ಇಂಡಿ: ಭಾರತ ದೇಶದ ಆದಿ ಕಾಲದ ಸಂಸ್ಕøತಿ ಇನ್ನೂ
ಉಳಿದಿದ್ದರೆ ಅದು ಮಠ-ಮಾನ್ಯಗಳಿಂದಲೇ. ದೇಶೀಯ
ಸಂಸ್ಕøತಿ, ಆಚಾರ-ವಿಚಾರಗಳನ್ನು ಮುಂದಿನ ಪೀಳೀಗೆಗೆ
ತಿಳಿಸುವ ಕಾರ್ಯ ಈ ಭಾಗದ ಬಹುತೇಕ ಮಠಗಳು
ಮಾಡುತ್ತಿವೆ ಎಂದು ನಿ. ಪ್ರಾಚಾರ್ಯೆ ಶೈಲಜಾ ಬಿರಾದಾರ
ಹೇಳಿದರು. ಅವರು ತಾಲೂಕಿನ ಶಿರಶ್ಯಾಡ ಸಂಸ್ಥಾನ ಹಿರೇಮಠದ ಲಿಂ. ಮುರುಘೇಂದ್ರ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ ಜಾತ್ರಾ ಮಹೋತ್ಸವ ಮತ್ತು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದ ನಿಮಿತ್ಯ ಶುಕ್ರವಾರ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು 1001 ಸುಮಂಗಲೆಯರಿಂದ ಕುಂಭ
ಮೆರವಣೆಗೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ
ಮಾತನಾಡಿದರು.
ಮಹಿಳೆಯರಿಗೆ ಉಡಿ ತುಂಬುವ ಮಲಕ ನಮ್ಮ ಹಳೇಯ
ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಲು ಮತ್ತು ಉಡಿ ತುಂಬುವ ಕಾರ್ಯಕ್ರಮದ ಬಗ್ಗೆ ಮಹಿಳೆಯರಿಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಪುಣ್ಯದ ಕೆಲಸವಾಗಿದೆ ಎಂದು ಅಭಿಪ್ರಾಯಪಟ್ಟರು.
ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ,
ಮಹಿಳೆಯರಿಗೆ ಉಡಿ ತುಂಬುವ ಪಧ್ಧತಿ ಭರತೀಯ
ಸಂಸ್ಕøತಿಯ ಪ್ರತೀಕ. ಹೀಗಾಗಿ ಇಂತಹ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು
ಬರಲಾಗುತ್ತಿದೆ. ಭಾರತೀಯ ಸಂಸ್ಕøತಿಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಇಂದಿನ ದಿನಮಾನಗಳಲ್ಲಿ ಯಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕುವಂತೆ ಪ್ರೇರೇಪಿಸಬೇಕು. ಶಾಲೆಯಲ್ಲಿ ಶಿಕ್ಷಕರಿಗೆ ಇರುವಷ್ಟು ಜವಾಬ್ದಾರಿ ಮನೆಯಲ್ಲಿ ಪಾಲಕರಿಗೂ ಇದೆ. ಅದರಲ್ಲಿ ತಾಯಿಯ ಪಾತ್ರ ಬಹಳಷ್ಟಿದೆ ಎಂದರು. ಶ್ರೀ ಶಾಂತಲಿಂಗ ಶಿವಾಚಾರ್ಯರರು ಸಾನಿಧ್ಯ ವಹಿಸಿದ್ದರು.
ಶಾಂತಾಬಾಯಿ ಯಶವಂತ ತೆಲಗ ಅಧ್ಯಕ್ಷತೆವಹಿಸಿದ್ದರು.
ಸಿಂದಗಿಯ ಹೇಮಾ ಹಿರೇಮಠ ಉಪನ್ಯಾಸ ನೀಡಿದರು. ಅಜೀತ ಹಿರೇಮಠ ದಂಪತಿಗಳು, ಗ್ರಾ.ಪಂ ಮಾಜಿ ಅಧ್ಯಕ್ಷೆ
ಸಿದ್ದಮ್ಮ ಬಿರಾದಾರ, ಬಾಬುಗೌಡ ಪಾಟೀಲ, ಶರಣು ಸಾಹುಕಾರ, ಮಲ್ಲಯ್ಯ ಮಠ, ಸಂಗಮೇಶ ಪಾಸೋಡಿ, ಶಿವಗೊಂಡ ಕಮತಗಿ, ಮಹಾದೇವ ತಡ್ಲಗಿ ಸೇರಿದಂತೆ ಐನೂರಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದರು.
ಇಂಡಿ: ಶುಕ್ರವಾರ ತಾಲೂಕಿನ ಶಿರಶ್ಯಾಡ ಗ್ರಾಮದ
ಶ್ರೀಮಠದಲ್ಲಿ ಮುತೈದೆಯರಿಗೆ ಉಡಿ ತುಂಬುವ
ಕಾರ್ಯಕ್ರಮ ಮತ್ತು 1001 ಸುಮಂಗಲೆಯರಿಂದ
ಕುಂಭ ಮೆರವಣೆಗೆ ಕಾರ್ಯಕ್ರಮ ನೆರವೇರಿತು.