ಇಂಡಿ : ಪ್ರಂಪಂಚದಲ್ಲಿರುವ ಯಾವುದೇ ಒಂದು ಪರಿವಾರ, ಸಮಾಜ,ಅಥವಾ ದೇಶ ಉದ್ದಾರವಾಗಬೇಕಾದರೆ
ಮೊದಲು ಅಲ್ಲಿನ ಹಣ್ಣು ಮಕ್ಕಳು ಉದ್ದಾರವಾಗಬೇಕು. ಅವರು ಕಂಡ ಕನಸುಗಳು ನನಸಾಗಬೇಕು ಇಲ್ಲದಿದ್ದರೆ ಅವರ ಕಳಕಳಿಯ ಶಾಪ ಇಡೀ ರಾಷ್ಟ್ರಕ್ಕೆ ತಟ್ಟುವುದು ಎಂದು ಸಾಹಿತಿ ಶಿಕ್ಷಕ ದಶರಥ ಕೋರಿಯವರು ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯ ನಿಮಿತ್ಯ ಶಿಶು ಅಭಿವೃದ್ಧಿ ಇಲಾಖೆಯ ವತಿಯಿಂದ ಹಮ್ಮಿಕೊಂಡ ಜಾಥಾದಲ್ಲಿ ಮಾತನಾಡಿದರು.
ಪಟ್ಟಣದ ಸಿಡಿಪಿಒ ಕಛೇರಿ ಆವರಣದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲತಃ ಮನುಷ್ಯ ನಾಗರಿಕತೆಯ ಕಾಲದಲ್ಲಿ ಮಾತೃ ಪ್ರಧಾನ ಸಮಾಜ ಅಸ್ತಿತ್ವದಲ್ಲಿತ್ತು.ಆ ಕಾಲದ ಪುರುಷ ಚಿತ್ತ ಪ್ರಮುಖವಾಗಿ ಆತ ಸಮ ಸಮಾಜ ನಿರ್ಮಾಣ ಮಾಡದೆ ಅದನ್ನು ಪುರುಷ ಪ್ರಧಾನ ಸಮಾಜ ನಿರ್ಮಾಣ ಮಾಡಿ ವಿಶ್ವದ ದಾರಿ ತಪ್ಪಿಸಿದ್ದಾನೆ. ಸಂಪೂರ್ಣ ಸಮ ಸಮಾಜ ಮಾಡುವಲ್ಲಿ ಎಡವಿದ ಮನುಷ್ಯ ಈಗಲೂ ನೆಮ್ಮದಿಯಾಗಿಲ್ಲ.ಈಗಲೂ ಮಾತೃ ಸಮಾಜದ ಕುರುಹಗಳನ್ನು ಮಾತೃದೇವತೆಯನ್ನು ಪ್ರಧಾನವಾಗಿಟ್ಟು ಕೊಂಡು ಆರಾಧಿಸುವ ಪೂಜಿಸುವ ಛಾಯೆ ಹಲವಾರು ಸಮುದಾಯಗಳ ಸಮಾಜದಲ್ಲಿ ಕಾಣಬಹುದಾಗಿದೆ. ಎಂದರು
ತತ್ವಜ್ಞಾನಿಯ ಪ್ರಕಾರ ಸಮಾಜದಲ್ಲಿರುವ ಹಲವಾರು ಕುಟುಂಬಗಳ ಕಲಹಗಳಲ್ಲಿ ಸ್ತ್ರೀ ಸಮೂಹವನ್ನು ಸಹಸ್ರಾರು ವರ್ಷಗಳಿಂದ ಶೋಷಣೆ,ದಬ್ಬಾಳಿಕೆ ಮಕ್ಕಳ ಕಳ್ಳ ಸಾಗಾಣಿಕೆ,ಅವುಗಳ ಮಾರಾಟ ಭ್ರೂಣಹತ್ಯೆ, ಲೈಂಗಿಕ ಶೋಷಣೆ,ಹೆಣ್ಣು ಶಿಶುಗಳ ಅನಾಧಾರ ಮಾಡುವಿಕೆ ಪರಿಣಾಮದ ಕಾರಣದಿಂದ ಅದಲ್ಲದೇ ಅವರಲ್ಲಿರುವ ಇಚ್ಚಾ ಸಂಕಲ್ಪವನ್ನು ಹರಣ ಮಾಡಿದ ಘೋರ ಪರಿಣಾಮ ವರ್ತಮಾನದಲ್ಲಿ ಇಂದು ಹಲವಾರು ದೇಶಗಳ ಹಿನ್ನಡೆಗಳ ಕಾರಣಗಳಲ್ಲಿ ಒಂದಾಗಿದೆ ಎಂದರು.
