ವಿಜಯಪುರ : ಗಂಡ ಹೆಂಡತಿ ಜಗಳ ಬಿಡಿಸಲು ಬಂದವನು ಕೊಲೆಯಾಗಿರುವ ಘಟನೆ ವಿಜಯಪುರದ ಗುರುಪಾದೇಶ್ವರ ನಗರದಲ್ಲಿ ನಡೆದಿದೆ. ಪರುಶರಾಮ ಅಬಟೇರಿ (30) ಮೃತಪಟ್ಟಿರುವ ದುರ್ದೈವಿ. ವಿಜಯಪುರದ ಖಾಸಗಿ ಕಂಪನಿಯಲ್ಲಿ ಪರಶುರಾಮ ಉದ್ಯೋಗಿದ್ದಾರೆ. ಕೆಇಬಿ ನಿವೃತ್ತ ನೌಕರ ಇಜೇರಿ ಎಂಬುವರ ಮನೆಯಲ್ಲಿ ಪರಶುರಾಮ ಬಾಡಿಗೆಯಾಗಿದ್ದರು. ಇಜೇರಿ ಹೆಂಡತಿ ಕಡೆಯ ಸಂಬಂಧಿಕರು ಆಕ್ರೋಶದಲ್ಲಿ ಚಾಕುವಿನಿಂದ ಹಲ್ಲೆ ಹಿನ್ನೆಲೆ ಅಸುನೀಗಿದ್ದಾರೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.