ಇಂಡಿ : ಭೀಮಾತೀರದಲ್ಲಿ ಹಾಡುಹಗಲೇ ಶಾಲಾ ಶಿಕ್ಷಕಿಯ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಅಂಜುಮನ್ ಕಾಲೇಜು ರಸ್ತೆಯಲ್ಲಿ ಮಂಗಳವಾರ ನಡೆದಿದೆ. 48 ವರ್ಷದ ದಿಲಶಾದ್ ಹವಾಲ್ದಾರ್ ಹತ್ಯೆಯಾದವರು. ಅಲ್ಲದೇ, ಇವರ ಮಗನ ಮೇಲೂ ಹರಿತವಾದ ಆಯುಧದಿಂದ ದುಷ್ಕರ್ಮಿಗಳು ಹಲ್ಲೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಇಂಡಿ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.