ಪುರಾಣದ ವಾಣಿಯಾಗಿರುವ ಯತ್ರ ನಾರ್ಯಂತೋ ಎನ್ನುವ ಪೂಜನೀಯ ಅಮರವಾಣಿ ಇಂದು ಅದು ಬರೀ ಅಮರವಾಣಿಯಾಗಿದೆ. ಆ ಪವಿತ್ರ ವಾಣಿ ಇಂದು ದೇಶದಲ್ಲಿ ಅನುಪಾಲನೆಯಾದರೇ ಪ್ರತಿಯೊಂದು ಕುಟುಂಬ,ಸಮಾಜ ದೇಶ ಉದ್ದಾರವಾಗಲು ಮಾತ್ರ ಸಾಧ್ಯ.
ಇಂದು ವಿಶ್ವದಲ್ಲಿ ಮುಂದುವರೆದ ರಾಷ್ಟ್ರದ ಹಣೆಪಟ್ಟಿ ಹೊತ್ತಿರುವ ದೇಶ ಅಮೇರಿಕಾದಿಂದ ಹಿಡಿದು ಪುಟ್ಟ ರಾಷ್ಟ್ರ ಶ್ರೀಲಂಕಾದವರಿಗೂ ಯಾವ ದೇಶದಲ್ಲಾಗಲಿ ಸ್ತ್ರೀ ಕುಲವನ್ನು ಯಾಂತ್ರಿಕವಾಗಿ ಕಂಡು ಅಲ್ಲಿನ ಜನರು ಎಲ್ಲಾ ರೀತಿಯ ಹಿಂಸೆ,ಬಲತ್ಕಾರದ ಬಾಹುಗಳನ್ನು ಚಾಚುತ್ತಾರೋ ಅಲ್ಲಿನ ಪ್ರಕೃತಿ ಪರಿಸರ ನೆಲ ಜಲ ಗಾಳಿ ಅಗ್ನಿ ವಾಯು ಭೂದೇವಿ ಆ ದೇಶವನ್ನು ಅಭಿವೃದ್ಧಿ ಶೀಲ ರಾಷ್ಟ್ರವಾಗುವಲ್ಲಿ ತಥಾಸ್ತು ಹೇಳುವದಿಲ್ಲ. ಈ ನಿಟ್ಟಿನಲ್ಲಿ ಪ್ರತಿ ಜವಾಬ್ದಾರಿ ಹೊತ್ತ ನಾಗರಿಕ ಹೆಣ್ಣು ಮಗುವಿನ ಶೈಕ್ಷಣಿಕ ಸಾಮಾಜಿಕ ಬೌದ್ದಿಕ ಆದ್ಯಾತ್ಮಿಕ ಬೆಳವಣಿಗೆಗೆ ಪೂರಕವಾಗಿ ಸೇವೆ ಸಲ್ಲಿಸಬೇಕು ಎಂದರು.
ಪಿ ಎಸ್ ಐ ರೇಣುಕಾ ಹಳ್ಳಿ ಹಾಗೂ ಸಿಡಿಪಿಒ ಗೀತಾ ಗುತ್ತರಗಿಮಠ ಮಾತನಾಡಿದರು.