ಯುವಕರು ದೇಶದ ಸಂಪತ್ತು ,ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ: ಶಾಸಕ ಎಂಆರ್ ಮಂಜುನಾಥ್
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು:ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 79ನೇ
ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತಾಲೂಕು ದಂಡಾಧಿಕಾರಿ ಚೈತ್ರ ರವರು ದ್ವಜಾರೋಹಣ ಹಾಗೂ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ನೆರವೇರಿಸಿ ಬಳಿಕ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹಲವು ಮಹನೀಯರ ಕೊಡುಗೆ ಇದೆ. ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ವೀರ ಯೋಧರು ಮತ್ತು ಹೋರಾಟಗಾರರನ್ನು ಸ್ಮರಣೆ ಮಾಡುವ ದಿನ ಇದಾಗಿದೆ. ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವ ಮೂಲಕ ದೇಶ ಪ್ರೇಮವನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕು. ಹನೂರು ಶೈಕ್ಷಣಿಕವಾಗಿ ಜಿಲ್ಲೆಯಲ್ಲೇ ಉನ್ನತ ಮಟ್ಟದ ಸಾಧನೆ ಮಾಡುತ್ತಿದೆ. ಈ ಮಹಾನ್ ಕಾರ್ಯದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ತಿಳಿಸಿದರು.
ಶಾಸಕರಾದ ಎಂಆರ್ ಮಂಜುನಾಥ್, ಮಾತನಾಡಿ ಪವಾಡ ಪುರಷ ,ಮಲೆ ಮಹದೇಶ್ವರ ನೆಲದಲ್ಲಿ ಸ್ವಾತಂತ್ರ್ಯದಿನಾಚರಣೆ ಬಹಳ ಅದ್ದೂರಿ ಆಚರಣೆಗೆ ಸಾಕ್ಷಿಯಾಗಿದ್ದು ಸಂತೋಷ ವಾಗಿದೆ. ಸ್ವಾತಂತ್ರಗಳಿಸಲು ಅನೇಕ ಮಹನೀಯರು ತಮ್ಮ ಪ್ರಾಣ ಮತ್ತು ಬಲಿದಾನವನ್ನು ಮಾಡಿದ್ದಾರೆ. ಸ್ವಾತಂತ್ರದ ನಂತರ ಡಾ. ಬಿ. ಆರ್. ಅಂಬೇಡ್ಕರ್ ಅವರ ನಾಯಕತ್ವದಲ್ಲೇ ರಚನೆಯಾದ ಸಂವಿಧಾನದ ಮೂಲಕ ಸದೃಢ ಭಾರತವಾಗಿ ನಿರ್ಮಾಣವಾಗಿದೆ.ದೇಶಕ್ಕೆ ಸ್ವತಂತ್ರ ತಂದು ಕೊಡಲು ಹೋರಾಟ ಮಾಡಿದ ಎಲ್ಲಾ ಪೂರ್ವಿಕರ ಶ್ರಮ ಅತ್ಯಂತ ಶ್ಲಾಘನೀಯವಾದದ್ದು. ಹಿರಿಯರ ಸಾಧನೆಯೇ ನಮಗೆ ಮಾರ್ಗದರ್ಶನ ಜಾತಿ ಮತ ಭೇದ ಬಾವವನ್ನು ಮರೆತು ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಿಸಲು ಸಮ ಸಮಾಜ ನಾಡು ಕಟ್ಟಲು ನಾವೆಲ್ಲ ಕೆಲಸ ಮಾಡೋಣ.
ಯುವಕರು ದೇಶದ ಸಂಪತ್ತು, ಕ್ಷೇತ್ರದ ಅಭಿವೃದ್ಧಿ ನನ್ನ ಗುರಿಯಾಗಿದೆ. ಗುಡ್ಡಗಾಡು ಪ್ರದೇಶ ಹೊಂದಿರುವ ಹಾಗೂ ಭೌಗೋಳಿಕವಾಗಿ ದೋಡ್ಡ ಕ್ಷೇತ್ರವಾಗಿದ್ದು ಸಮ ಸಮಾಜ ನಿರ್ಮಾಣ ಮಾಡಬೇಕಿದೆ. ಸಾಕಷ್ಟು ವಿಶಾಲತೆಯಲ್ಲಿರುವ ಕ್ಷೇತ್ರದಲ್ಲಿ ಯುವಕರನ್ನು ಸಾಧನೆಯತ್ತ ಕೊಂಡೋಯ್ಯುವ ಕೆಲಸ ಆಗಬೇಕಾಗಿದೆ.
