ಮಿನಿ ಬೌಂಡರಿ ಕ್ರಿಕೆಟ್ ಲೀಗ್ ಪಂದ್ಯಾವಳಿಗೆ ನಾಡಗೌಡ ಚಾಲನೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ನಗರದ ಹುಡ್ಕೋ ಕಾಲೋನಿಯಲ್ಲಿ ಮಿನಿ ಬೌಂಡರಿ ಕ್ರಿಕೆಟ್ಲೀ ಗ್ ಪಂದ್ಯಾವಳಿಗೆ ರವಿವಾರ ಚಾಲನೆ ನೀಡಲಾಯಿತು.ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅವರು ಪಂದ್ಯಾವಳಿ ಉದ್ಘಾಟಿಸಿದರು.
ಐಎನ್ ಬಿಸಿಎಫ್‌ಡಬ್ಲ್ಯುಎಫ್ ಮತ್ತು ಕರ್ನಾಟಕ ಭೀಮ್ ಸೇನೆಯ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಸಂಗೀತಾ ನಾಡಗೌಡ ಅವರು ಬ್ಯಾಟಿಂಗ್ ಮಾಡುವ ಮೂಲಕ ಮೊದಲ ಪಂದ್ಯಕ್ಕೆ ಚಾಲನೆ ನೀಡಿದರು.
ಈ ವೇಳೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ, ಸಮಾಜ ಸೇವಕ ಡಾ। ತಾರಾಘರ, ಯುವ ಕಾಂಗ್ರೆಸ್ ಮುಖಂಡ ಸುಚಿತ್ ಚಳಗೇರಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹ್ಮದರಫೀಕ ಶಿರೋಳ, ಪುರಸಭೆ ಆಶ್ರಯ ಕಮಿಟಿ ನಾಮನಿರ್ದೇಶಿತ ಸದಸ್ಯ ಈರಣ್ಣ ಪತ್ತಾರ, ಯಾಸೀನ್ ಅತ್ತಾರ, ದಾವಲ್ ಗೊಳಸಂಗಿ, ಬಾಗಲಕೋಟ, ಗಂಗಾರಾಮ ಸೀತಾರಾಮ ರಾಠೋಡ, ಗಣಿ, ರಾಘು ಕುಂದರಗಿ, ರಮಜಾನ ನದಾಫ್, ಯಲ್ಲಪ್ಪ ಮ್ಯಾಗೇರಿ, ತೌಫಿಕ್ ಮೊಕಾಶಿ, ಜಾಕಿರ್ ಢವಳಗಿ, ಮಕಾನದಾರ, ಅಡವಯ್ಯ ಹಿರೇಮಠ, ಸುಹೆಬ್ ಪಟೇಲ ಸೇರಿದಂತೆ ಉಪಸ್ಥಿತರಿದ್ದರು.