ಮೋದಿ ಪ್ರಧಾನಿಯಾಗಲು ನನ್ನ ಗೆಲುವು ಅತ್ಯವಶ್ಯಕ ಎಸ್ ಬಾಲರಾಜ್
ಹನೂರು :ದೇಶಕ್ಕೆ ಮತ್ತೊಮ್ಮೆ ನರೇಂದ್ರ
ಮೋದಿಯವರು ಪ್ರಧಾನಿಯಾಗುವುದು ದೇಶಕ್ಕೆ ಅನಿವಾರ್ಯವಾಗಿದೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿಯಾದ ಎಸ್.ಬಾಲರಾಜ್ ಅವರು ಪ್ರಕಟಿಸಿದ್ದಾರೆ .
ಹನೂರು ಪಟ್ಟಣದ ಹೊರವಲಯದಲ್ಲಿರುವ ಶ್ರೀ ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಾರ್ಟಿ ಹನೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಆಯೋಜಿಸಿದ್ದ ಚಾಮರಾಜನಗರ ಲೋಕಸಭಾ ಚುನಾವಣೆ 2024 ರ ಕೂಟವನ್ನು ಉದ್ದೇಶಿಸಿ ಅವರು ನರೇಂದ್ರ ಮೋದಿ ಅವರು ಗುಜರಾತ್ ರಾಜ್ಯದಲ್ಲಿ ಮೂರು ಭಾರಿ ಸಿ ಎಂ ಆದರು ಮತ್ತು ದೇಶದ ಎರಡುಬಾರಿ ಪ್ರಧಾನಿಯಾಗಿ ಮತ್ತೊಮ್ಮೆ ಮೂರನೆ ಬಾರಿಗೆ ಪ್ರಧಾನಿ ಆಗಲು ದೇಶದ ಜನತೆಗೆ ಕಾತರ. ಪ್ರಾಯವಾದ3 ಕಾಶ್ಮೀರಕ್ಕೆ 70 ಕಾಯ್ದೆ ಜಾರಿಗೆ ತಂದವರು. ಹಿಂದೆ ಬರಿ ಗುಂಡಿನ ಸದ್ದು ಕೆಳಾಯಿತು. ಈಗ ಅಲ್ಲಿ ನಮ್ಮ ಹಿಂದು ದೇವಾಲಯದ ಗಂಟೆಗಳು ಸದ್ದು ಆಗುತ್ತಿದೆ. ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಚಾಮರಾಜನಗರ ಕ್ಷೇತ್ರ ಎಲ್ಲಾ ಕ್ಷೇತ್ರಗಳಿಗೆ ಒಪ್ಪಿಗೆ ಸೂಚಿಸಲಾಗಿದೆ. ಮುಖ್ಯವಾಗಿ ಯಡಿಯೂರಪ್ಪ ಅವರನ್ನು ಸ್ಮರಿಸುತ್ತೇನೆ ಎಂದು ಹೇಳಿದರು.ನಮ್ಮ ತಂದೆ ತಾಯಿಗಳು ತಮ್ಮ ಜೀವನದ ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದರು. ಅದೇ ರೀತಿಯಲ್ಲಿ ನಾನು ಸಹ ಸಾರ್ವಜನಿಕ ಜೀವನದಲ್ಲಿದ್ದೇನೆ .