ಕ್ಷೇತ್ರದ ರಸ್ತೆ ಅಭಿವೃದ್ದಿ 222ಕೋಟಿ ರೂ ಅನುದಾನವನ್ನು ಸರ್ಕಾರ ನೀಡಿದ್ದು ಮೊದಲನೇ ಬಾರಿಗೆ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಚಿಂತನೆ ನಡೆಸಿದ್ದೇನೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಹಳಷ್ಟು ರೈತರ ನೀರಿನ ಸಮಸ್ಯೆಯನ್ನು ನೀವಾರಿಸಲು ಯೋಜನೆಯನ್ನು ತಯಾರು ಮಾಡಲಾಗಿದೆ, ರಾಮನಗುಡ್ಡ ನೀರು ತುಂಬಿಸಲು ರೂಪು ರೇಷೆ ತಯಾರು ಮಾಡಲಾಗಿದೆ, ಹುಬ್ಬೆ ಹುಣಸೆ ನೀರಾವರಿ ಯೋಜನೆಯನ್ನು ದಕ್ಷಣ ಕರ್ನಾಟಕದಲ್ಲಿ ಏತ ನೀರಾವರಿ ಯೋಜನೆ ಲಕ್ಷಣಗಳು ಡಿಪಿರ್ 2.5ಕೋಟಿ ವೆಚ್ಚದಲ್ಲಿ ತಯಾರು ಮಾಡಲಿಗಿದೆ.
ಕ್ಷೇತ್ರದ ಎಲ್ಲೇಮಾಳ ಹನೂರು ಕೌದಳ್ಳಿ ಹೂಗ್ಯಂ ಕಡೆಗಳಲ್ಲಿ ಪವರ್ ಸ್ಟೇಷನ್ ನಿರ್ಮಾಣ ಮಾಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಈ ಭಾಗದ ರೈತರಿಗೆ ಅನುಕೂಲವಾಗಲೆಂದು ರಾತ್ರಿಯ ವೇಳೆ ಕರೆಂಟ್ ತೊಂದರೆ ಇರುವುದರಿಂದ ಬೆಳಿಗಿನ ಸಮಯ ದಲ್ಲಿ ಕರೆಟ್ ನೀಡಬೇಕು ಎನ್ನುವ ಉದ್ದೇಶದಿಂದ ಪವರ್ ಸ್ಟೇಷನ್ ಗಳನ್ನು ನಿರ್ಮಾಣಕ್ಕೆ ಮುಂದಾಗಿದ್ದೇನೆ.
ಕಳೆದ ಬಾರಿ ಹನೂರು ತಾಲ್ಲೂಕಿನ ಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಅತೀ ಕಡಿಮೆ ಫಲಿತಾಂಶ ಬಂದಿದೆ. ಆಗಾಗಿ ಸಂಬಂಧ ಪಟ್ಟ ಶಾಲಾ ಮುಖ್ಯ ಶಿಕ್ಷಕರಿಗೆ ಸಭೆ ಕರೆದು ಮುಂದಿನ ದಿನಗಳಲ್ಲಿ ಜಿಲ್ಲೆ ಗೆ ಪ್ರಥಮ ಸ್ಥಾನ ಗಳಿಸಬೇಕು ಎಂದು ಸೂಚನೆ ನೀಡಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆದಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಅನುಕೂಲವಾಗಿದೆ, ಹನೂರು ಆಸ್ಪತ್ರೆಯನ್ನು ಮೇಲ್ದಾರ್ಜೆಗೆ ಏರಿಸುವ ಮೂಲಕ ಅನುಕೂಲವಾಗಲಿದೆ. ಹಾಗೆಯೇ ಪಿಜಿ ಪಾಳ್ರ ಕೇಂದ್ರ ಒಡೆಯರ್ ಪಾಳ್ಯ ಸೇರಿದಂತೆ ಆರೋಗ್ಯ ಕೇಂದ್ರ ವಿಷಯದಲ್ಲಿ ಯಾವುದೆ ರಾಜಿ ಇಲ್ಲ. ಕ್ರೀಡಾಂಗಣ ಉನ್ನತ ಪಡಿಸಲು 6 ಕೋಟಿ ರೂ ವೆಚ್ಚದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂಬುದಾಗಿ ತಿಳಿಸಿದರು.
ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ
ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಅಂಜಲಿ ವಿ , ಪ್ರಿಯ ದರ್ಶಿನಿ, ಮತ್ತು ಸುಸೈನ ಈ ಮೂರು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಿದರು. 13 ವಿಶೇಷ ಚೇತನ ವಿದ್ಯಾರ್ಥಿಗಳಿಗೆ ವೀಲ್ ಚೇರ್ ವಿತರಣೆ ಮಾಡಲಾಯಿತು ಜೊತೆಗೆ ಸ್ವಚ್ಛತಾ ಕಾರ್ಮಿಕ ಮಹಿಳೆ ರಾಮಿ ಅವರಿಗೆ ಸನ್ಮಾನ ಮಾಡಲಾಯಿತು. ಅಗ್ನಿ ಶಾಮಕ ಸಿಬ್ಬಂದಿಯ ಅತುತ್ಯಮ ಸೇವೆಯನ್ನು ಗುರುತಿಸಿ ಪೆರಿಯ ನಾಯಗo ರವರನ್ನು ಶಾಸಕರು ಸನ್ಮಾನ ಮಾಡಿದರು.
ಇದೇ ವೇಳೆ ಈ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಸೆಸ್ಕಾಂನ ಸಿಬ್ಬಂದಿಯ ಪಥಸಂಚಲನವು ಸ್ವಾತಂತ್ರ್ಯೋತ್ಸವದ ಆಕರ್ಷಣೆಯನ್ನು ಹಿಮ್ಮಡಿ ಗೊಳಿಸಿತು.
ಸಾಂಸ್ಕೃತಿಕ ಕಾರ್ಯಕ್ರಮ
ಪಟ್ಟಣದ ವಿವಿಧ ಶಾಲೆಯ ಮಕ್ಕಳು ದೇಶಭಕ್ತಿ ಸಾರುವ ಗೀತೆಗಳಿಗೆ ಆಕರ್ಷಕ ನೃತ್ಯವನ್ನು ಪ್ರದರ್ಶಿಸಿದರು. ಕ್ರಿಸ್ತರಾಜ ಶಾಲೆ, ವಿವೇಕಾನಂದ ಶಾಲೆ,ಗೌತಮ ಶಾಲೆ, ಮಂಗಲ ಏಕಲವ್ಯ ಶಾಲೆ, ಜಿ. ವಿ.ಗೌಡ ಶಾಲೆ, ಬಿ. ಎಂ. ಜಿ.ಶಾಲೆ, ಹೋಲಿ ಏಂಜಲ್ ಶಾಲೆ ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿವಿಧ ದೇಶಭಕ್ತಿಯನ್ನು ಸಾರುವ ಗೀತೆಗೆ ಮನಮೋಹಕವಾಗಿ ನೃತ್ಯಗಳನ್ನು ಪ್ರದರ್ಶಿಸಿದ್ದು ನೋಡುಗರ ಕಣ್ಮನ ಸೆಳೆಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಇಒ ಉಮೇಶ್, ತಾಲೂಕು ವೈದ್ಯಾಧಿಕಾರಿ ಪ್ರಕಾಶ್, ಇನ್ಸ್ಪೆಕ್ಟರ್ ಆನಂದ್ ಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪಾಳ್ಯ ರಾಚಪ್ಪ, ಎ ಇ ಇ ರಂಗಸ್ವಾಮಿ,ಪಟ್ಟಣ ಪಂಚಾಯತಿ ಅಧ್ಯಕ್ಷೆ ಮುಮ್ತಾಜ್ ಬಾನು, ಉಪಾಧ್ಯಕ್ಷ ಆನಂದ್ ಕುಮಾರ್, ಪಟ್ಟಣ ಪಂಚಾಯತಿ ಸದಸ್ಯರಾದ ಪವಿತ್ರ ಪ್ರಸನ್ನ, ಹಾಗೂ ಸದಸ್ಯರುಗಳು, ಮುಖಂಡರುಗಳು, ಮತ್ತು ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಜರಿದ್ದರು.