ಮಸ್ಕಿ: ಬೇಸಿಗೆಯ ರಣಬಿಸಿಲು ಶುರುವಾಗಿದೆ. ಮೂಕಪ್ರಾಣಿ-ಪಕ್ಷಿಗಳು ನೀರು ಆಹಾರ ಸಿಗದೇ ಪರದಾಡುತ್ತಿವೆ. ಈ ಹಿನ್ನಲೆಯಲ್ಲಿ ಪ್ರಕೃತಿ ಫೌಂಡೇಷನ್ ವತಿಯಿಂದ ಮಸ್ಕಿ ತಾಲ್ಲೂಕಾದ್ಯಂತ 5 ಸಾವಿರ ಮಣ್ಣಿನ ಮಡಿಕೆ ಹಾಗೂ ಡಬ್ಬಗಳಲ್ಲಿ ನೀರು ಆಹಾರವನ್ನು ಇಟ್ಟು ಪ್ರಾಣಿ-ಪಕ್ಷಿಗಳನ್ನು ರಕ್ಷಣೆ ಮಾಡುವ ಅಭಿಯಾನ ಕೈಗೊಂಡಿದೆ.
ಇಂದು ಗೌಡನಬಾವಿ ಶ್ರೀ ಕಟ್ಟೆ ಬಸವಲಿಂಗೇಶ್ವರ ಶ್ರೀಗಳು ಈ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಇಂದಿನಿಂದ ಮಸ್ಕಿ ತಾಲೂಕಿನ ಎಲ್ಲಾ ಹಳ್ಳಿ, ಗ್ರಾಮ, ಪಟ್ಟಣಗಳಲ್ಲಿ ಪ್ರಕೃತಿ ಫೌಂಡೇಶನ್(ರಿ) ಮಸ್ಕಿ ವತಿಯಿಂದ ಮಣ್ಣಿನ ಮಡಿಕೆಗಳನ್ನು ಕಟ್ಟಿ ಅದರಲ್ಲಿ ನೀರು ಆಹಾರವನ್ನು ಇಟ್ಟು ಪ್ರಾಣಿ- ಪಕ್ಷಿಗಳನ್ನು ರಕ್ಷಣೆ ಮಾಡುವ ಈ ಅಭಿಯಾನಕ್ಕೆ ಎಲ್ಲಾ ಪರಿಸರಪ್ರೇಮಿಗಳು, ಪಕ್ಷಿ ಪ್ರೇಮಿಗಳು ಸಹಕರಿಸಿ ಕೈಜೋಡಿಸಿದ್ದಾರೆ.
ಪ್ರಾಣಿ ಪಕ್ಷಿಗಳ ರಕ್ಷಣೆ ಅಭಿಯಾನದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದ ಗೌಡನಬಾವಿ ಶ್ರೀಗಳಿಗೂ ಹಾಗೂ ಊರಿನ ಸಹೋದರರಿಗು ಫೌಂಡೇಶನ್ನಿನ ಪದಾಧಿಕಾರಿಗಳು ಧನ್ಯವಾದಗಳನ್ನು ಅರ್ಪಿಸಿದ್ದಾರೆ.