ಭೀಮಾತೀರ : ಓರ್ವನ ಬರ್ಬರ ಹತ್ಯೆಗೈದು ದುಷ್ಕರ್ಮಿಗಳು ಎಸ್ಕೇಪ್..!
ವಿಜಯಪುರ: ಹಳೆ ದ್ವೇಷ ಹಾಗೂ ಹಣದ ವ್ಯವಹಾರ ಹಿನ್ನೆಲೆ ಭೀಮಾತೀರದಲ್ಲಿ ಓರ್ವನ ಬರ್ಬರ ಹತ್ಯೆಗೈದು ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಬಬಲೇಶ್ವರ ರಸ್ತೆಯಲ್ಲಿ ನಡೆದಿದೆ. ಆಯುಧದಿಂದ ಹೊಡೆದು ಪರಶುರಾಮ ಮ್ಯಾಕೇರಿ 22 ಹತ್ಯೆ ಮಾಡಲಾಗಿದೆ. ಹತ್ಯೆಗೈದು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಎಸ್ಪಿ ಋಷಿಕೇಸ್ ಸೋನವಾಣೆ ಹಾಗೂ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಆಲಮೇಲ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.