ವಿಜಯಪುರ : 10 ವರ್ಷದ ಹಿಂದೆ ನಡೆದ ಮಾರ್ಯಾದೆ ಹತ್ಯೆಯನ್ನು ಪೊಲೀಸರು ಭೇದಿಸಿದ್ದಾರೆ ಎಂದು ಎಸ್ಸಿ ಎಚ್‌ಡಿ ಆನಂದಕುಮಾರ ಮಾಹಿತಿ ನೀಡಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ಪ್ರಿಯಾಂಕಾ ಪಾಟೀಲ್ ಹತ್ಯೆಯಾದವಳು. ಇನ್ನು ಪ್ರಿಯಾಂಕಾ ಪತಿ ಹುಚ್ಚಪ್ಪಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಕಾರ್ ಚಾಲಕ ಉಮೇಶ ಕಮಲಾಪುರ ಬಂಧಿತ ಆರೋಪಗಳು. ಇನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಿಂದ ಆಂದ್ರಪ್ರದೇಶದ ನಿರ್ಜನ ಪ್ರದೇಶದಲ್ಲಿ ಪ್ರಿಯಾಂಕಾಳನ್ನು ಹತ್ಯೆಗೈದು ಪರಾರಿಯಾಗಿದ್ದರು. ಆದ್ರೇ, ಆರೋಪಿ ಹುಚ್ಚಪ್ಪಗೌಡ ಪಾಟೀಲ ಕುಡಿದ ನಶೆಯಲ್ಲಿ ನನ್ನ ಹೆಂಡತಿ ಪ್ರಿಯಾಂಕಾಳನ್ನು ಹತ್ಯೆ ಮಾಡಿರುವ ಮಾಹಿತಿಯನ್ನು ಬಾರ್‌ನಲ್ಲಿ ಹೇಳಿದ್ದಾನೆ. ಇದನ್ನೇ ಆಧರಿಸಿ ಕ್ರೈಂ ಪೊಲೀಸರು ಪ್ರಕರಣ ಭೇಸಿದ್ದಾರೆ. ಈ ಕುರಿತು ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.