ಪುರಸಭೆ ಸಾಮಾನ್ಯ ಸಭೆ ಸ್ಲಂ ಬೋರ್ಡ ಹಕ್ಕು ಪತ್ರ ನೀಡಿದ್ದಾರೆ . ಪುರಸಭೆಯವರು ಉತಾರೆ ನೀಡುತ್ತಿಲ್ಲ.
ಇಂಡಿ : ಪುರಸಭೆಯ ಸಾಮಾನ್ಯ ಸಭೆ ಪುರಸಭೆಯ ಸಭಾಭವನದಲ್ಲಿ ಅಧ್ಯಕ್ಷ ಲಿಂಬಾಜಿ ರಾಠೋಡ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಎಲ್ಲರನ್ನು ಸ್ವಾಗತಿಸಿದರು.
ಪಟ್ಟಣದ ವಿವಿಧ ಕಡೆ ಸ್ಲಂ ಬೋರ್ಡುದಿಂದ ಬಡವರಿಗೆ ಜಾಗ ನೀಡಿ ಹಕ್ಕು ಪತ್ರ ನೀಡಿದ್ದಾರೆ. ಆದರೆ ಪುರಸಭೆಯವರು ಉತಾರೆ ನೀಡಬೇಕು ಎಂಬ ಕುರಿತು ಸದಸ್ಯರಾದ ಅಸ್ಮಂ ಕಡಣ ಮತ್ತು ದೇವೆಂದ್ರ ಕುಂಬಾರ ಕೇಳಿದ್ದಕ್ಕೆ ಚರ್ಚೆ ನಡೆಯಿತು.
ಸದಸ್ಯ ಅನೀಲಗೌಡ ಬಿರಾದಾರ ಒಬ್ಬ ಸಿಬ್ಬಂದಿ ಪುರಸಭೆ ಕೆಲಸಕ್ಕೆ ಒಂದೂ ದಿನ ಬಂದಿಲ್ಲ ಆದರೂ ಕಳೆದ ಐದು ವರ್ಷದಿಂದ ಆತನ ಸಂಬಳ ನೀಡುತ್ತಿದ್ದಾರೆ ಎಂದು ಕೇಳಿದ ಪ್ರಶ್ನೆ ಕುರಿತು ಚರ್ಚೆ ನಡೆಯಿತು.
ಅದಲ್ಲದೆ ಪಟ್ಟಣದಲ್ಲಿ ಅನೇಕ ಕಡೆ ವಿದ್ಯುತ್ ಬಲ್ಬು ಸುಟ್ಟಿವೆ. ಕಳೆದ ಅನೇಕ ದಿನಗಳಿಂದ ಹಾಕಿಲ್ಲ, ಪುರಸಭೆಯ ಜಮಾ ಖರ್ಚು ಕಳೆದ ೬ ತಿಂಗಳಿAದ ಮಾಡಿಲ್ಲ ಎಂದು ಅನೀಲಗೌಡ ಕೇಳಿದ ಪ್ರಶ್ನೆಗೆ ಚರ್ಚೆ ನಡೆಯಿತು.
ಪ್ರತಿ ವಾರ್ಡನಲ್ಲಿ ಮೂರು ಟ್ಯಾçಕ್ಟರ ಗರ್ಸ ಹಾಕಬೇಕು ಎಂದು ಸದಸ್ಯ ಉಮೇಶ ದೇಗಿನಾಳ ಕೇಳಿದ ಪ್ರಶ್ನೆಗೆ ಕೆಲವು ವಾರ್ಡ ದೊಡ್ಡದಿದ್ದು ಅವುಗಳಿಗೆ ಹೆಚ್ಚಿನ ಗರ್ಸ ಹಾಕಬೇಕು ಎಂಬ ಕುರಿತು, ಅದಲ್ಲದೆ ಡ್ರೀನೇಜ ಸ್ವಚ್ಛತಾಗಾಗಿ ೯ ಲಕ್ಷ ವೆಚ್ಚದಲ್ಲಿ ಮಸೀನು ಖರೀದಿ ಮಾಡಿದ್ದು ಅದು ಬಳಸದೇ ಜಂಗು ಹಿಡಿದು ಚಾಲನೆಯಲ್ಲಿ ಇಲ್ಲ. ಹೀಗಾಗಿ ೬೦ ಲಕ್ಷ ರೂ ವೆಚ್ಚದಲ್ಲಿ ಜಟ್ಟಿಂಗ ಮಸೀನು ಖರಿದಿಸಲು ಕಳೆದ ಐದು ವರ್ಷದಿಂದ ಚರ್ಚೆ ನಡೆಯುತ್ತಿದೆ. ಆದರೆ ಖರಿದಿಸುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು.
ಸದಸ್ಯ ಇಸ್ಮಾಯಿಲ್ ಅರಬ ನಗರೋತ್ಥಾನ ಕೆಲಸ ಕಾಮಗಾರಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಮುಸ್ತಾಕ ಇಂಡಿಕರ, ವಿಜಯಕುಮಾರ ಮೂರಮನ, ಸೈಪನ ಪವಾರ, ಬನ್ನೆಮ್ಮ ಹದರಿ, ರೇಖಾ ಮೂರಮನ, ಶೈಲಜಾ ಪೂಜಾರಿ, ಕವಿತಾ ರಾಠೋಡ, ಜ್ಯೋತಿ ರಾಠೋಡ ಮತ್ತಿತರಿದ್ದರು.