ನನಗೆ ಕಾಂಗ್ರೇಸ್ ನಿಂದ ಅನ್ಯಾಯವಾಗಿದೆ, ಅಲ್ಲಿ ಜೀತ ಮಾಡಿದ್ದು ಸಾಕಾಗಿತ್ತು . ನಮ್ಮ ಗುರುಗಳಾದ ರಾಜಶೇಖರ್ ಮೂರ್ತಿ ಮತ್ತು ನಮ್ಮ ನಾಯಕರಾದ ಯಡಿಯೂರಪ್ಪನವರ ಆರ್ಶಿವಾದದಿಂದ ಬಿಜೆಪಿ ಪಕ್ಷವು ನನ್ನ ಕೈ ಹಿಡಿಯುವ ವಿಶ್ವಾಸದಿಂದ ಬಿಜೆಪಿಗೆ ಬಂದೆ.ಅದರಿಂದ ಕ್ಷೇತ್ರದ ಜನತೆ ನನ್ನನ್ನು ಆಶೀರ್ವದಿಸಬೇಕು ,ನಾನು ಯಾವುದೇ ಜಾತಿಗೆ ಸೀಮಿತವಾದವನಲ್ಲ ನಮ್ಮ ಪಕ್ಷಕ್ಕೆ ನಮ್ಮ ಜಾತಿ ನನಗೆ ಮತ ನೀಡಿ ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ಮಾತನಾಡಿ, ಬಾಲರಾಜ್ ಉತ್ತಮ ಅಭ್ಯರ್ಥಿಯಾಗಿದ್ದಾರೆ. ಸಿದ್ದರಾಮಯ್ಯ ನವರ ಹಲವಾರು ಯೋಜನೆಗಳು ಚುನಾವಣಾ ನಂತರ ವಿಫಲವಾಗಲಿವೆ. ದಲಿತರಿಗೆ ಮಿಸಲಿರಿಸಿದ ಹಣವನ್ನು ಬೇರೆಯ ಕಾರ್ಯಕ್ರಮಗಳಿಗೆ ವಿನಿಯೋಗಿಸಿದ ಅವರು ನಿಜವಾದ ದಲಿತ ವಿರೋಧಿ ಸರ್ಕಾರ, ಯುವಕರಿಗೆ ವಂಚಿಸಿದ ಸರ್ಕಾರ ಎಂದು ಪ್ರಕಟಿಸಿದರು .
ಡಾ ದತ್ತೇಶ್ ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾದ ಪ್ರಕಾರ ಮನ್ ಕಿ ಭಾತ್ ಕಾರ್ಯಕ್ರಮದಲ್ಲಿ ಹಲವಾರು ಕಾರ್ಯಕ್ರಮಗಳು ನಡೆದಿವೆ .ನಮಗೆ ಮೊದಲು ಬೂತ್ ನಂತರ ಬಾಲರಾಜ್ ಅದಾದ ಮೇಲೆ ಮೋದಿಯವರು ಗೆದ್ದ ಪ್ರಪಂಚವನ್ನು ಗೆದ್ದಂತೆ ಅದು ಅತ್ಯಂತ ಹೆಚ್ಚಿನ ಅಂತರದಲ್ಲಿ ಗೆಲ್ಲುತ್ತದೆ ಎಂದು ಪ್ರಕಟಿಸಿದರು .
ಮಾಜಿ ಶಾಸಕಿ ಪರಿಮಳ ನಾಗಪ್ಪರ ಪುತ್ರರಾದ
ಡಾಕ್ಟರ್ ಪ್ರೀತನ್ ನಾಗಪ್ಪ ಮಾತನಾಡಿ ದೇಶ ಸೇವೆಯಲ್ಲಿ ಮೋದಿಯವರ ಹತ್ತು ವರ್ಷದ ಸಾಧನೆಯನ್ನು ಪ್ರತಿ ಮನೆ ಮನೆಗೆ ಪ್ರಚಾರ ಮಾಡಿ ಮತಯಾಚನೆ ಮಾಡಿ ನಾವೆಲ್ಲರೂ ನಿಮ್ಮ ಜೊತೆಯಲ್ಲಿ ಇರುತ್ತೆವೆ ,ಕಾರ್ಯಕರ್ತರಿಗೆ ಒಬ್ಬ ಉತ್ತಮ ಅಭ್ಯರ್ಥಿ ಸಿಕ್ಕಿದ್ದಾರೆ ಅವರಿಗೆ ನಮ್ಮ ಹನೂರು ಕ್ಷೇತ್ರದಲ್ಲಿ ಇಡೀ ಲೋಕಸಭಾ ಪ್ರಚಾರ ಮಾಡಿ ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲುವ ಪ್ರಯತ್ನವನ್ನು ಮಾಡಲಾಗುವುದು.
ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಚುನಾವಣೆ ಉಸ್ತು ಜಿಲ್ಲಾ ಸಂಚಾಲಕ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಒಬಿಎಸ್ ಮೋರ್ಚಾ ವೆಂಕಟೇಶ್, ರಾಷ್ಟ್ರೀಯ ಪರಿಷತ್ ಸದಸ್ಯ ವೆಂಕಟಸ್ವಾಮಿ, ವೆಂಕಟೇಗೌಡ ನಿಶಾಂತ್, ಹನೂರು ಮಂಡಲ ಅಧ್ಯಕ್ಷರಾದ ವೃಷಬೇಂದ್ರ ಮಲೆ ಮಹದೇಶ್ವರಬೆಟ್ಟ ಮಂಡಲದ ಅಧ್ಯಕ್ಷ ರಾಜು, ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ : ಚೇತನ ಕುಮಾರ್ ಎಲ್, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