮೊಟ್ಟ ಮೊದಲ ವಿಜ್ಞಾನಿ ಭಾರತೀಯ ಸರ್.ಸಿ.ವಿ.ರಾಮನ್. ಇದು ಭಾರತೀಯರಿಗೆ ಹೆಮ್ಮೆಯ ವಿಷಯ ಎಂದು ಪ್ರಾಧ್ಯಾಪಕಿ ಶೃತಿ ಬಿರಾದಾರ ಹೇಳಿದರು.
ಅವರು ಬುಧವಾರ ಇಂಡಿ ಪಟ್ಟಣದ ಜಿ.ಆರ್. ಗಾಂಧಿ ಕಲಾ ಮಹಾ ವಿದ್ಯಾಲಯದ ಸಭಾ ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪನ್ಯಾಸ ನೀಡಿದರು.
ರಾಮನ್ ಅವರು ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ
ಪ್ರಾಧ್ಯಾಪಕರಾಗಿ ಮುಂದೆ ಇಂಡಿಯನ್ ಇನ್ಸಿಟಿಟ್ಯುಟ್ ಆಫ್ ಸೈನ್ಸ್ ನಿದರ್uಟಿಜeಜಿiಟಿeಜಶಕರಾಗಿ ಸೇವೆ ಸಲ್ಲಿಸಿದ್ದಾರೆ. ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರು ಬೆಳಕಿನ ಚದುರುವಿಕೆಯ ಪರಿಣಾಮಗಳನ್ನು 1928 ರಲ್ಲಿ ಪ್ರಕಟಿಸಿದ್ದು, ಅದಕ್ಕಾಗಿ ಪ್ರತಿವರ್ಷ ಫೆಬ್ರುವರಿ 28 ರಂದು ದೇಶದಾದ್ಯಂತ ರಾಷ್ಟ್ರೀಯ ವಿಜ್ಞಾನ ದಿನ ಎಂದು ಆಚರಿಸಲಾಗುತ್ತದೆ. ಹಾಗಾಗಿ ಇಂದು ದೇಶದ ಉನ್ನತಿಗಾಗಿ ವಿಜ್ಞಾನಿಗಳು ನೀಡಿರುವ ಕೊಡುಗೆಗಳನ್ನು ಗುರುತಿಸುವ ಮತ್ತು ಸ್ಮರಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ವಿದ್ಯಾರ್ಥಿ ಆಕಾಶ ಜಾಲಗೇರಿ ಮಾತನಾಡಿದರು. ಪ್ರಾಚಾರ್ಯ ಡಾ.ಎಸ್.ಬಿ.ಜಾಧವ ಅಧ್ಯಕ್ಷತೆವಹಿಸಿದ್ದರು. ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಲಕ್ಷ್ಮೀ ಬನಸೋಡೆ ನಿರೂಪಿಸಿದರು. ಉಪನ್ಯಾಸಕಿ ಶೃತಿ ಪಾಟೀಲ ಪ್ರಾರ್ಥನಾ ಗೀತೆ ಹಾಡಿದರು. ಪ್ರೀಯಂಕಾ ಶಿರಶ್ಯಾಡ ಸ್ವಾಗತಿಸಿದರು. ಪ್ರಶಾಂತ ಹಿರೇಮಠ ವಂದಿಸಿದರು.
ಇಂಡಿ: ಪಟ್ಟಣದ ಜಿ.ಆರ್.ಗಾಂದಿ ಕಲಾ ಮಹಾ ವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಶೃತಿ ಬಿರಾದಾರ ಮಾತನಾಡಿದರು