ಬೊಳೆಗಾಂವ ಗ್ರಾಮದಲ್ಲಿ ನಂದಿ ಬಸವೇಶ್ವರ ಜಾತ್ರೆ..!
ಇಂಡಿ : ಸತ್ತ ಮೇಲೆ ಏನನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ಇರುವುದರೊಳಗೆ ಸಮಾಜದಲ್ಲಿ ಉತ್ತಮ ಕಾರ್ಯಗಳು ಮಾಡಬೇಕು. ಉತ್ತಮ ನೆಮ್ಮದಿ ಬದುಕಿಗಾಗಿ ಜೀವನದಲ್ಲಿ ಶ್ರದ್ದೇ, ಭಕ್ತಿಯಿಂದ ದೇವರ ಸ್ಮರಣೆ ಮಾಡಬೇಕು ಎಂದು ಹಿರೇಮಠ ತಡವಲಗಾ ಸ್ವಾಮೀಜಿ, ರಾಚೋಟೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿ ಹೇಳಿದರು.
ತಾಲ್ಲೂಕಿನ ಬೊಳೆಗಾಂವ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರಾವಣ ಮಾಸದಲ್ಲಿ ನಂದಿ ಬಸವೇಶ್ವರ ಜಾತ್ರೆಯ ಪ್ರಯುಕ್ತ ಅಡ್ಡ ಪಲ್ಲಕ್ಕಿ ಹಾಗೂ ಕಳಸಾರೋಹಣ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿದವು.
ಇನ್ನೂ ಜಾತ್ರೆಯಲ್ಲಿ ಚಿತ್ರ ವಿಚಿತ್ರ ಮದ್ದುಗಳ ಸುಡುತ್ತಾ ಪಲ್ಲಕ್ಕಿ ಮೆರವಣಿಗೆ ಹಾಗೂ ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಚಂದ್ರಶೇಖರ ಹಿರೇಮಠ ಅವರ ಶ್ರವಣ ದೋಷವುಳ್ಳ ಮಕ್ಕಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ನೃತ್ಯ ರಸಮಂಜರಿ, ನಾಟಕ ಕಾರ್ಯಕ್ರಮವು ಅತಿ ವಿಜ್ರಂಭಣೆಯಿಂದ ಜರುಗಿದವು.
ಇನ್ನೂ ಬಸವಣ್ಣನವರ ಬಗ್ಗೆ ಉಪನ್ಯಾಸ ಪ್ರಭು ಸಾರವಾಡ ನೀಡಿದರು.
ಕಾರ್ಯಕ್ರಮ ಉದ್ಘಾಟನೆ ಡಿ.ಬಿ. ಚಾಂದಕವಟೆ, ಅಧ್ಯಕ್ಷತೆ ಡಾ. ಜಿ.ಕೆ.ಮಿರಗಿ ಹಾಗೂ ಹಣಮಂತ ಗುಂಜುಟಗಿ, ಕಾಶಿನಾಥ್ ನೆರಿವೆರಿಸಿದರು.
ಕಾರ್ಯಕ್ರಮದಲ್ಲಿ ಬಸಲಿಂಗಯ್ಯ ಹಿರೇಮಠ, ಶಿವಶಂಕರ್ ಕಪ್ಪೆನವರ, ನಿವೃತ್ತ ಯೋಧ ಸೋಮಶೇಖರ್ ಕೋಟೆನವರ, ರಾಜು ಹುಣಸಗಿ, ದತ್ತಾತ್ರೇಯ ತಾರಾಪುರ್, ಮಲ್ಲು ಹುಣಸಗಿ, ಅಭಿಯಂತರ ಈರಣ್ಣ ಇಂಡಿ, ಬಸವರಾಜ್ ಹೊನ್ನಳ್ಳಿ, ಸಿದ್ದು ಹುಣಶಾಳ, ಸೋಮನಿಂಗ ಸಿದ್ದಾಪುರ, ಚಂದು ಏಳೆಗಾ೦ವ, ಮಲ್ಲು ಮಿರಗಿ, ರಾಜು ಗೊಳ್ಳಗಿ, ಸಾಹೇಬಣ್ಣ ಗುಂಜಟಗಿ, ಗಣಪತಿ ನಾಗಶೆಟ್ಟಿ , ಮುದುಕಪ್ಪ ತಳವಾರ ಹಾಗೂ ಗ್ರಾ.ಪಂ ಸದಸ್ಯ ಮಾದೇವಪ್ಪ ಹುಣಸಗಿ, ದಯಾನಂದ್ ಮಿರಗಿ, ಈರಣ್ಣ ಕಪ್ಪೇನರವರ, ಸಂತೋಷ್ ಗೋಳಗಿ, ಶಿವಾನಂದ್ ಪೂಜಾರಿ, ಮಲ್ಲಪ್ಪ ಗೌಡ್ ಬಿರಾದಾರ , ಚಂದ್ರಶೇಖರ್ ಮಿರ್ಗಿ, ಹೊನಮಲ್ಲ ಕಪ್ಪೆನವರ, ಬಲವಂತರಾಗೌಡ್ ಬಿರಾದಾರ ಇನ್ನೂ ಅನೇಕರು ಪಾಲ್ಗೊಂಡಿದ್ದರು. ನಿರೂಪಣೆ ಪ್ರಶಾಂತ್ ತಳವಾರ(ಶಿಕ್ಷಕರು) ಸ್ವಾಗತ ಹಾಗೂ ವಂದನಾರ್ಪಣೆ ರಮೇಶ್ ಮುಂಜಣ್ಣಿ (ಶಿಕ್ಷಕರು) ನೆರವೇರಿಸಿದರು..